ಬೆಂಗಳೂರು : ಸಿಎಂ ಯಡಿಯೂರಪ್ಪ ಅಂದ್ರೆ ಕೋಪ, ಶಿಸ್ತು, ಗಾಂಭೀರ್ಯ ಅಂತೆಲ್ಲ ಮಾತನಾಡುವುದು ಸಹಜ. ಆದ್ರೆ ಯಡಿಯೂರಪ್ಪನವರ ಮನಸ್ಸು ಮಗುವಿನಂತಹ ಮನಸ್ಸು ಅಂತ ಎಷ್ಟೇ ಜನರಿಗೆ ಗೊತ್ತಿಲ್ಲ.
ಯಡಿಯೂರಪ್ಪನವರಿಗೆ ಮಕ್ಕಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಮಕ್ಕಳನ್ನ ಕಂಡರೆ ಯಡಿಯೂರಪ್ಪನವರು ಮಗುವೇ ಆಗಿ ಬಿಡ್ತಾರೆ. ಇವತ್ತು ಕೂಡಾ ಯಡಿಯೂರಪ್ಪನವರ ರಾಜಕೀಯ ಜಂಜಾಟ ಬಿಟ್ಟು, ಮಗುವೊಂದರ ಜೊತೆ ಮಗುವೇ ಆಗಿಬಿಟ್ಟ ದೃಶ್ಯ ಕಂಡು ಬಂತು.
ಇಂದು ಸಿಎಂ ಯಡಿಯೂರಪ್ಪ ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆಗೆ ಹೋಗಿದ್ದರು. ಈ ವೇಳೆ ಅ ಕಾರ್ಯಕ್ರಮಕ್ಕೆ ಮಹಿಳೆಯೊಬ್ಬರು ಬಂದಿದ್ದರು. ಅ ಮಹಿಳೆಯ ಮುದ್ದಾಗ ಕಂದಮ್ಮನನ್ನ ಕಂಡ ಸಿಎಂ ಯಡಿಯೂರಪ್ಪ ಕೆಲ ಕಾಲ ಮಗುವಾಗಿಯೇ ಬಿಟ್ಟರು.
ಪುಟ್ಟ ಕಂದಮ್ಮನ್ನ ಮುದ್ದಾಗಿ ಮಾತಾಡಿಸಿದ ಸಿಎಂ ಯಡಿಯೂರಪ್ಪ ಮಗುವಿನ ಕೆನ್ನೆ ಸವರಿ, ತಲೆ ಮುಟ್ಟಿ ಆತ್ಮೀಯವಾಗಿ ಮಾತಾಡಿಸಿದ್ರು. ಯಡಿಯೂರಪ್ಪ ಮಗುವಿನೊಂದಿಗಿನ ಆ ಕ್ಷಣ ಯಡಿಯೂರಪ್ಪನವರ ಮಗುವಿನ ಮನಸ್ಸನ್ನ ತಿಳಿಸಿತು. ಇಷ್ಟಕ್ಕೆ ಸುಮ್ಮನಾಗದ ಯಡಿಯೂರಪ್ಪ ಅ ಮಗು ಹಾಗೂ ಆಕೆಯ ತಾಯಿಯ ಜೊತೆ ಫೋಟೋ ತೆಗೆಸಿಕೊಂಡ್ರು. ಅ ಪುಟ್ಟ ಕಂದಮ್ಮ ಕೂಡಾ ಯಡಿಯೂರಪ್ಪ ಅವರನ್ನು ನೋಡಿ ಖುಷಿ ಪಡ್ತು. ಒಟ್ಟಿನಲ್ಲಿ ಇವತ್ತು ರಾಜಕೀಯ ಜಂಜಾಟ ಬಿಟ್ಟು ಸಿಎಂ ಯಡಿಯೂರಪ್ಪ ಒಂದು ಕ್ಷಣ ಮಗುವಾಗಿಯೇ ಬಿಟ್ಟಿದ್ದರು.