ಬೆಂಗಳೂರು: ಎಲ್ಲಾ ರೀತಿಯ ಪ್ರತ್ಯೇಕ ಸಭೆ, ಊಟ, ಡಿನ್ನರ್ ಮೀಟಿಂಗ್ ಯಾವುದಕ್ಕೂ ಅವಕಾಶ ಇಲ್ಲ. ಎಲ್ಲದಕ್ಕೂ ಬ್ರೇಕ್ ಹಾಕಿ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ತಾಕೀತು ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಖಾಸಗಿ ಹೋಟೆಲಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಮಾತನಾಡಿದ ಅವರು, ಸಮುದಾಯದ ಸಭೆ, ಸಮುದಾಯದ ನಾಯಕರ ಸಭೆ ಮಾಡಬೇಕಾದ ಯಾವುದೇ ಪರಿಸ್ಥಿತಿ ಬಂದರೂ ಹೈಕಮಾಂಡ್ ಅನುಮತಿ ಪಡೆದು ಮಾಡಬೇಕು. ಬಹಿರಂಗವಾಗಿ ಮಾತನಾಡುವ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ಚರ್ಚೆ ಹೊತ್ತಲ್ಲೇ ಸಿಎಂ ತ್ಯಾಗದ ಮಾತು!
Advertisement
Advertisement
ನೀವು ಏನೇ ಮಾತನಾಡಿದರೂ ಅದು ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಏನಿದ್ದರೂ ಬಿಜೆಪಿಯವರ (BJP) ವಿರುದ್ದ ಮಾತನಾಡಿ. ಅವರು ಆರೋಪ ಮಾಡುತ್ತಿರುತ್ತಾರೆ. ನೀವು ನಿಮ್ಮ ಪಾಡಿಗೆ ಸುಮ್ಮನೆ ಇರುತ್ತೀರಿ. ಪಕ್ಷದ ಬಗ್ಗೆ ಮಾತನಾಡುವುದಲ್ಲ. ಬಿಜೆಪಿಯವರ ಆರೋಪದ ವಿರುದ್ದ ಮೊದಲು ಮಾತನಾಡಿ ಎಂದು ಹೇಳಿದರು.
Advertisement
ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಯ ಮಧ್ಯೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ. ಹ ಕಮಾಂಡ್ ಮುಂದೆ, ಸಿಎಂ ಹಾಗೂ ಡಿಸಿಎಂ ಮುಂದೆ ಮಾತನಾಡಿ ಎಂದು ಎಲ್ಲಾ ಶಾಸಕರಿಗೆ ತಾಕೀತು ಮಾಡಿದರು. ಇದನ್ನೂ ಓದಿ: ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!
Advertisement