ಬೆಂಗಳೂರು: ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಇಂದು ಪ್ರಕಟವಾಗಿದೆ.
ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದ್ದಾರೆ. ಬೆಂಗಳೂರಿನ ಮಾರತ್ ಹಳ್ಳಿಯ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ಎಂಜಿನಿಯರ್ ವಿದ್ಯಾರ್ಥಿ ಜಫಿನ್ ಬಿಬು ಮೊದಲ ರ್‍ಯಾಂಕ್ ಪಡೆದುಕೊಂಡಿದ್ದಾನೆ.
Advertisement
ನ್ಯಾಚಿರೋಪತಿ ಮತ್ತು ಯೋಗ ವಿಭಾಗದಲ್ಲಿ ಪಿ ಮಹೇಶ್ ಆನಂದ್, ಪಶು ವೈದ್ಯಕೀಯ ವಿಭಾಗದಲ್ಲಿ ಪಿ.ಮಹೇಶ್ ಆನಂದ್, ಬಿ ಫಾರ್ಮ್ ಡಿ ಫಾರ್ಮ್ ನಲ್ಲಿ ಸಾಯಿ ಸಾಕೇತ್ ಚಕುರಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ ಎಂಜಿನಿಯರ್, ನ್ಯಾಚಿರೋಪತಿ, ಪಶು ವೈದ್ಯಕೀಯ, ಬಿ ಫಾರ್ಮ್ ನಲ್ಲಿ ಮಾರತ್‍ಹಳ್ಳಿಯ ಚೈತನ್ಯ ಟೆಕ್ನೊ ಪಿಯು ಕಾಲೇಜ್ ಮೊದಲ ರ್‍ಯಾಂಕ್ ಪಡೆದುಕೊಂಡಿದೆ.
Advertisement
Advertisement
ಬಿಎಸ್‍ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿ ಕೀರ್ತನ್ ಎಂ.ಅರುಣ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
Advertisement
ಈ ಬಾರಿ 1,80,315 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಎಂಜಿನಿಯರಿಂಗ್‍ನಲ್ಲಿ 1,40,957, ನ್ಯಾಚಿರೋಪತಿ – ಯೋಗ- 1,17,947, ಬಿಎಸ್‍ಸಿ ಕೃಷಿ- 1,13,294, ಪಶು ವೈದ್ಯಕೀಯ – 1,18,045, ಬಿ ಫಾರ್ಮ್ – 1,46,546, ಡಿ ಫಾರ್ಮ್ – 1,46,759 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ.
ಎಂಜಿನಿಯರ್ ಟಾಪ್ 3
1. ಜಫಿನ್ ಬಿಜು, ಚೈತನ್ಯ ಟೆಕ್ನೋ ಬೆಂಗಳೂರು.
2. ಚಿನ್ಮಯಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.
3. ಸಾಯಿ ಸಾಕೇತಿಕ ಚಕುರಿ, ಚೈತನ್ಯ ಟೆಕ್ನೊ ಬೆಂಗಳೂರು.
ನ್ಯಾಚಿರೋಪತಿ ಮತ್ತು ಯೋಗ ಟಾಪ್ 3
1. ಮಹೇಶ್ ಆನಂದ್, ಚೈತನ್ಯ ಟೆಕ್ನೊ ಬೆಂಗಳೂರು.
2. ವಿ.ವಾಸುದೇವ, ಬೇಸ್ ಪಿಯು ಕಾಲೇಜ್ ಮೈಸೂರು.
3. ಉದೀತ್ ಮೋಹನ್, ನಾರಾಯಣ ಇ ಟೆಕ್ನೊ ಬೆಂಗಳೂರು.
ಬಿಎಸ್ ಸಿ ಕೃಷಿ ಟಾಪ್ 3
1. ಕೀರ್ತನಾ ಎಂ, ಅರುಣ್, ನ್ಯಾಷನಲ್ ಪಬ್ಲಿಕ್ ಸ್ಕೂಲ್.
2. ಭುವನ್, ವಿಬಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.
3. ಶ್ರೀಕಾಂತ್.ಎಂ.ಎಲ್, ಮಾಸ್ಟರ್ಸ್ ಪಿಯು ಕಾಲೇಜ್ ಹಾಸನ.
ಪಶು ವೈದ್ಯಕೀಯ ಟಾಪ್ 3
1. ಮಹೇಶ್ ಆನಂದ್, ಚೈತನ್ಯ ಟೆಕ್ನೊ ಕಾಲೇಜ್, ಬೆಂಗಳೂರು.
2. ಉದೀತ್ ಮೋಹನ್, ನಾರಾಯಣ ಇ ಟೆಕ್ನೊ ಬೆಂಗಳೂರು.
3. ಬಿವಿಎಸ್‍ಎನ್ ಸಾಯಿರಾಮ್, ಚೈತನ್ಯ ಟೆಕ್ನೊ, ಬೆಂಗಳೂರು.
ಬಿ ಮತ್ತು ಡಿ ಫಾರ್ಮ್
1. ಸಾಯಿ ಸಾಕೇತಿಕ ಚಕುರಿ, ಚೈತನ್ಯ ಟೆಕ್ನೊ ಬೆಂಗಳೂರು.
2. ಜಫಿನ್ ಬಿಜು, ಚೈತನ್ಯ ಟೆಕ್ನೊ, ಬೆಂಗಳೂರು.
3. ಆರ್.ಚಿನ್ಮಯಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.
ಫಲಿತಾಂಶ ಲಭ್ಯವಾಗುವ ವೆಬ್ ಸೈಟ್‍ಗಳು: