– ಒಳ ಮೀಸಲಾತಿ ಜಟಾಪಟಿ ಮಧ್ಯೆ ಮೀಟಿಂಗ್
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್ ಜೋರಾಗಿದೆ. ಕಾಂಗ್ರೆಸ್ ದಲಿತ ಸಮುದಾಯದ ಸಚಿವರು ಹಾಗೂ ಶಾಸಕರ ಜೊತೆ ಗೃಹ ಸಚಿವ ಜಿ. ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದಾರೆ.
ಎಸ್‌ಸಿ ಒಳಮೀಸಲಾತಿ ಜಾರಿ ಸಂಬಂಧ ಆಗಸ್ಟ್ 4 ರಂದು ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗ ವರದಿ ಸಲ್ಲಿಸಲಿದೆ. ಹೀಗಾಗಿ, ಒಳ ಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ, ಪರಿಶಿಷ್ಟ ಸಮುದಾಯದ ಉಪ ಜಾತಿಗಳ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ವರದಿ ಬಂದ ಬಳಿಕ ಎಲ್ಲರೂ ಸಹಮತ ವ್ಯಕ್ತಪಡಿಸೋಣ. ಯಾರೂ ಈ ವಿಚಾರದಲ್ಲಿ ಅಪಸ್ವರ ವ್ಯಕ್ತಪಡಿಸೋದು ಬೇಡ. ನಾವೆಲ್ಲರೂ ಒಗ್ಗಟ್ಟನ್ನ ತೋರಿಸೋಣ ಅಂತ ಎಲ್ಲರಿಗೂ ಪರಮೇಶ್ವರ್ ಹೇಳಿದ್ದಾರೆ. ಇದಕ್ಕೆ ದಲಿತ ಸಮುದಾಯಗಳ ಸಚಿವರು, ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿಚ ಸತೀಶ್ ಜಾರಕಿಹೊಳಿ ಮಾತನಾಡಿ, ಒಳ ಮೀಸಲಾತಿ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಏನಾಗುತ್ತೆ ಅಂತ ನೋಡಬೇಕಲ್ಲವಾ..? ಬೇರೆ ಚರ್ಚೆ ಅಂತ ಪ್ರಸಾರ್ ಆದ್ರೆ ಆಗಲಿ. ಅಲ್ಲಿ ಸೇರಿದ ಮೇಲೆ ಬೇರೆ ಚರ್ಚೆ ಆಗೇ ಆಗುತ್ತೆ. ಅಹಿಂದ ನಾಯಕರು ದೆಹಲಿಗೆ ಹೋಗೋ ಪ್ರಸಂಗ ಇಲ್ಲ ಎಂದಿದ್ದಾರೆ.