ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದು, 1,037 ಕೇಸ್‍ಗಳು ಪತ್ತೆಯಾಗಿದೆ. ಓರ್ವ ಸೋಂಕಿನಿಂದ ಮರಣ ಹೊಂದಿದ್ದಾರೆ.
ಇಂದು 984 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರದಲ್ಲಿ 932 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ.
Advertisement
Advertisement
24,436 ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು, ಇಲ್ಲಿವರೆಗೂ 6,71,85,872 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣದ ಶೇ.4.24 ಮತ್ತು ಮರಣ ಪ್ರಮಾಣ ಶೇ.0.09 ದಾಖಲಾಗಿದೆ. ಇದನ್ನೂ ಓದಿ: ಆಷಾಢ ಮಾಸದಲ್ಲಿ ಚಾಮುಂಡೇಶ್ವರಿಗೆ ನಿಂಬೆ ಹಣ್ಣಿನ ಪೂಜೆ? – ಏನಿದರ ವಿಶೇಷತೆ?
Advertisement
ರಾಜ್ಯದಲ್ಲಿ ಇಂದು (08 ಜುಲೈ 2022 ರಾತ್ರಿ 9 ಗಂಟೆಯವರೆಗೆ) ನಡೆದ ಕೋವಿಡ್ ಲಸಿಕಾಕರಣದ ವಿವರಣೆ.https://t.co/wZR8maXcj6 @cmofKarnataka @mla_sudhakar @Comm_dhfwka @MDNHM_Kar @HubballiRailway @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/gniDCH7adQ
— K'taka Health Dept (@DHFWKA) July 8, 2022
Advertisement
ರಾಜ್ಯದಲ್ಲಿ ಇಂದು ಒಟ್ಟು 54,010 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 24,436 ಸ್ಯಾಂಪಲ್(ಆರ್‌ಟಿಪಿಸಿಆರ್ 17,496 + 6,943 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 01, ಬಳ್ಳಾರಿ 06, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 02, ಬೆಂಗಳೂರು ನಗರ 932, ಬೀದರ್ 01, ಚಿಕ್ಕಮಗಳೂರು 01, ದಕ್ಷಿಣ ಕನ್ನಡ 15, ದಾವಣಗೆರೆ 01, ಧಾರವಾಡ 19, ಗದಗ 01, ಹಾಸನ 04, ಹಾವೇರಿ 03, ಕೋಲಾರ 07, ಮೈಸೂರು 16, ರಾಯಚೂರು 02, ರಾಮನಗರ 01, ಶಿವಮೊಗ್ಗ 02, ತುಮಕೂರು 04, ಉಡುಪಿ 01, ಉತ್ತರ ಕನ್ನಡ 06 ಹಾಗೂ ಯಾದಗಿರಿ 01 ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿವೆ.