ಬೆಂಗಳೂರು: ಪಬ್ಲಿಕ್ ಟಿವಿ ಕ್ಯಾಮೆರಾ ನೋಡುತ್ತಿದ್ದಂತೆ ಮಾಜಿ ಸಚಿವ ಸುರೇಶ್ ಗೌಡ ಕಾಲ್ಕಿತ್ತ ಪ್ರಸಂಗ ಇಂದು ನಡೆದಿದೆ.
ನಿನ್ನೆ ಸುರೇಶ್ ಗೌಡ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ವಿಧಾನಸೌಧದಲ್ಲಿ ಸ್ಪಷ್ಟನೆ ಕೇಳಲು ಪಬ್ಲಿಕ್ ಟಿವಿ ಮುಂದಾದಾಗ ಕ್ಯಾಮೆರಾ ನೋಡಿ ಸುರೇಶ್ ಗೌಡ ಯಾವುದೇ ಪ್ರತಿಕ್ರಿಯೆ ನೀಡದೇ ಓಡಿ ಹೋಗಿದ್ದಾರೆ.
Advertisement
Advertisement
ಲೋಗೋ ನೋಡದೇ, ಈಗಾಗಲೇ ಸಿಎಂ ಜಾಡಿಸ್ತಿದ್ದಾರೆ. ಈಗ ಮತ್ತೆ ಮಾತಾಡಿದ್ರೆ ಇನ್ನೂ ಹತ್ತಿಕೊಳ್ಳುತ್ತೆ ಎಂದು ಹೇಳಿ ಮೆಟ್ಟಿಲು ಇಳಿಯುತ್ತಾ ಮುಂದಕ್ಕೆ ಸಾಗಿದ್ದಾರೆ.
Advertisement
ಸಿಎಂ ಕ್ಲಾಸ್: ಸುರೇಶ್ ಗೌಡಗೆ ಸಿಎಂ ಬೊಮ್ಮಾಯಿ ಫುಲ್ ಕ್ಲಾಸ್ ಮಾಡಿದ್ದಾರೆ. ಕರೆ ಮಾಡಿದ ಸಿಎಂ ಹೀಗೆಲ್ಲ ಮಾತಾಡಿದ್ದು ಸರಿಯಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್‌ಗೆ ಟೀಕೆ ಮಾಡಲು ಆಹಾರ ಒದಗಿಸಿದ್ದಕ್ಕೆ ಸುರೇಶ್ ಗೌಡ ವಿರುದ್ಧ ಶಿಸ್ತು ಕ್ರಮಕ್ಕೆ ಬೊಮ್ಮಾಯಿ ಆಪ್ತರು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದಿಂದ ಸ್ಪಷ್ಟನೆ ಕೇಳಿ ನೋಟಿಸ್ ನೀಡುವ ಸಾಧ್ಯತೆಯಿದೆ.
ಸುರೇಶ್ ಗೌಡ ಹೇಳಿದ್ದೇನು?
ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ 1 ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಕ್ಷ ಏನು ನಿರ್ಧಾರ ತೆಗೆದು ಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಗೆ 6-7 ತಿಂಗಳುಗಳು ಇರಬೇಕಾದರೆಯೇ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಆಗಸ್ಟ್ 15ರ ಒಳಗೆ ಎಲ್ಲವೂ ಆಗಬಹುದು ಎನ್ನುವ ಅಭಿಪ್ರಾಯ ನನ್ನದು ಎಂದು ಹೇಳಿದ್ದರು.