ಬೆಂಗಳೂರು: ರಾಜ್ಯದಲ್ಲಿ ಇಂದು 188 ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, 12 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
Advertisement
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದ್ದು, ರಾಜ್ಯದಲ್ಲಿ ಇಲ್ಲಿವರೆಗೂ ಒಟ್ಟು 4,207 ಕೇಸ್ ಪತ್ತೆಯಾಗಿದೆ. ಇಂದು 816 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೂ ರಾಜ್ಯದಲ್ಲಿ ಒಟ್ಟು 38,97,239 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣ ಶೇ. 0.45 ಇದೆ. ಮೃತಪಟ್ಟವರ ಶೇ. 6.38% ಇದೆ. ಇದನ್ನೂ ಓದಿ: 31 ತಿಂಗಳ ಕಾಲ ಮುಚ್ಚಿದ್ದ ಕಾಶ್ಮೀರ ಶಾಲೆಗಳು ಮತ್ತೆ ಆರಂಭ!
Advertisement
Advertisement
ಇಂದು ರಾಜ್ಯದಲ್ಲಿ ಒಟ್ಟು 79,512 ಜನರಿಗೆ ಲಸಿಕೆ ಹಾಕಲಾಗಿದೆ. ಬೆಂಗಳೂರಿನಲ್ಲಿಯೂ ಕೊರೊನಾ ಪ್ರಮಾಣ ಕಡಿಮೆಯಾಗಿದ್ದು, 106 ಜನರಿಗೆ ಕೊರೊನಾ ಕೇಸ್ ಪತ್ತೆಯಾಗಿದೆ. ಸೋಂಕಿನಿಂದ ಒಟ್ಟು 4 ಜನರು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ ರಾಜಧಾನಿಯಲ್ಲಿ 17,78,778 ಜನರಿಗೆ ಸೋಂಕು ಪತ್ತೆಯಾಗಿದೆ.
Advertisement
ಆರೋಗ್ಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 02, ಬಳ್ಳಾರಿ 00, ಬೆಳಗಾವಿ 04, ಗ್ರಾ.ಬೆಂಗಳೂರು 00, ನ.ಬೆಂಗಳೂರು 106, ಬೀದರ್ 00, ಚಾಮರಾಜನಗರ 01, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 04, ಚಿತ್ರದುರ್ಗ 02, ದಕ್ಷಿಣ ಕನ್ನಡ 02, ದಾವಣಗೆರೆ 05, ಧಾರವಾಡ 01, ಗದಗ 03, ಹಾಸನ 6, ಹಾವೇರಿ 0, ಕಲಬುರಗಿ 05, ಕೊಡಗು 03, ಕೋಲಾರ 03, ಕೊಪ್ಪಳ 00, ಮಂಡ್ಯ 03, ಮೈಸೂರು 09, ರಾಯಚೂರು 01, ರಾಮನಗರ 01, ಶಿವಮೊಗ್ಗ 06, ತುಮಕೂರು 03, ಉಡುಪಿ 07, ಉತ್ತರ ಕನ್ನಡ 05, ವಿಜಯಪುರ 00 ಮತ್ತು ಯಾದಗಿರಿಯಲ್ಲಿ 01 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ