ಬೆಂಗಳೂರು: ಕೊರೊನಾ (Corona) ಹೊಸ ರೂಪಾಂತರಿ BF.7 ತಳಿ ಪತ್ತೆ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳು (Private Hospital) ಆ್ಯಕ್ಟಿವ್ ಆಗಿದ್ದು, ಸರ್ಕಾರದಿಂದ (Government) ಖಾಸಗಿ ಆಸ್ಪತ್ರೆಗಳಿಗೆ ಬರಬೇಕಿರುವ ಕೋಟಿ, ಕೋಟಿ ರೂಪಾಯಿಗಾಗಿ ಪ್ರಶ್ನಿಸಿದೆ.
Advertisement
ಸರ್ಕಾರ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗಾಗಿ ಬೆಡ್ ಮೀಸಲಿಡುವಂತೆ ಮನವಿ ಮಾಡಿಕೊಂಡಿದೆ. ಈ ಬೆನ್ನಲ್ಲೇ ಮೊದಲು ಕಳೆದ ಬಾರಿ ನೀಡಿದ್ದ ಸೇವೆಯ ಬಿಲ್ ಕ್ಲಿಯರ್ ಮಾಡಿ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಫನಾ (Private Hospitals & Nursing Homes Association) ಬೇಡಿಕೆ ಇಟ್ಟಿದೆ. ಸರ್ಕಾರವೇ ಉಳಿಸಿಕೊಂಡಿರುವ ಬಾಕಿ ಬರೋದು ಯಾವಾಗ? ಕೂಡಲೇ ಬಿಲ್ ಕ್ಲಿಯರ್ ಮಾಡಿ ಎಂದು ಪಟ್ಟು ಹಿಡಿದಿದೆ. ಇದನ್ನೂ ಓದಿ: ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು
Advertisement
Advertisement
ಕೋವಿಡ್‍ನ ಮೊದಲ ಮೂರು ಅಲೆ ವೇಳೆ ಸರ್ಕಾರದ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಿದ್ದವು. ಈ ವೇಳೆ ಆಗಿದ್ದ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಒಟ್ಟು 150 ಕೋಟಿ ರೂಪಾಯಿ ಪಾವತಿಯಾಗಬೇಕಾಗಿದೆ. ಸರ್ಕಾರ ಸರಿಯಾದ ಬಿಲ್ ಪಾವತಿ ಮಾಡದೇ ಇರುವುದರಿಂದ ಕೆಲ ನರ್ಸಿಂಗ್ ಹೋಂಗಳ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರ ಹೊಡೆತ ಬಿದ್ದಿದೆ. ಈ ಹಿಂದೆ ಸರ್ಕಾರದ ಮೇಲಿನ ಭರವಸೆ ಹಾಗೂ ಒಪ್ಪಂದದಿಂದಾಗಿ ಖಾಸಗಿ ಆಸ್ಪತ್ರೆಗಳು ವೈದ್ಯಕ್ಯೀ ಸೌಲಭ್ಯ ನೀಡಿದ್ದವು. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಉರ್ದು ಪ್ರಾರ್ಥನೆ – ಪ್ರಾಂಶುಪಾಲ ಅಮಾನತು
Advertisement
ಆ ಬಳಿಕ ಇದೀಗ ಬಿಲ್ ಪಾವತಿ ವೇಳೆ ಸಣ್ಣಪುಟ್ಟ ಕಾರಣಗಳನ್ನು ನೀಡಿ ಬಿಲ್ ನೀಡೋಕೆ ಸರ್ಕಾರ ಒಪ್ಪತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಬಿಲ್ ಸರಿಯಾಗಿ ನೀಡಿಲ್ಲ ಎಂದು ಸರ್ಕಾರ ಬಿಲ್ ಬಾಕಿ ಇರಿಸಿಕೊಂಡಿದೆ. ಇನ್ನೊಂದೆಡೆ ಬಿಲ್‍ಗಳನ್ನು ಸರಿಯಾದ ಫಾರ್ಮ್ಯಾಟ್ ನೀಡಿಲ್ಲ ಎಂದು ತಡವಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಎಲ್ಲ ಸರಿಯಾಗಿ ಕೊಟ್ಟಿದ್ರೂ ಬೇಕಂತಲೇ ತಡ ಮಾಡುತ್ತಿದೆ ಎಂದು ಫನಾ ಆರೋಪಿಸಿದೆ. ಇದೀಗ ಕೊರೊನಾ ಆತಂಕ ಎದುರಾಗುತ್ತಿದ್ದಂತೆ ಫನಾ ಸರ್ಕಾರ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮುಂದೆ ಬೇಡಿಕೆಯಿಟ್ಟಿದೆ.