ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್‌ ಕೊಟ್ಟ ಕಾಂಗ್ರೆಸ್‌

Public TV
1 Min Read
DK Shivakumar laxman Savadi

ಬೆಳಗಾವಿ: ಲೋಕಸಭಾ ಚುನಾವಣೆಗೆ (Lok Sabha Election) ದಿನಗಣನೆ ಶುರುವಾಗಿದೆ. ಚಿಕ್ಕೋಡಿ (Chikkodi Lok Sabha constituency) ಅಖಾಡವನ್ನು ಗೆಲ್ಲಲು ಕಾಂಗ್ರೆಸ್ (Congress) ಸ್ಪೆಷಲ್ ರಣತಂತ್ರ ಹೆಣೆದಿದೆ. ಚಿಕ್ಕೋಡಿ ಕ್ಷೇತ್ರ ಗೆಲ್ಲಲು ಲಕ್ಷ್ಮಣ ಸವದಿಗೆ (Lakshman Savadi) ಸ್ಪೆಷಲ್ ಟಾಸ್ಕ್ ನೀಡಿ ಆಫರ್ ಒಂದನ್ನು ನೀಡಿದೆ.

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಈಗಿನಿಂದಲೇ ರಣತಂತ್ರ ರೂಪಿಸಲು ಆರಂಭಿಸಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನ ಶತಾಯ ಗತಾಯ ಗೆಲ್ಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಮತ್ತೆ ಸಿಬಿಐ ವಶಕ್ಕೆ ಶೇಖ್ ಶಹಜಹಾನ್ – ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗ!

 

ಬೆಳಗಾವಿಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ 1,480 ಕೋಟಿ ರೂ ಮೊತ್ತದ ಅಮ್ಮಾಜೇಶ್ವರಿ ಏತ ನೀರಾವರಿಗೆ ಸಿಎಂ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಚಿಕ್ಕೋಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಫಿಕ್ಸ್ ಎಂದು ಡಿಕೆಶಿ ಭರವಸೆ ನೀಡುವುದರ ಜೊತೆಗೆ ಕಾಂಗ್ರೆಸ್ ಗೆಲ್ಲಿಸುವ ಟಾಸ್ಕ್ ನೀಡಿದ್ದಾರೆ.  ಇದನ್ನೂ ಓದಿ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮನವಿ ಮಾಡಿದ ಸಿಎಂ, ಡಿಸಿಎಂ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು. ಸುಳ್ಳೇ ಬಿಜೆಪಿ ಅವರ ಮನೆ ದೇವರು. ಬಿಜೆಪಿ ಅವರನ್ನು ನಂಬದೇ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು. ಮುಂದಿನ ದಿನದಲ್ಲಿ ಶಾಸಕ ಲಕ್ಷ್ಮಣ ಸವದಿಗೆ ಭವಿಷ್ಯವಿದೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಸವದಿಗೆ ಮಂತ್ರಿಗಿರಿ ನೀಡುವ ಮೂನ್ಸೂಚನೆ ನೀಡಿದರು.

 

Share This Article