– ಪೊಲೀಸ್, ಕಾನೂನು ಇಲಾಖೆಗಳ ವಿರೋಧದ ನಡುವೆಯೂ ಕೇಸ್ ವಾಪಸ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಬೆಂಬಲಿಗರ ವಿರುದ್ಧದ 12 ಪ್ರಕರಣವೂ ಸೇರಿ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಮಿತಿ (Congress Cabinet) ಒಪ್ಪಿಗೆ ಸೂಚಿಸಿದೆ.
ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕ್ಯಾಬಿನೆಟ್ ತೆಗೆದುಕೊಂಡಿತು.
ಇದರೊಂದಿಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ
ಕೇಸ್ ವಾಪಸ್‌ಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಸಂಪುಟ ಸಭೆಯ ಟಿಪ್ಪಣಿಯಲ್ಲಿ ಎರಡೂ ಇಲಾಖೆಗಳ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ಇವು ವಾಪಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿ ಮತ್ತು ಐಜಿಪಿ ಅಭಿಪ್ರಾಯ ಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಎರಡೂ ಇಲಾಖೆಯ ಅಭಿಪ್ರಾಯ ಬದಿಗೊತ್ತಿ ಸಂಪುಟ ಸಭೆಯಲ್ಲಿ ಕೇಸ್ ವಾಪಸ್‌ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದನ್ನೂ ಓದಿ: ಸಮೀರ್ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್