ಬೆಂಗಳೂರು: ಗೃಹ ಸಚಿವ ಪರಮೇಶ್ವರ್ (Parameshwar) ಆಯೋಜಿಸಿದ್ದ ಡಿನ್ನರ್ ಸಭೆಗೆ (Dinner Meeting) ಬ್ರೇಕ್ ಹಾಕಿದ ಬಳಿಕ ಕಾಂಗ್ರೆಸ್ ಭಿನ್ನಮತ ತಾರಕಕ್ಕೆ ಏರಿದೆ.
ಡಿನ್ನರ್ ಪಾಲಿಟಿಕ್ಸ್ ಮಾಡಿದ್ದ ಸಿಎಂ ಬಣಕ್ಕೆ, ವಿದೇಶದಿಂದ ವಾಪಸ್ ಆಗುತ್ತಲೇ ಹೈಕಮಾಂಡ್ ಮೂಲಕ ಸೈಲೆಂಟಾಗಿ ಶಾಕ್ ನೀಡುವ ಕೆಲಸವನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾಡಿದ್ದರು. ಈಗ ಡಿನ್ನರ್‌ಗೆ ಬ್ರೇಕ್ ಹಾಕಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಬಣ ಕೆರಳಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜ.13 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Advertisement
ಈ ಸಿಎಲ್‌ಪಿ ಸಭೆಯಲ್ಲಿ ಎರಡು ಬಣಗಳ ನಡುವೆ ಬಲಾಬಲ ಪ್ರದರ್ಶನ ಆಗಿಯೇ ಬಿಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ ಸಭೆಯಲ್ಲಿ ಡಿಕೆಶಿ ವಿರುದ್ಧ ನಾಯಕರು ಸಿಡಿಮಿಡಿಗೊಳ್ಳುವ ಸಾಧ್ಯತೆಯಿದೆ. ಸಚಿವರ ಜೊತೆಗೆ ಕೆಲ ಶಾಸಕರೂ ಧ್ವನಿಗೂಡಿಸಿದರೆ ಸಭೆಯ ದಿಕ್ಕು ಬದಲಾಗಬಹುದು.
Advertisement
ಸಭೆಗೂ ಮೊದಲೇ ಯಾವ ವಿಚಾರ ಚರ್ಚಿಸಬೇಕು? ಯಾವುದು ಬೇಡ ಎಂದು ಮೊದಲೇ ಅಜೆಂಡಾ ಹಾಕಿ ಸಿಎಂ ಸಂದೇಶ ರವಾನಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಹೈಕಮಾಂಡ್‌ನಿಂದ ರಾಜ್ಯ ಉಸ್ತುವಾರಿ ಸುರ್ಜೇವಾಲಾ (Randeep Surjewala) ಆಗಮಿಸಿದರೆ ಸಭೆ ಶಾಂತವಾಗಿ ನಡೆಯಬಹುದು. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ವಿಚಾರ ಚರ್ಚೆಯಾಗಬಹುದು ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!
Advertisement
Advertisement
ಡಿನ್ನರ್ ಸಭೆ ರದ್ದಾಗಿದ್ದಕ್ಕೆ ಗರಂ ಆದ ಪರಮೇಶ್ವರ್, ಡಿನ್ನರ್ ಬಗ್ಗೆ ಹೈಕಮಾಂಡ್ ಅಪಾರ್ಥ ಮಾಡಿಕೊಂಡಿರುವುದು ಗೊತ್ತಿಲ್ಲ. ಡಿಸಿಎಂ ದೂರು ಕೊಟ್ಟಿರುವುದು ಗೊತ್ತಿಲ್ಲ. ಯಾರು ಕೂಡ ನಮ್ಮ ಸಭೆ ಸಹಿಸಲ್ಲ ಎಂದಿಲ್ಲ. ಒಂದೊಮ್ಮೆ ಯಾರಾದ್ರೂ ಹಾಗೆ ಮಾತನಾಡಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗೂ ಇದೆ ಎಂದು ಯಾರ ಹೆಸರು ಹೇಳದೇ ಪ್ರತಿಕ್ರಿಯಿಸಿದ್ದಾರೆ.
ರಾಜಣ್ಣ ಮಾತನಾಡಿ, ನಾವೇನೂ ಅವರ ಆಸ್ತಿ ಬರೆಸಿಕೊಂಡಿದ್ದೀವಾ? ಎಸ್‌ಸಿ, ಎಸ್‌ಟಿ ಮಕ್ಕಳ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಇದನ್ನು ಮಾಡ್ಬೇಡಿ ಅಂದ್ರೆ ಹೇಗೆ? ಇವೆಲ್ಲಾ ಬಹಳಷ್ಟು ದಿನ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು – ಪತಿ ಆತ್ಮಹತ್ಯೆಗೆ ಯತ್ನ
ನಮ್ಮ ಊಟ ನಮ್ಮದು. ಬೇರೆಯವರಿಗೆ ಏನು ಸಂಬಂಧ? ಅವರಿಗೇಕೆ ಆತಂಕ ಎಂದು ಸತೀಶ್ ಜಾರಕಿಹೊಳಿ ಖಾರವಾಗಿ ಹೇಳಿಕೆ ನೀಡಿದ್ದಾರೆ.