ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಅಭಿವೃದ್ಧಿ ಕಾರ್ಯ ಮತ್ತು ಗ್ಯಾರಂಟಿಗಳನ್ನು (Congress Guarantee) ಬ್ಯಾಲೆನ್ಸ್ ಮಾಡುವ ದೊಡ್ಡ ಸವಾಲು ಸಿಎಂ ಮುಂದಿದೆ.
ಶುಕ್ರವಾರ ರಾಹುಕಾಲ ಬೆಳಗ್ಗೆ 10:30ಕ್ಕೆ ಆರಂಭವಾಗುತ್ತದೆ. ರಾಹುಕಾಲ ಶುರುವಾಗುವ ಮುನ್ನ ಅಂದ್ರೆ ಬೆಳಗ್ಗೆ 10:15ಕ್ಕೆ ಸಿಎಂ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿಎಂ ಅವರ ಕಾರ್ಯಕಲಾಪಗಳಪಟ್ಟಿಯಲ್ಲಿ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಎಂದು ಉಲ್ಲೇಖವಾಗಿದೆ.
Advertisement
ಮಂಡಿನೋವಿನ ಕಾರಣ ಸಿಎಂ ಆರಂಭದ 10 ನಿಮಿಷ ಮಾತ್ರ ನಿಂತು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಅಂದಾಜು 1.25 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾಪ ಮಾಡುವ ಸಂಭವ ಇದೆ. ಇದನ್ನೂ ಓದಿ: ಆಕ್ಸ್‌ಫರ್ಡ್ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್
Advertisement
Advertisement
ಸಿದ್ದು ಬಜೆಟ್ ಏನಿರಬಹುದು?
– ಗ್ಯಾರಂಟಿಗಳು ಯಥಾಸ್ಥಿತಿ: 60-65 ಸಾವಿರ ಕೋಟಿ ರೂ. ಮೀಸಲು
– ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳ
– ಬೆಂಗಳೂರು ಅಭಿವೃದ್ಧಿಗಾಗಿ ವಿಶೇಷ ಅನುದಾನ ಇದನ್ನೂ ಓದಿ: ಪೊಲೀಸ್ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ
– ರಾಜಸ್ವ ಸಂಗ್ರಹ ಹೆಚ್ಚಿಸಲು ತೈಲ ಸೆಸ್ ಸೇರಿ ಕೆಲ ತೆರಿಗೆ ಪರಿಷ್ಕರಣೆ
– ಪ್ರತಿ ಊರು- ಎಲ್ಲರಿಗೂ ಸೂರು ಯೋಜನೆಯಡಿ ಮನೆ ನಿರ್ಮಾಣ
– ಮಹಿಳಾ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ ಮುಂದುವರಿಕೆ
– ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
Advertisement