ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಾದ @ಸಿಎಂ ಆಫ್ ಕರ್ನಾಟಕ ಕೆಲವು ನಿಮಿಷಗಳ ಕಾಲ ಹ್ಯಾಕ್ ಆಗಿದೆ.
Advertisement
ಇಂದು ಬೆಳಗ್ಗೆ 6 ಗಂಟೆಯಿಂದ 6.18 ರವರೆಗೆ 18 ನಿಮಿಷಗಳ ಕಾಲ ಟ್ವಿಟ್ಟರ್ ಖಾತೆ ಹ್ಯಾಕ್ ಹಾಗಿರುವ ಬಗ್ಗೆ ಟ್ವೀಟಿಗರು ಅನುಮಾನ ವ್ಯಕ್ತಪಡಿಸಿದ್ದರು. ನೂರಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಿ ಹ್ಯಾಕ್ ಆಗಿರುವ ಬಗ್ಗೆ ಸಿಎಂ ಟ್ವೀಟ್ ಫಾಲೋವರ್ಸ್ ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು
Advertisement
ಮುಖ್ಯಮಂತ್ರಿ @BSBommai ಅವರು ಇಂದು ಶಿಗ್ಗಾಂವಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್- ಮನೆ ಮನೆಗೆ ಗಂಗೆ ಯೋಜನೆಯಡಿ 301 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಲ್ಲಿಯ ನೀರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಡಿದು ತಪಾಸಣೆ ಮಾಡಿದರು.#JalJeevanMission pic.twitter.com/0XQPgLB2nT
— CM of Karnataka (@CMofKarnataka) March 26, 2022
Advertisement
ಅಲ್ಲದೇ ಇತ್ತೀಚೆಗೆ ಖಾತೆ ತೆರೆದವರ ಪ್ರೊಫೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿತ್ತು ಇದನ್ನು ಗಮನಿಸಿದಾಗ ಹ್ಯಾಕ್ ಆಗಿರುವ ಬಗ್ಗೆ ಅನುಮಾನ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಎಂ ಕಚೇರಿಯ ಸೋಷಿಯಲ್ ಮೀಡಿಯಾ ಟೀಂ, ಎಲ್ಲ ಟ್ವೀಟ್‍ಗಳನ್ನು ಅಳಿಸಿಹಾಕಿ ಖಾತೆಯನ್ನು ಸರಿಪಡಿಸಿದೆ. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ
Advertisement
ಕೆಲ ತಿಂಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟ್ಟರ್ ಖಾತೆಯು ಹ್ಯಾಕ್ ಆಗಿತ್ತು.