– ಸಿದ್ದರಾಮಯ್ಯ, ಡಿಕೆಶಿಯ ಕೈಕುಲುಕಿದ ಕುಮಾರಸ್ವಾಮಿ
ನವದೆಹಲಿ: ರಾಜಕೀಯವಾಗಿ ಎಷ್ಟೇ ವಿರೋಧ ಇರಲಿ ಮುಖಾಮುಖಿಯಾದಾಗ ಮಾತ್ರ ರಾಜ್ಯದ ರಾಜಕಾರಣಿಗಳು ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸುವ ಪರಂಪರೆ ಇದ್ದು ಈಗಲೂ ಇದು ಮುಂದುವರೆದಿದೆ.
Advertisement
ದೆಹಲಿಯಲ್ಲಿ ಸಿಎಂ-ಡಿಸಿಎಂ ಕರೆದಿದ್ದ ರಾಜ್ಯ ಸಂಸದರ ಸಭೆಯಲ್ಲಿ ಅಪರೂಪದ ದೃಶ್ಯಗಳು ಕಂಡುಬಂದವು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೇಂದ್ರ ಮಂತ್ರಿ ಕುಮಾರಸ್ವಾಮಿಯನ್ನು (HD Kumaraswamy) ಕಂಡ ಕೂಡಲೇ ಶೇಕ್ ಹ್ಯಾಂಡ್ ಮಾಡಿದರು. ಇದನ್ನೂ ಓದಿ: ನಾಳೆ ದಕ್ಷಿಣ ಕನ್ನಡದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ – ಎಲ್ಲೆಲ್ಲಿ ಏನಾಗಿದೆ?
Advertisement
Advertisement
ಚನ್ನಪಟ್ಟಣ ಪಾಲಿಟಿಕ್ಸ್ ಹೊತ್ತಲ್ಲೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕುಮಾರಸ್ವಾಮಿ ಹಸ್ತಲಾಘವ ಮಾಡಿಕೊಂಡರು. ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ಸಹೋದರನನ್ನು ಸೋಲಿಸಿದ್ದ ಡಾ.ಮಂಜುನಾಥ್ ಅವರಿಗೂ ಉಪಮುಖ್ಯಮಂತ್ರಿಗಳು ಕೈಕುಲಕಿದ್ರು. ಇದನ್ನೂ ಓದಿ: ಮೂರೇ ದಿನಗಳ ಒಳಗೆ ಸಿಕ್ಕಿಂನಲ್ಲಿ 70 ಅಡಿ ಸೇತುವೆ ನಿರ್ಮಿಸಿದ ಸೇನೆ!
Advertisement
ರಾಜ್ಯಕ್ಕೆ ಸಂಬಂಧಿಸಿದ ಬಾಕಿ ಇರುವ ಯೋಜನೆ, ಬಾಕಿ ಅನುದಾನ ಬಿಡುಗಡೆಗೆ ಸಹಕರಿಸುವಂತೆ ಕೇಂದ್ರ ಮಂತ್ರಿಗಳನ್ನು, ಸಂಸದರನ್ನು ಸಿಎಂ-ಡಿಸಿಎಂ ಮನವಿ ಮಾಡಿಕೊಂಡರು.
ಶನಿವಾರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯನ್ನು ಸಿಎಂ ಭೇಟಿ ಮಾಡಲಿದ್ದಾರೆ. ಈ ಸಭೆಗೂ ಮುನ್ನ ಟ್ವೀಟ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರದ ಜೊತೆ ಸಂಘರ್ಷ, ಮೋದಿ ಟಾರ್ಗೆಟ್ ಕೈಬಿಟ್ಟು, ರಾಜ್ಯದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವಂತೆ ಕಾಂಗ್ರೆಸ್ ಪಕ್ಷವನ್ನು ಕೋರಿದ್ದಾರೆ.