ಬೆಂಗಳೂರು: ಗ್ಯಾರಂಟಿ ಭರವಸೆಗಳಲ್ಲಿ ಒಂದಾದ 10 ಕೆಜಿ ಉಚಿತ ಅಕ್ಕಿ (Free Rice for BPL) ಕೊಡುವ ಬಗ್ಗೆ ಆಹಾರ ಇಲಾಖೆ ಈಗ ತಲೆಕೆಡಿಸಿಕೊಂಡಿದೆ. ಇಂದು ಇಲಾಖೆ ಅಧಿಕಾರಿಗಳ ಜೊತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಸಭೆ ನಡೆಸಿ ಅನುದಾನ, ಅಕ್ಕಿ ಸಂಗ್ರಹ, ಖರೀದಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದನ್ನು ಸೇರಿಸಿಕೊಂಡೇ ನಾವು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ. ಈಗಿನ ಬೆಲೆಯಲ್ಲೇ ಅಕ್ಕಿಯನ್ನು ಪೂರೈಸುವಂತೆ ಕೇಂದ್ರವನ್ನು ಕೇಳುತ್ತೇವೆ. ಅವರು ಒಪ್ಪದೇ ಇದ್ದರೆ ನಾವೇ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ಸಚಿವ ಮುನಿಯಪ್ಪ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ
Advertisement
Advertisement
ಕೇಂದ್ರ ಸರ್ಕಾರ ನೀಡದೇ ಇದ್ದರೂ ನಾವು 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಆದರೆ ಯಾವಾಗಿನಿಂದ ಎನ್ನುವುದನ್ನು ಸಿಎಂ ತೀರ್ಮಾನ ಮಾಡ್ತಾರೆ ಎಂದು ಮುನಿಯಪ್ಪ ತಿಳಿಸಿದರು.
Advertisement
ಆಯಾ ಭಾಗಕ್ಕೆ ಹೊಂದುವಂತೆ ಪಡಿತರ ಕೊಡುತ್ತೇವೆ. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ಜೊತೆ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕದ ಭಾಗದಲ್ಲಿ 6 ಕೆಜಿ ಅಕ್ಕಿ ಕೊಟ್ಟರೆ 4 ಕೆಜಿ ಜೋಳ ಕೊಡುತ್ತೇವೆ ಎಂಬ ಮಾಹಿತಿಯನ್ನು ಕೆಹೆಚ್ ಮುನಿಯಪ್ಪ ನೀಡಿದರು.
Advertisement
ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ ಒಟ್ಟು 1,31,70,600 ಪಡಿತರ ಚೀಟಿಯಿದೆ. ಒಟ್ಟು 4,36,97,568 ಫಲಾನುಭವಿಗಳಿದ್ದು ಈಗ ಒಟ್ಟು 2,18,487.84 ಮೆಟ್ರಿಕ್ ಟನ್ ಅಕ್ಕಿ ನೀಡಲಾಗುತ್ತಿದೆ.
ಸದ್ಯ ಈಗ ಅಂತ್ಯೋದಯ ಕಾರ್ಡ್‍ನಲ್ಲಿ ಗರಿಷ್ಠ 35 ಕೆಜಿ, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ವ್ಯಕ್ತಿಗೆ 6 ಕೆಜಿ,ಎಪಿಎಲ್‍ಗೆ ಗರಿಷ್ಠ 10 ಕೆಜಿ ನೀಡಲಾಗುತ್ತದೆ. ಉಚಿತ ಅಕ್ಕಿಗಾಗಿ ಒಟ್ಟು ತಿಂಗಳಿಗೆ 742.86 ಕೋಟಿ ರೂ. ವೆಚ್ಚವಾಗುತ್ತದೆ. 10 ಕೆಜಿ ಕೊಡಲು ಶುರು ಮಾಡಿದರೆ ವೆಚ್ಚ ಡಬಲ್ ಆಗುತ್ತದೆ.