ಬೆಂಗಳೂರು: ಕರ್ನಾಟಕದ ಸಹಕಾರಿ ಕ್ಷೇತ್ರದಿಂದ ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಣ್ಣಿಸಿದ್ದಾರೆ.
ನಗರದಲ್ಲಿ ಅತ್ಯುತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದೆ. ಇವತ್ತು ಸಹಾಕರ ರಂಗದ ಅನೇಕ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗಿದೆ. ಕರ್ನಾಟಕದಲ್ಲಿ ಸಹಕಾರಿ ಆಂದೋಲನ ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮರ್ಥವಾಗಿ ನಡೆದು ಬಂದಿದೆ. ಎಸ್.ಎಸ್. ಪಾಟೀಲ್‌ರಿಂದ ಕರ್ನಾಟಕದ ಮೊದಲ ಸಹಕಾರಿ ಘಟಕ ಪ್ರಾರಂಭ ಆಯಿತು. ಇಡೀ ವಿಶ್ವಕ್ಕೆ ಉದಾಹರಣೆ ರೂಪದಲ್ಲಿ ಕರ್ನಾಟಕ ಸಹಕಾರಿ ಕ್ಷೇತ್ರ ನಿಂತಿದೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮಂಡ್ಯಕ್ಕೆ ಏನು ಕಡಿಮೆ ಮಾಡಿದೆ – ಸಿ.ಟಿ ರವಿ ಪ್ರಶ್ನೆ
Advertisement
Advertisement
30 ಲಕ್ಷಕ್ಕೂ ಹೆಚ್ಚು ರೈತರಿಗೆ, ರೈತ ಮಹಿಳೆಯರಿಗೆ ಸಹಕಾರಿ ಕ್ಷೇತ್ರದ ಲಾಭ ಸಿಗುತ್ತಿದೆ. ಸಹಕಾರಿ ಸಂಘಟನೆ ಇಲ್ಲದಿದ್ದರೆ ರೈತರಿಗೆ ಯಾವುದೇ ಲಾಭಾಂಶ ಸಿಗುತ್ತಿರಲಿಲ್ಲ. ಕರ್ನಾಟಕ ಸರ್ಕಾರದ ಸಾಧನೆ ಸಹಕಾರ ಕ್ಷೇತ್ರದ ಸಾಧನೆ ಉತ್ತಮವಾಗಿದೆ. ಮೋದಿಯವರು ಸಹಕಾರಿ ಆಂದೋಲನಕ್ಕೆ ತ್ವರಿತಗತಿ ನೀಡುವ ಸಲುವಾಗಿ ಸಹಕಾರಿ ಸಚಿವಾಲಯವನ್ನು ಪ್ರತ್ಯೇಕವಾಗಿ ರಚನೆ ಮಾಡಿದರು. ಪ್ಯಾಕ್ಸ್ ಮೂಲಕ 70% ರೈತರಿಗೆ ಸಹಕಾರ ಬ್ಯಾಂಕ್‌ಗಳ ಸಾಲ ತಲುಪುತ್ತಿದೆ. ರಸಗೊಬ್ಬರ ಉತ್ಪಾದನೆ 30% ಸಹಕಾರ ರಂಗದಿಂದ ಆಗ್ತಿದೆ. 40% ಸಕ್ಕರೆ ಉತ್ಪಾದನೆ ಸಹಕಾರಿ ಕ್ಷೇತ್ರದಿಂದ ಆಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
ಪ್ಯಾಕ್ಸ್ ಗಣಕೀಕರಣ ಮಾಡುವ ನಿರ್ಣಯ ಮಾಡಿದ್ದೇವೆ. ಮೂರು ವರ್ಷದ ಒಳಗೆ ಸಹಕಾರಿ ಸಮಿತಿಗಳ ರಚನೆ ಮಾಡಲು ಸೂಚನೆ ನೀಡಲಾಗಿದೆ. ಸಹಕಾರಿ ಸಮಿತಿಯೇ ಎಲ್ಲ ಕೆಲಸಗಳನ್ನೂ ಮಾಡುತ್ತದೆ. ಸಹಕಾರಿ ಸಮಿತಿಗಳೇ ಕೃಷಿ ಉತ್ಪಾದನೆಯಿಂದ ಹಿಡಿದು ಗ್ಯಾಸ್ ಡಿಸ್ಟ್ರಿಬ್ಯೂಷನ್ ತನಕ ನಿರ್ವಹಣೆ ಮಾಡಲಿದೆ. ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಯೋಚನೆ ಕೂಡ ನಮಗಿದೆ. ಸಹಕಾರಿ ನೀತಿ ರಚನೆ ಮಾಡುವುದಕ್ಕೂ ನಾವು ಮುಂದಾಗಿದ್ದೇವೆ. ಸಹಕಾರಿ ಸಮಿತಿ ಆರ್ಥಿಕತೆ ಸರಿಯಾಗಿ ನಿಭಾಯಿಸಲು, ಚುನಾವಣೆ ಪಾರದರ್ಶಕ ಆಗಲು ಸೊಸೈಟಿ ಅಧಿನಿಯಮ ತರುತ್ತಿದ್ದೇವೆ. ಸಹಕಾರಿ ಕ್ಷೇತ್ರದ ಸಮಸ್ಯೆಗಳ ಬಗೆಹರಿಸಲು ಹತ್ತು ಹಲವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಏನಾದರೂ ನ್ಯಾಯ ಒದಗಿಸಿದ್ದಾರಾ – ಡಿಕೆಶಿ ಪ್ರಶ್ನೆ
Advertisement
ಭಾಷಣದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನೂ ಅಮಿತ್ ಶಾ ಶ್ಲಾಘಿಸಿದರು. ಕರ್ನಾಟಕದ ಲೋಕಪ್ರಿಯ ಮುಖ್ಯಮಂತ್ರಿ ಬೊಮ್ಮಾಯಿ ಎಂದು ಹಾಡಿ ಹೊಗಳಿದರು.