ಬೆಂಗಳೂರು: ನಿನ್ನೆಗೆ ಹೋಲಿಸಿದರೆ ಇಂದು ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿದ್ದು, ಯಾವುದೇ ಮರಣ ಪ್ರಮಾಣ ದಾಖಲಾಗಿಲ್ಲ.
ಇಂದು 1,127 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿಯೇ 1,053 ಜನರಿಗೆ ಕೊರೊನಾ ಹೆಚ್ಚು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಇಲ್ಲಿವರೆಗೂ 6,481 ಮಂದಿಗೆ ಕೊರೊನಾ ದೃಢವಾಗಿದೆ. ಆದರೆ ಇಂದು ಶೂನ್ಯ ಮರಣ ಪ್ರಮಾಣ ದಾಖಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಸೇರುವ ಯುವಕರಿಗೆ ದೈಹಿಕ ತರಬೇತಿ ಕೊಡಲು ನೆರವಾದ ಕೋಲಾರ ಕ್ರೀಡಾ ಸಂಸ್ಥೆ
Advertisement
Advertisement
26,437 ಜನರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು, ಇಲ್ಲಿವರೆಗೂ 6,71,34,350 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣ ಶೇ.4.26 ಮತ್ತು ಮರಣ ಪ್ರಮಾಣ ಶೇ.0.00 ದಾಖಲಾಗಿದೆ.
Advertisement
Advertisement
1,044 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 2,29,770 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 26,437 ಸ್ಯಾಂಪಲ್(ಆರ್‌ಟಿಪಿಸಿಆರ್ 18,716 + 7,721 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 01, ಬಳ್ಳಾರಿ 09, ಬೆಳಗಾವಿ 03, ಬೆಂಗಳೂರು ಗ್ರಾಮಾಂತರ 01, ಬೆಂಗಳೂರು ನಗರ 1,053, ಬೀದರ್ 02, ದಕ್ಷಿಣ ಕನ್ನಡ 13, ದಾವಣಗೆರೆ 01, ಧಾರವಾಡ 11, ಹಾಸನ 04, ಕಲಬುರಗಿ 04, ಕೋಲಾರ 01, ಮೈಸೂರು 13, ಶಿವಮೊಗ್ಗ 05, ತುಮಕೂರು 01, ಉಡುಪಿ 01 ಮತ್ತು ಉತ್ತರ ಕನ್ನಡ 01 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಾಜಿ ಚೆರಿಯನ್ ರಾಜೀನಾಮೆ