– ಗುರುವಾರಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ರಾಜ್ಯದಲ್ಲಿ ಜಾತಿ ಸಮೀಕ್ಷೆ (Caste Survey) ವಿಚಾರವಾಗಿ 2ನೇ ದಿನವೂ ಹೈಕೋರ್ಟ್ (High Court) ವಿಚಾರಣೆ ನಡೆಸಿದ್ದು ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.
ಇಂದಿನ ವಿಚಾರಣೆ ವೇಳೆ ಕೋರ್ಟ್ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆಧಾರ್ ನಂಬರ್ (Aadahar No) ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸಾಕಷ್ಟು ಸೈಬರ್ ಅಪರಾಧಗಳು (Cyber Crime) ನಡೆಯುತ್ತಿವೆ. ಇಲ್ಲಿ ಖಾಸಗಿತನದ ವಿಚಾರವಿದೆ. ಗಣತಿಗೆ ತಡೆ ನೀಡಿದರೆ 350 ಕೋಟಿ ರೂ. ಹಣ ಸರ್ಕಾರಕ್ಕೆ ಉಳಿಯುತ್ತಾ ಎಂದು ಪ್ರಶ್ನಿಸಿದೆ.
ಸರ್ಕಾರದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿ, ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಸರ್ವೆಗೆ ಅವಕಾಶ ಇದೆ. ಇದು ಗಣತಿಯಲ್ಲ, ಹಿಂದುಳಿದವರ ಪತ್ತೆಗೆ ಮಾಡುತ್ತಿರುವ ಕ್ರಮ. ಮಧ್ಯಂತರ ತಡೆಯಾಜ್ಞೆ ನೀಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯೂಟ್ಯೂಬರ್ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್
ಇದಕ್ಕೆ ಕೇಂದ್ರ ಸರ್ಕಾರದ ಪರ ಎಎಸ್‌ಜಿ ಅರವಿಂದ್ ಕಾಮತ್ ಆಕ್ಷೇಪಿಸಿ, ಗಣತಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಗಣತಿ ಮಾಡಲು ಅಧಿಕಾರವಿದೆ. ಅದನ್ನು ಹೊರತುಪಡಿಸಿ ರಾಜ್ಯಕ್ಕೆ ಅಧಿಕಾರ ಇಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಾದ ಮುಂದಿಟ್ಟರು. ಇದನ್ನೂ ಓದಿ: ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ
ಹಿಂದುಳಿದ ವರ್ಗಗಳ ಆಯೋಗದ ಪರ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ನಾವು ಯಾವುದೇ ಜಾತಿಯನ್ನು ಸೃಷ್ಟಿಸಿಲ್ಲ. ಈ ಹಿಂದಿನ ಸರ್ವೆಗಳ ಮಾಹಿತಿ ಆಧರಿಸಿ 1,561 ಜಾತಿಯನ್ನು ಗುರುತಿಸಿದೆ. ನಮ್ಮ ಜಾತಿ ಸೇರಿಸಿಲ್ಲ ಅಂತ ಕೆಲವರ ಮನವಿ ಮೇರೆಗೆ ಸೇರಿಸಲಾಗಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಉತ್ತರ ಕೊಡಲೇಬೇಕು ಎಂದು ಕಡ್ಡಾಯ ಇಲ್ಲ. ಕೇವಲ ಗುರುತಿಗಾಗಿ ಹಾಗೂ ಬೇರೆ ರಾಜ್ಯದವರನ್ನು ಪರಿಗಣಿಸದಿರಲು ಮಾತ್ರವೇ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಸ್ಟಿಕ್ಕರ್ ತೆಗೆಯದಂತೆ ಬಲವಂತವಿಲ್ಲ, ಮನವಿಯಷ್ಟೇ ಎಂದು ಕೋರ್ಟ್ ಗಮನಕ್ಕೆ ತಂದರು. ವಾದ-ಪ್ರತಿವಾದ ಅಲಿಸಿದ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.