ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವರದಿಯನ್ನು ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಜಾತಿಗಣತಿ (Caste Census) ವರದಿಯಲ್ಲಿ ನೀಡಿರುವ ಕೆಲವು ಮಹತ್ವದ ಶಿಫಾರಸುಗಳ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾಹಿತಿ ಲಭ್ಯವಾಗಿದೆ.
ಜಾತಿಗಣತಿ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಜನರಲ್ಲಿ ಈಗ ಕುತೂಹಲ ಹೆಚ್ಚಾಗಿದೆ. ವರದಿಯ ಅಂಕಿಅಂಶಗಳು ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದ್ದು, ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆ ಪ್ರಮಾಣದ ಬಗ್ಗೆ ವಿವರ ಇಲ್ಲಿದೆ.
ಜಾತಿಗಣತಿ: ಎಸ್‌ಸಿ
ಜನಸಂಖ್ಯೆ – 1,09,29,347
ಮೀಸಲಾತಿ – 24.1%
ಶಿಫಾರಸು – 24.1%
ಜಾತಿಗಣತಿ: ಎಸ್‌ಟಿ
ಜನಸಂಖ್ಯೆ – 42,81,289
ಮೀಸಲಾತಿ – 9.95%
ಶಿಫಾರಸು – 9.95%
ಜಾತಿಗಣತಿ: ಪ್ರವರ್ಗ 1ಎ
ಜನಸಂಖ್ಯೆ – 34,96,638 (8.40%)
ಮೀಸಲಾತಿ – 4%
ಶಿಫಾರಸು – 6%
ಜಾತಿಗಣತಿ: ಪ್ರವರ್ಗ 1ಬಿ (ಹೊಸ ಸೃಷ್ಟಿ)
ಜನಸಂಖ್ಯೆ – 73,92,313 (17.74%)
ಮೀಸಲಾತಿ – –
ಶಿಫಾರಸು – 12
ಜಾತಿಗಣತಿ: ಪ್ರವರ್ಗ 2ಎ
ಜನಸಂಖ್ಯೆ – 77,78,209 (18.70%)
ಮೀಸಲಾತಿ – 15%
ಶಿಫಾರಸು – 10%
ಜಾತಿಗಣತಿ: ಪ್ರವರ್ಗ 2ಬಿ (ಮುಸ್ಲಿಂ)
ಜನಸಂಖ್ಯೆ – 75,25,880 (18.08%)
ಮೀಸಲಾತಿ – 04%
ಶಿಫಾರಸು – 08%
ಜಾತಿಗಣತಿ: ಪ್ರವರ್ಗ 3ಎ (ಒಕ್ಕಲಿಗ)
ಜನಸಂಖ್ಯೆ – 72,99,577 (17.53%)
ಮೀಸಲಾತಿ – 04%
ಶಿಫಾರಸು – 07%
ಜಾತಿಗಣತಿ: ಪ್ರವರ್ಗ 3ಬಿ (ಲಿಂಗಾಯತ)
ಜನಸಂಖ್ಯೆ – 81,37,536 (19.55%)
ಮೀಸಲಾತಿ – 05%
ಶಿಫಾರಸು – 08%
ಜಾತಿಗಣತಿ: ಒಟ್ಟು ಮೀಸಲಾತಿ
ಪ್ರಸ್ತುತ – 66%
ಶಿಫಾರಸು – 85.1% (+19.1%)
ಜಾತಿಗಣತಿ ಲೆಕ್ಕ
ಓಬಿಸಿ ಜನಸಂಖ್ಯೆ – 4.18 ಕೋಟಿ
ಎಸ್‌ಸಿ ಜನಸಂಖ್ಯೆ – 1,09,29,347
ಎಸ್‌ಟಿ ಜನಸಂಖ್ಯೆ – 42,81,289
ಸಾಮಾನ್ಯ ವರ್ಗದ ಜನಸಂಖ್ಯೆ – 29,74,153
ಸರ್ವೇಗೆ ಒಳಪಟ್ಟ ಜನಸಂಖ್ಯೆ- 5,98,14,942
ಪ್ರವರ್ಗ 1ಎನಲ್ಲಿ ಯಾವ ಜಾತಿ?
ಗಂಗಾಮತ, ಗೊಲ್ಲ, ಉಪ್ಪಾರ, ಮೊಗವೀರ, ಕೋಲಿ, ಇತರೆ
ಪ್ರವರ್ಗ 1ಬಿನಲ್ಲಿ ಯಾವ ಜಾತಿ?
ಕುರುಬ, ಇತರೆ
ಪ್ರವರ್ಗ 2ಎರಲ್ಲಿ ಯಾವ ಜಾತಿ?
ಮಡಿವಾಳ, ಈಡಿಗ, ಇತರೆ