ಯಡಿಯೂರಪ್ಪ ಬಜೆಟ್ ಟಫ್ ಬಜೆಟ್ – ಮಠ ಮಾನ್ಯಗಳಿಗೆ ಅನುದಾನ ಕಟ್

Public TV
1 Min Read
yeddyurappa budget e1578479692458

ಬೆಂಗಳೂರು: ತೆರಿಗೆ ಭಾರ, ಸಬ್ಸಿಡಿ ಖೊತಾ, ಮಠ ಮಾನ್ಯಗಳಿಗೆ ಅನುದಾನ ಕಟ್. ಇದು ಯಡಿಯೂರಪ್ಪ ಮಂಡಿಸಲಿರುವ ಬಜೆಟ್‍ನ ಹೈಲೈಟ್ಸ್ ಆಗುವ ಸಾಧ್ಯತೆ ಇದೆ. ಕರ್ನಾಟಕ ಬಜೆಟ್ ಫೈನಲ್ ಆಗಿದ್ದು, ನಾಳೆ ಪ್ರಿಂಟ್‍ಗೆ ಹೋಗಲಿದೆ. ಕೃಷಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕಡೆಗೆ ಯಡಿಯೂರಪ್ಪ ಗಮನ ಹರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮಾಧ್ಯಮ ಸಂಪಾದಕರ ಜತೆ ಯಡಿಯೂರಪ್ಪ ಅನೌಪಚಾರಿಕ ಚರ್ಚೆ ನಡೆಸಿದ್ರು. ಈ ವೇಳೆ ರಾಜ್ಯ ಬಜೆಟ್ ಬಗ್ಗೆ ಕೆಲವು ಸುಳಿವುಗಳನ್ನ ನೀಡಿದ್ದಾರೆ. ಹಣಕಾಸು ಪರಿಸ್ಥಿತಿ ತೀರಾ ಹದಗೆಡದಿದ್ದರೂ, ಬಿಗಿ ಪರಿಸ್ಥಿತಿ ಇರುವುದನ್ನ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

ಯಡಿಯೂರಪ್ಪ ಬಜೆಟ್ ಮೊದಲಿನಂತೆ ಇರಲ್ಲ ಎನ್ನಲಾಗಿದ್ದು, ಈ ಬಾರಿ ಯಡಿಯೂರಪ್ಪ ಬಜೆಟ್ ಫುಲ್ ಟಫ್ ಬಜೆಟ್ ಆಗಿರಲಿದೆ ಅಂತಾ ಮೂಲಗಳು ತಿಳಿಸಿವೆ. ಕೆಲವು ವಸ್ತುಗಳ ತೆರಿಗೆ ಭಾರ ಹೆಚ್ಚಾಗುವ ಸಾಧ್ಯತೆ ಇದ್ದು,  ಹಲವು ಸಬ್ಸಿಡಿಗಳು ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.

Yeddyurppa Vidhansabha Session 3

ಈ ಬಾರಿ ಮಠ ಮಾನ್ಯಗಳಿಗೆ ಅನುದಾನ ಇಲ್ಲ ಎನ್ನಲಾಗಿದ್ದು, ಎಲ್ಲದಕ್ಕೂ ಕೊಕ್ಕೆ ಹಾಕಲಿದ್ದಾರೆ. ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರದ ಹಲವು ಹಳೆ ಯೋಜನೆಗಳು ಮುಂದುವರಿಸಲು ನಿರ್ಧಾರ ಮಾಡಿದ್ದು ಯಡಿಯೂರಪ್ಪ ಸರ್ಕಾರದ ಹೆಚ್ಚಿನ ಹೊಸ ಯೋಜನೆಗಳು ಘೋಷಣೆ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ನಡುವೆ ಕಳೆದ ಬಾರಿಗಿಂತ 5% ರಿಂದ 7% ಮಾತ್ರ ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆಯಿದ್ದು, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಅನ್ನೋದು ಸದ್ಯದ ಹೈಲೈಟ್ಸ್.

Share This Article