ಬೆಂಗಳೂರು: ವಿಧಾನಸಭಾ ಚುನಾವಣೆ ಆದ ದಿನದಿಂದ ಸಾಲ ಮನ್ನಾಕ್ಕೆ ಕಾತರದಿಂದ ಕಾಯುತ್ತಿರುವ ಕರ್ನಾಟಕದ ರೈತರ ನಿರೀಕ್ಷೆಗಳಿಗೆ ಇಂದು ಅಧಿಕೃತ ಉತ್ತರ ಸಿಗಲಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆಗಲಿದೆ.
ಇಂದು ಬೆಳಗ್ಗೆ 11.30 ನಿಮಿಷಕ್ಕೆ ಹಣಕಾಸು ಸಚಿವರೂ ಆಗಿರುವ ಹೆಚ್‍ಡಿ ಕುಮಾರಸ್ವಾಮಿ ಆಯವ್ಯಯವನ್ನು ಮಂಡಿಸಲಿದ್ದಾರೆ. ಇದು ಅವರ ಪಾಲಿಗೆ 2ನೇ ಸಮ್ಮಿಶ್ರ ಬಜೆಟ್ ಕೂಡಾ ಹೌದು. ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಸಹಕಾರಿ ಸಂಘಗಳ ಮತ್ತು ರಾಷ್ಟ್ರೀಕೃತ ಬ್ಯಾಂಕು ಸಾಲಮನ್ನಾ ಮಾಡೋದಾಗಿ ವಾಗ್ದಾನ ಮಾಡಿದ್ದ ಕುಮಾರಸ್ವಾಮಿ ಬಜೆಟ್‍ನಲ್ಲಿ ಆ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಅಸೆಂಬ್ಲಿಯನ್ನ ಹುಚ್ಚಾಸ್ಪತ್ರೆ ಮಾಡ್ಬೇಡಿ: ಶಾಸಕರ ವಿರುದ್ಧ ರಮೇಶ್ ಕುಮಾರ್ ಗರಂ
Advertisement
ಪೂರ್ಣ ಪ್ರಮಾಣದ ಹೊಸ ಬಜೆಟ್ ಅಗತ್ಯತೇ ಇಲ್ಲ, ಸಾಲ ಮನ್ನಾ ಸಿದ್ದರಾಮಯ್ಯ ಮಾಡಿದ್ದ ಟೀಕೆ ಟಿಪ್ಪಣಿಗಳ ನಡುವೆಯೂ ಸಮನ್ವಯ ಸಮಿತಿ ಸಾಲ ಮನ್ನಾಕ್ಕೆ ಒಪ್ಪಿಕೊಂಡಿದೆ. ದೋಸ್ತಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭಾಗ್ಯದ ಕಾರ್ಯಕ್ರಮಗಳಿಗೂ ಬಜೆಟ್‍ನಲ್ಲಿ ಅವಕಾಶ ನೀಡಲೇಬೇಕಾದ ಅನಿವಾರ್ಯತೆಯಲ್ಲಿರುವ ಕುಮಾರಸ್ವಾಮಿ, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅತ್ಯಂತ ಜನಪ್ರಿಯ ಭರವಸೆಗಳನ್ನು ಕಾರ್ಯಕರ್ತಗೊಳಿಸುವುದು ಕಷ್ಟ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಜೆಟ್‍ನಲ್ಲಿ ಎಚ್‍ಡಿಕೆ ಏನೇನು ಘೋಷಿಸಬಹುದು? ಸಾಲಮನ್ನಾ ಹೇಗಿರಬಹುದು?
Advertisement
ಇನ್ನು ಇಂದು ಬಜೆಟ್ ಇರುವುದರಿಂದ ಕುಮಾರಸ್ವಾಮಿ ಅವರು ನಾಲ್ಕು ದಿನದಿಂದ ಖಾಸಗಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದಾರೆ. ಬಜೆಟ್ ಒತ್ತಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಗೆ ಹೋಗಿಲ್ಲ. ಹೀಗಾಗಿ ಅವರು ರೇಸ್‍ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ತಂಗಿದ್ದಾರೆ. ಇತ್ತ ನಾಡಿನ ದೊರೆ ಸಿಗ್ತಾರಂತೆ ಜೆಪಿ ನಗರದಲ್ಲಿರುವ ಮನೆಯ ಬಳಿ ಜನ ಕಾದು ಕುಳಿತಿದ್ದಾರೆ. ಇನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಇಂಡಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ ಡಿ ಪಾಟೀಲ್ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಇದನ್ನೂ ಓದಿ:ರೈತರಿಗೆ ಮೋದಿಯಿಂದ ಬಂಪರ್ ಗಿಫ್ಟ್: ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ? ಇಲ್ಲಿದೆ ಪೂರ್ಣ ಮಾಹಿತಿ