– ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ಥಳದಲ್ಲೇ ಸ್ಪಂದನೆ
ಬೆಂಗಳೂರು: ಜನ ಸ್ಪಂದನ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ದಿನವಿಡೀ ನಡೆಸಿದ ಜನತಾ ದರ್ಶನಕ್ಕೆ (Janata Darshan) ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಬಳಿಕ ತಮ್ಮ ದೂರು ದುಮ್ಮಾನ, ಕಷ್ಟ ಕೋಟಲೆಗಳನ್ನು ಹೇಳಿಕೊಳ್ಳಲು ಇಡೀ ದಿನ ಸಿಎಂ ಗೃಹಕಚೇರಿ ಕೃಷ್ಣಾ ಬಳಿ ಸಾವಿರಾರು ಮಂದಿ ಬಂದಿದ್ದರು.
Advertisement
ಊಟಕ್ಕೂ ಮನೆಯೊಳಗೆ ಹೋಗದ ಸಿಎಂ ಸಿದ್ದರಾಮಯ್ಯ, ಅಲ್ಲೇ ಕುಳಿತು 10 ನಿಮಿಷದಲ್ಲಿ ಊಟ ಮುಗಿಸಿ ಜನರ ಕಷ್ಟಗಳಿಗೆ ದನಿಯಾಗುವ ಕೆಲಸ ಮಾಡಿದರು. ಸಮಸ್ಯೆ ಕೇಳಿದ್ದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಸಿಎಂ ತಲೆಯನ್ನು ಪ್ರೀತಿಯಿಂದ ನೇವರಿಸಿದರು.
Advertisement
ಬೆಳಗ್ಗೆ 10:30ರಿಂದ ಸಂಜೆ 5 ಗಂಟೆವರೆಗೂ 3500ಕ್ಕೂ ಹೆಚ್ಚು ಅರ್ಜಿಗಳನ್ನು ಸಿಎಂ ಸ್ವೀಕರಿಸಿದ್ದು, ಗಂಭೀರ ಅನಾರೋಗ್ಯ, ವರ್ಗಾವಣೆಯಂತಹ 65 ಸಮಸ್ಯೆಗಳಿಗೆ ಸಿಎಂ ಸ್ಥಳದಲ್ಲೇ ಪರಿಹಾರ ನೀಡಿದರು. ಕೆಲ ಅರ್ಜಿಗಳ ಪರಿಶೀಲನೆ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್ ಆಡುವ ಯುವತಿಗೆ ಬೇಕಿದೆ ಸಹಾಯ
Advertisement
Advertisement
ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಅತ್ತಿತ್ತ ಕದಲದಂತೆ, ಜನರ ಸಮಸ್ಯೆಗಳನ್ನು ಇತ್ಯರ್ಥ ಮಾಡುವುದಕ್ಕೆ ಬಿಟ್ಟಿದ್ದರು. ಜನತಾದರ್ಶನಕ್ಕೆ ಚಿತ್ರವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದಿದ್ದ ಕೆಲವರು ಸಿಎಂ ಗಮನ ಸೆಳೆಯಲು ಯತ್ನಿಸಿದರು.
ದೂರು ಸ್ವೀಕರಿಸಲು 20 ಕೌಂಟರ್ ತೆರೆಯಲಾಗಿತ್ತು. ಹಿರಿಯ ನಾಗರೀಕರು, ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ದೂರದೂರುಗಳಿಂದ ಬಂದಿದ್ದವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ
ಆನ್‌ಲೈನ್ ಮೂಲಕವೂ ಸಿಎಂಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. 1902ಕ್ಕೆ ಕರೆ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ತಿಂಗಳಿಗೊಮ್ಮೆ ಜನಸ್ಪಂದನ ನಡೆಸುವುದಾಗಿ ಸಿಎಂ ಘೋಷಿಸಿದ್ದಾರೆ.
ಯಾವೆಲ್ಲ ದೂರು ಬಂದಿತ್ತು?
ಗೃಹಲಕ್ಷ್ಮಿ ಯೋಜನೆ ತಾಂತ್ರಿಕ ತೊಂದರೆ ಬಗೆಹರಿಸಿ
ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಎಲ್ಲಾ ಕೆವೈಸಿ ಅಪ್ಡೇಟ್ ಮಾಡಿ ದಾಖಲೆ ಸಲ್ಲಿಸಿದರೂ ಅರ್ಜಿ ಸ್ವೀಕಾರದಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ಹಲವರಿಂದ ದೂರು ನೀಡಿದರು. ಈ ಸಮಸ್ಯೆಯನ್ನು ಬೇಗ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಸಕಾಲ ಸಿಬ್ಬಂದಿಗೆ ವೇತನ ರಿಲೀಸ್ ಮಾಡಿಸಿ ಮಹಿಳೆ ಕಣ್ಣೀರು
2011 ರಲ್ಲಿ ನಿಯೋಜನೆಗೊಂಡ ಸಕಾಲ ಸಿಬ್ಬಂದಿಗೆ ಕಳೆದ ಒಂದು ವರ್ಷದಿಂದ ವೇತನ ನೀಡುತ್ತಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಬೆಂಗಳೂರು ಉತ್ತರ, ದಕ್ಷಿಣ ತಾಲೂಕು ಕಚೇರಿಗಳ ಸಕಾಲ ಸಿಬ್ಬಂದಿಗೆ ಬಾಕಿ ವೇತನ ಬಿಡುಗಡೆಗೆ ಸಿಎಂ ಸೂಚಿಸಿದರು.
ವಿಕ್ಟೋರಿಯಾ ಅವ್ಯವಸ್ಥೆ ಸರಿ ಮಾಡಿಸಿ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆಯಿಂದ ಕೂಡಿದೆ ಎಂದ ಅಜ್ಜಿಯೊಬ್ಬರು ದೂರು ನೀಡಿದರು. ಚಳಿ ಜ್ವರದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಈ ವೇಳೆ ಅಲ್ಲಿರುವ ಸಿಬ್ಬಂದಿ ನಿರ್ಲಕ್ಷ ತೋರಿದ್ದಾರೆ ಎಂದು ಅಳಲು ತೋಡಿಕೊಂಡರು.
ಪಹಣಿ ಸಮಸ್ಯೆ.. ವಿಜಯನಗರ ಡಿಸಿಗೆ ಕ್ಲಾಸ್
ವಿಜಯನಗರ ಡಿಸಿಗೆ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಪಹಣಿ ವಿಚಾರಕ್ಕೆ ನನ್ನ ಬಳಿ ಬರಬೇಕಾ? ಇದನ್ನೆಲ್ಲ ನೀವೇ ಪರಿಹಾರ ಮಾಡಲು ಆಗುದಿಲ್ಲವೇ? ಎಂದು ಪ್ರಶ್ನಿಸಿ ವಿಡಿಯೋ ಕಾನ್ಫರೆನ್ಸ್ ಕ್ಲಾಸ್ ತೆಗೆದುಕೊಂಡರು.
ವಿಜಯೇಂದ್ರ, ಪ್ರೀತಂ ವಿರುದ್ಧ ದೂರು
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಹಾಸನ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಮಹೇಂದ್ರ ಎಂಬವರು ದೂರು ನೀಡಿದರು. ಅನಾಥ ಮಕ್ಕಳಿಗಾಗಿ ಕೊಟ್ಟಿದ್ದ ಭೂಮಿ ಸಮಸ್ಯೆಯಾಗಿದೆ. ಸರ್ಕಾರಿ ಉದ್ಯೋಗಿಯಾದ ತನ್ನ ಪತ್ನಿಗೂ ಪ್ರೀತಂಗೌಡ ಕಿರುಕುಳ ಕೊಡ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ತನಿಖೆ ಮಾಡಿಸುವುದಾಗಿ ಸಿಎಂ ಭರವಸೆ ನೀಡಿದರು.
ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್‌ಗೆ 22 ಗುಂಟೆ ಜಮೀನು
ಗದಗದಲ್ಲಿ ಪುತ್ರನ ಹೆಸರಿನ ಟ್ರಸ್ಟ್‌ಗೆ ಸಿಎಂ ನಿವೇಶನ ಮಂಜೂರು ಮಾಡಿಸಿದ್ದರು. ಆದರೆ ಸಚಿವ ಹೆಚ್‌ಕೆ ಪಾಟೀಲ್ ಈ ಜಮೀನನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸಲು ಸೂಚಿಸಿದ್ದಾರೆ. ಹೀಗಾಗಿ ಟ್ರಸ್ಟ್ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಸಿಎಂ ಬಳಿ ದೂರಿತ್ತರು. ಕೂಡಲೇ ಗದಗ ಡಿಸಿಗೆ ಕರೆ ಮಾಡಿದ ಸಿಎಂ, ಆ 22 ಗಂಟೆ ನಿವೇಶನವನ್ನು ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಟ್ರಸ್ಟ್‌ಗೆ ಕೊಡಬೇಕು ಎಂದು ನಿರ್ದೇಶನ ನೀಡಿದರು.
ರಾಹುಲ್ ಗಾಂಧಿ ಭೇಟಿ ಮಾಡಿಸಿ
ಅಥಣಿಯ ಅಶೋಕ್ ಎಂಬವರು ಊರಿನಲ್ಲಿ ಇಂದಿರಾಗಾಂಧಿ ಪ್ರತಿಮೆ ಮಾಡಿದ್ದೇನೆ. ಅದನ್ನು ತೋರಿಸಲು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿಸಿ ಎಂದು ಬೇಡಿಕೆಯಿಟ್ಟರು. ಇದಕ್ಕೆ ಹೌದಾ ಎಂದ ಸಿಎಂ ಅವರಿಗೆ ಹೇಳ್ತೀನಿ ಹೋಗು ಎಂದು ಹೇಳಿ ಕಳುಹಿಸಿಕೊಟ್ಟರು.