ದೊಡ್ಮನೆ ರಾಜ್‌ಕುಮಾರ್ (Dr.Rajkumar) ಅವರ ಕುಟುಂಬ ದಶಕಗಳಿಂದ ತಮ್ಮ ಸಿನಿಮಾಗಳ ಮೂಲ ಮನರಂಜನೆ ನೀಡುತ್ತಾ ಬಂದಿದ್ದಾರೆ. ಸಿನಿಮಾ ಅಷ್ಟೇ ಶಿಕ್ಷಣ ಕ್ಷೇತ್ರಕ್ಕೂ ಡಾ.ರಾಜ್‌ಕುಮಾರ್ ಅಕಾಡೆಮಿ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಅವರ ಅಕಾಡೆಮಿಯಿಂದ ಸಾಕಷ್ಟು ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ.
Advertisement
ಈ ಬಾರಿಯೂ ರಾಜ್‌ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಐಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಅಂಥಹವರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್‌ಕುಮಾರ್ ಕುಟುಂಬ ಇರಿಸಿಕೊಂಡಿತ್ತು, ಜೊತೆಗೆ ಅಪ್ಪು ಹೆಸರಲ್ಲಿ ಪೃಥ್ವಿ ಸ್ಕಾಲರ್‌ಶಿಪ್ ಟೆಸ್ಟ್ ಲೋಗೋ ಬಿಡುಗಡೆ ಕಾರ್ಯಕ್ರಮವೂ ಇಂದು (ಜೂನ್ 9) ನಡೆಯಿತು. ದೊಡ್ಮನೆ ಕುಟುಂಬದವರು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Cm Siddaramaiah) ಅತಿಥಿಯಾಗಿ ಆಗಮಿಸಿದ್ದರು. ವರನಟ ರಾಜ್‌ಕುಮಾರ್, ಅಪ್ಪುರನ್ನ (Appu) ಸಿಎಂ ಸ್ಮರಿಸಿ ಹಾಡಿ ಹೊಗಳಿದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ನಾನು ಬಹಳ ಸಂತೋಷದಿಂದ ಭಾಗವಹಿಸಿದ್ದೇನೆ. ಡಾ ರಾಜ್ ಈ ನಾಡು ಕಂಡ ಶ್ರೇಷ್ಠ ನಟ, ಅವರು ಹಳ್ಳಿಯವರು ನಮ್ಮ ಜಿಲ್ಲೆಯವರೇ. ಅವರನ್ನ ಭೇಟಿಯಾದಾಗ ಬನ್ನಿ ಬನ್ನಿ ನಮ್ ಕಾಡಿನವರು ಅಂತ ಕರೀತಾ ಇದ್ರು. ಜನರನ್ನ ಬಹಳ ಗೌರವಯುತವಾಗಿ ಮಾತಾಡಿಸುವ ಸಂಸ್ಕೃತಿಯನ್ನ ರೂಢಿಸಿಕೊಂಡಿದ್ದರು, ಅದನ್ನ ನಾವು ಸಹ ರೂಢಿಸಿಕೊಳ್ಳಬೇಕು. ಎಲ್ಲರನ್ನು ಗೌರವಿಸುವುದನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ರಾಜಕುಮಾರ್ ರಿಂದ ಕಲೀಬೇಕು, ಮಕ್ಕಳಂತಿದ್ದವರು ರಾಜಕುಮಾರ್, ಅವರು ಯಾವತ್ತು ಕೆಟ್ಟದ್ದನ್ನ ಯೋಚನೆ ಮಾಡಿರಲಿಲ್ಲ ಎಂದು ಗುಣಗಾನ ಮಾಡಿದರು. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್
Advertisement
ನಾನು ರಾಜ್‌ಕುಮಾರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಿನಿ ಅವರು ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದರು ಎಂದ ಸಿದ್ದರಾಮಯ್ಯ, ನಮ್ಮ ದೇಶದಲ್ಲಿ ಚಾರಿತ್ರಿಕ ಕಾರಣದಿಂದ ಹಲವಾರು ಮಂದಿಗೆ ಶಿಕ್ಷಣ ಸಿಕ್ಕಿರಲಿಲ್ಲ. ನೂರಾರು ವರ್ಷಗಳ ಕಾಲ ಬಹು ಸಂಖ್ಯಾತ ಜನ ಶಿಕ್ಷಣದಿಂದ ವಂಚಿತರಾಗಿದ್ದರು. ಜಾತಿ ವ್ಯವಸ್ಥೆ ಮತ್ತು ಶಿಕ್ಷಣದ ಕಾರಣದಿಂದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ದಿ ಆಗಿರಲಿಲ್ಲ ಎಂದರು. ಡಾ.ರಾಜ್‌ಕುಮಾರ್ ಅವರು ಸರಳತೆ ಸಂಸ್ಕಾರದ ರಾಯಭಾರಿ ಆಗಿದ್ರು ಎಂದು ಸಿಎಂ ಮಾತನಾಡಿದ್ದರು. ಅಪ್ಪು ಅವರನ್ನ ಕೂಡ ಈ ವೇಳೆ ಸ್ಮರಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಡಾ ರಾಜ್‌ಕುಮಾರ್ ಅಕಾಡೆಮಿ ಹಾಗೂ ರಾಜ್ ಕುಟುಂಬ ಸನ್ಮಾನ ಮಾಡಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ದೊಡ್ಮನೆ ಕುಟುಂಬದ ಇನ್ನೂ ಕೆಲವರು ಭಾಗಿಯಾಗಿದ್ದರು.