– ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ʻಕೈʼಪಡೆ ಪ್ಲ್ಯಾನ್
ಬೆಂಗಳೂರು: ಮನರೇಗಾ ಯೋಜನೆಯ (MGNAREGA) ಹೆಸರು ಬದಲಾವಣೆ ಹಾಗೂ ಯೋಜನೆಯಲ್ಲೂ ಸಾಕಷ್ಟು ಬದಲಾವಣೆ ಮಾಡಿರುವುದನ್ನ ಖಂಡಿಸಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಇದರ ಭಾಗವಾಗಿ ರಾಜ್ಯದಲ್ಲೂ ಬೃಹತ್ ಪ್ರತಿಭಟನೆ (Congress Protest) ನಾಳೆ ನಡೆಸಲಿದೆ.
ಎಲ್ಲಾ ಜಿಲ್ಲಾ ಕೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ಜೊತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲೂ (Freedom Park) ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಇದನ್ನೂ ಓದಿ: ಅಲೆಗಳ ಅಬ್ಬರಕ್ಕೆ ಮಗುಚಿದ ಬೋಟ್ – 15 ಮಂದಿ ಪ್ರವಾಸಿಗರ ರಕ್ಷಣೆ, ನಾಲ್ವರ ಸ್ಥಿತಿ ಗಂಭೀರ
ರಾಜಭವನಕ್ಕೆ ಮುತ್ತಿಗೆಗೆ ಪ್ಲ್ಯಾನ್
ಕೇಂದ್ರ ಸರ್ಕಾರದ ನೂತನ ʻವಿಬಿ ಜಿ ರಾಮ್ ಜಿʼ (VB-GRAMG) ಯೋಜನೆ ಹಳೆಯ ಮನರೇಗಾ ಯೋಜನೇಯ ಸಂಪೂರ್ಣ ಬದಲಾವಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಬಳಿಕ ಮನರೇಗಾ ರದ್ದು ಖಂಡಿಸಿ, ಅಂದೇ ರಾಜಭವನ ಚಲೋ ಸಹ ಹಮ್ಮಿಕೊಳ್ಳಲಾಗಿದೆ. ಫ್ರೀಡಂ ಪಾರ್ಕ್‌ನಿಂದ ರಾಜಭವನ ಚಲೋ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಕೈ ನಾಯಕರು ಮುಂದಾಗಿದ್ದಾರೆ
ವಿಶೇಷ ಅಧಿವೇಶನದಲ್ಲೂ ಮನ್ರೇಗಾ ಚರ್ಚೆ
ಇನ್ನೂ ಕೇಂದ್ರ ಸರ್ಕಾರದ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನ ಮಂಡಲದಲ್ಲಿ ಚರ್ಚೆ ಮಾಡಿ ಖಂಡನಾ ನಿರ್ಣಯದ ರೆಸ್ಯುಲೇಷನ್ ಮಾಡಲು ಸರ್ಕಾರ ಮುಂದಾಗಿದೆ. ಅದೇ ಕಾರಣಕ್ಕಾಗಿ ವಿಶೇಷ ಅಧಿವೇಶನ ನಡೆಸಲಾಗುತ್ತಿದ್ದು ಜನವರಿ 29, 30 ಹಾಗೂ 31 ಮೂರು ದಿನಗಳ ಕಾಲ ಸಂಪೂರ್ಣವಾಗಿ ಮನರೇಗಾ ಮೇಲೆಯೆ ಸದನದಲ್ಲಿ ಚರ್ಚೆ ನಡೆಸಲು ಸಹಾ ನಿರ್ಧರಿಸಲಾಗಿದೆ. ವಿಸ್ತೃತ ಚರ್ಚೆ ಬಳಿಕ ಸದನದಲ್ಲೇ ಖಂಡನಾ ನಿರ್ಣಯ ಮಂಡಿಸಿ ಅಂಗೀಕರಿಸಲು ಸರ್ಕಾರ ಮುಂದಾಗಿದೆ. ಖಂಡನಾ ನಿರ್ಣಯ ಮಾಡಿ ಕಾಯ್ದೆ ವಾಪಸ್ಸು ತೆಗೆದುಕೊಳ್ಳುವವರೆಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಕೇಂದ್ರ ಮನ್ರೇಗಾ ಯೋಜನೆ ಬುಡಮೇಲು ಮಾಡಿದೆ. ಬಡವರಿಗೆ ಅನುಕೂಲವಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನ ಕಸಿದುಕೊಳ್ಳುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಂವಿಧಾನ ರಕ್ಷಿಸಿದ್ರೆ ದೇಶ ಸುಭದ್ರವಾಗಿ ಉಳಿಯುತ್ತೆ: ಸಿದ್ದರಾಮಯ್ಯ


