ಬೆಂಗಳೂರು: ರಾಜ್ಯದ 271 ಧಾರ್ಮಿಕ ವಿದ್ಯಾ ಸಂಸ್ಥಗೆ ಆಹಾರ ಧಾನ್ಯ ಸ್ಥಗಿತಗೊಳಿಸಿದ್ದನ್ನೇ ಹೋರಾಟವಾಗಿ ರೂಪಿಸಲು ಕಾಂಗ್ರೆಸ್ ಪ್ಲಾನ್ ಮಾಡತೊಡಗಿದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಹಾಗೂ ಸರ್ಕಾರದಿಂದ ಕೈ ಬಿಡಲ್ಪಟ್ಟ ಸಂಸ್ಥೆಗಳಿರುವ ಊರಿನಲ್ಲಿ ಬೊಗಸೆ ಅಕ್ಕಿ ಅಭಿಯಾನಕ್ಕೆ ಕೈ ನಾಯಕರು ರೂಪುರೇಶೆ ಸಿದ್ದಪಡಿಸತೊಡಗಿದ್ದಾರೆ.
ಸರ್ಕಾರದ ಕೈಲಿ ಅಕ್ಕಿ ಗೋಧಿ ಕೊಡಲಾಗದಿದ್ದರೆ ನಾವೇ ಭಿಕ್ಷೆ ಎತ್ತಿ ಕೊಡುತ್ತೇವೆ ಎಂದು ಅಭಿಯಾನ ನಡೆಸಿ ಸರ್ಕಾರಕ್ಕೆ ಮುಜುಗರ ಮಾಡಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಸಿಎಂ ಯಡಿಯೂರಪ್ಪ ಕೂಡಲೇ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇನ್ನೆರಡು ದಿನದಲ್ಲಿ ಭರವಸೆ ಈಡೇರದಿದ್ದರೆ ಅಥವಾ ಅಧಿಕೃತ ಆದೇಶ ಪ್ರಕಟವಾಗದಿದ್ದರೆ ಕಾಂಗ್ರೆಸ್ಸಿನಿಂದ ಭೊಗಸೆ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಲು ರೂಪುರೇಷೆ ಸಿದ್ದವಾಗತೊಡಗಿದೆ.
Advertisement
Advertisement
ಕಲ್ಲಡ್ಕ ಶಾಲೆಯ ಮಕ್ಕಳಿಗೆ ಸಿದ್ದರಾಮಯ್ಯ ಸರ್ಕಾರ ಅಕ್ಕಿ ನೆರವು ನಿಲ್ಲಿಸಿತ್ತು ಅನ್ನುವುದನ್ನೇ ಬಿಜೆಪಿ ರಾಜ್ಯ ಮಟ್ಟದಲ್ಲಿ ವಿವಾದಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಈಗ ಅಂತಹದ್ದೇ ಅವಕಾಶವೊಂದನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್ ಕೈಗೆ ಕೊಟ್ಟಿದೆ.
Advertisement
ದಾಸೋಹ ಯೋಜನೆ ಅಡಿಯಲ್ಲಿ ಸಿದ್ದಗಂಗಾ ಮಠ, ಸುತ್ತೂರು ಮಠ ಹಾಗೂ ಆದಿಚುಂಚನಗಿರಿ ಮಠಗಳ ವಿದ್ಯಾ ಸಂಸ್ಥೆಗಳಿಗೆ ಆಹಾರ ಧಾನ್ಯ ಸ್ಥಗಿತ ಮಾಡಿರುವುದನ್ನೇ ವಿವಾದವಾಗಿಸಿ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಅದರಂತೆ ಬೊಗಸೆ ಅಕ್ಕಿ ಅಭಿಯಾನ ಮಾಡಿ, ಅಕ್ಕಿ ಸಂಗ್ರಹಿಸಿ ವಿದ್ಯಾ ಸಂಸ್ಥೆಗಳಿಗೆ ದಾನ ನೀಡಲು ಮುಂದಾಗಿದೆ.
Advertisement
ಎರಡು ದಿನದಲ್ಲಿ ಆಹಾರ ಧಾನ್ಯ ನೀಡಿಕೆ ಮುಂದುವರಿಕೆಗೆ ಸರ್ಕಾರ ಆದೇಶ ಮಾಡಿದರೆ ಇಲ್ಲವೆ ಆಹಾರ ಧಾನ್ಯ ನೀಡಿಕೆ ಮಾಡಿದರೆ ಸರಿ ಇಲ್ಲದಿದ್ದರೆ ಕೈ ಪಾಳಯದ ಬೊಗಸೆ ಅಕ್ಕಿ ಅಭಿಯಾನ ಆರಂಭವಾಗುವುದು ಗ್ಯಾರಂಟಿ.