ಬೆಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ರ ಬರೆದು ಮನವಿ ಮಾಡಿದ್ದಾರೆ.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ (Karnatakas Tableau) ಅವಕಾಶ ನಿರಾಕರಿಸಲಾಗಿದೆ. ಈ ಸಂಬಂಧ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಜನರ ಭಾವನೆಗಳಿಗೆ ನೋವುಂಟಾಗಿದೆ. ಕರ್ನಾಟಕದಿಂದ 5 ಸ್ತಬ್ಧಚಿತ್ರಗಳ ಥೀಮ್‌ಗಳನ್ನು ಕೊಡಲಾಗಿತ್ತು. ಆದರೆ ರಾಜ್ಯ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ ಸರಿಯಲ್ಲ. ‘ಬ್ರ್ಯಾಂಡ್ ಬೆಂಗಳೂರು’ ಸ್ತಬ್ಧಚಿತ್ರಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸ್ತಬ್ಧಚಿತ್ರ ರಾಜಕಾರಣ ಸಿಎಂಗೆ ಶೋಭೆ ತರಲ್ಲ: ಪ್ರಹ್ಲಾದ್ ಜೋಶಿ
Advertisement
I have written to Defence Minister Shri @rajnathsingh, requesting the inclusion of Karnataka’s tableau in the Republic Day parade.
In my letter to Defence Minister Shri Rajnath Singh, I’ve expressed the deep sentiment of 7 crore Kannadigas. Denying Karnataka’s tableau in the… pic.twitter.com/ozAd2OfiqK
— Siddaramaiah (@siddaramaiah) January 11, 2024
Advertisement
ಮನವಿ ಪತ್ರದಲ್ಲೇನಿದೆ?
ಕರ್ನಾಟಕವು ಕಳೆದ 14 ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನವದೆಹಲಿಯ ಕರ್ತವ್ಯ ಪಥದಲ್ಲಿ ಭಾಗವಹಿಸುತ್ತಿದೆ. ಭಗವಾನ್ ಬಾಹುಬಲಿಯ ಮಹಾ ಮಸ್ತಕಾಭಿಷೇಕ (2005), ಹೊಯ್ಸಳರ ಆರ್ಕಿಟೆಕ್ಚರ್ (2008), ಬೀದರ್‌ನ ಬಿದರಿ ಆರ್ಟ್ (2011), ಭೂತಾರಾಧನೆ (2012), ಚನ್ನಪಟ್ಟಣ ಆಟಿಕೆಗಳು (2005) ಮುಂತಾದ ವಿವಿಧ ವಿಷಯಗಳೊಂದಿಗೆ ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಕರ್ನಾಟಕವು ಹಲವಾರು ಬಹುಮಾನಗಳನ್ನು ಗೆದ್ದಿದೆ. ಕರ್ಮಾಟಕದ ಪ್ರತಿಯೊಂದು ಕೋಷ್ಟಕವು ರಾಜ್ಯದ ಶ್ರೀಮಂತ ಸಂಸ್ಕೃತಿ, ಜಾನಪದ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತಿದೆ.
Advertisement
2024 ರ ಗಣರಾಜ್ಯೋತ್ಸವ ಪರೇಡ್‌ಗಾಗಿ ಕರ್ನಾಟಕವು ಪ್ರಸ್ತಾಪಿಸಿದ 5 ಥೀಮ್‌ಗಳಿಂದ ‘BRAND BENGALURU’ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ರಕ್ಷಣಾ ಸಚಿವಾಲಯ ಕರೆದಿರುವ ಎಲ್ಲಾ ಸಭೆಗಳಿಗೆ ಕರ್ನಾಟಕ ಹಾಜರಾಗಿದೆ. ರಾಜ್ಯವು ಪ್ರಮುಖ ಮಾದರಿ ಮತ್ತು ಸಂಗೀತವನ್ನು ಆಯ್ಕೆ ಸಮಿತಿಯ ಮುಂದೆ ಪ್ರಸ್ತುತಪಡಿಸಿದೆ. ಸಮಿತಿಯು ಕೆಲವು ಮಾರ್ಪಾಡುಗಳೊಂದಿಗೆ ಮುಂದಿನ ಸಭೆಗೆ ಹಾಜರಾಗಲು ನಮ್ಮನ್ನು ಕೇಳಿದೆ. ಕರ್ತವ್ಯ ಪಥದಲ್ಲಿ ನಡೆಯಲಿರುವ 2024ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕವನ್ನು ಸೇರಿಸಲಾಗಿಲ್ಲ. ಬದಲಾಗಿ ಟ್ಯಾಬ್ಲೋವನ್ನು ಕೆಂಪು ಕೋಟೆಯ ಭಾರತ್ ಪರ್ವ್ ವಿಭಾಗದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಸ್ತಬ್ಧಚಿತ್ರ ವಿಷಯದಲ್ಲಿ ಕೇಂದ್ರಕ್ಕೆ ದುರುದ್ದೇಶ ಇಲ್ಲ: ವಿಜಯೇಂದ್ರ
Advertisement
ಕರ್ಮಾಟಕ ರಾಜ್ಯವನ್ನು ಪ್ರತಿನಿಧಿಸುವ ಟ್ಯಾಬ್ಲೋ ‘ಬ್ರಾಂಡ್ ಬೆಂಗಳೂರು’ ಐಕಾನಿಕ್ ನಗರವಾದ ಬೆಂಗಳೂರು ಹೇಗೆ ಅಭಿವೃದ್ಧಿಯಲ್ಲಿ ಮುನ್ನಡೆದಿದೆ ಮತ್ತು ಅದರ ಸಂಸ್ಕೃತಿ, ಸಂಪ್ರದಾಯದಲ್ಲಿ ಹೇಗೆ ಬೇರೂರಿದೆ ಎಂಬುದನ್ನು ಚಿತ್ರಿಸುತ್ತದೆ. ವಿಕಾಸ ಭಾರತಕ್ಕೆ ರಾಜ್ಯದ ಕೊಡುಗೆ ಅಪಾರ. ಅದು ತಂತ್ರಜ್ಞಾನವೇ ಆಗಿರಬಹುದು. ಉದ್ಯಮಶೀಲತೆ ಅಥವಾ ತೆರಿಗೆ ಕೊಡುಗೆಯೂ ಆಗಿರಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರ್ಯಾಂಡ್ ಟರ್ಮಿನಲ್ 2 ಅನ್ನು UINESCO ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣವೆಂದು ಘೋಷಿಸಿದೆ.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ಮಾಟಕ ಟ್ಯಾಬ್ಲೋಗೆ ಅವಕಾಶ ನೀಡದಿರುವ ನಿರ್ಧಾರವು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಸ್ತಬ್ಧಚಿತ್ರವನ್ನು ಪರೇಡ್‌ನಿಂದ ಹೊರಗಿಟ್ಟಿರುವುದು ಕರ್ನಾಟಕದ ಜನತೆಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ. ಏಳು ಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು, 2024 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಾಂಡ್ ಬೆಂಗಳೂರು ಸ್ತಬ್ದಚಿತ್ರ ಪ್ರದರ್ಶಿಸಲು ಅನುವು ಮಾಡಿಕೊಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧಿಸುವಂತೆ ಕುಮಾರಸ್ವಾಮಿಗೆ ಮುಖಂಡರು, ನಾಯಕರ ಒತ್ತಾಯ