ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಪರಿಷತ್ ಟಿಕೆಟ್ ಗಲಾಟೆ ಜೋರಾಗಿದೆ. ಈ ಬಾರಿ ದಲಿತ ಹಾಗೂ ಕ್ರಿಶ್ಚಿಯನ್ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಒಂದು ಸ್ಥಾನವನ್ನು ಎಸ್.ಆರ್.ಪಾಟೀಲ್‍ಗೆ ಕೊಡಬೇಕು. ಇನ್ನೊಂದು ಸ್ಥಾನ ಯಾರಿಗಾದ್ರೂ ನೀಡಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎಸ್‍ಆರ್ ಪಾಟೀಲ್‍ಗೆ ಅವಕಾಶ ಸಿಗಬಾರದು ಎಂದು ಸಿದ್ದರಾಮಯ್ಯ ಹಠಕ್ಕೆ ಕುಳಿತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕರಾವಳಿಯಲ್ಲಿರುವ ನದಿಗಳ ಮರಳನ್ನು ಮಾರುವಂತಿಲ್ಲ: ಎನ್‌ಜಿಟಿ
Advertisement
Advertisement
ತಮ್ಮ ಮನವೊಲಿಕೆಗೆ ಮುಂದಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಬಳಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಈ ಟಿಕೆಟ್ ಸಮಸ್ಯೆ ಬಗೆಹರಿಸಲು ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಾಗಿದ್ದಾರೆ.
Advertisement
ಇಂದು ಮಧ್ಯಾಹ್ನ ಉಭಯ ನಾಯಕರೊಟ್ಟಿಗೆ ಸೋನಿಯಾ ಮಾತನಾಡಲಿದ್ದಾರೆ. ಈಗಾಗಲೇ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಸಿದ್ದರಾಮಯ್ಯನವರು ವಿಮಾನ ಹತ್ತಲಿದ್ದಾರೆ.