-ಹೈಕಮಾಂಡ್ ಭೇಟಿಮಾಡಿ ಲಾಬಿ ಮಾಡುವ ಅವಶ್ಯಕತೆ ಇಲ್ಲ
ವಿಜಯಪುರ: ಮಾಸ್ಕ್, ಸಾಮಾಜಿಕ ಅಂತರ ಕಾಪಾಡದವರು ಯಾರೇ ಅಗಿರಲಿ ದಂಡ ಹಾಕಬೇಕು. ಮೊದಲು ಮಂತ್ರಿಗಳಿಗೆ, ಎಂಎಲ್ಎ ಗಳಿಗೆ ದಂಡ ಹಾಕಲು ಪ್ರಾರಂಭಿಸಬೇಕು. ಆಗ ಜನರಿಗೆ ಭಯ ಬರುತ್ತದೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಎಲ್‍ಎಗಳು ಬೀಕಾಬಿಟ್ಟಿ ಮದುವೆಗಳನ್ನು ಮಾಡಿದ್ರೆ ಸುಮ್ಮನಿರುತ್ತಾರೆ ಇದರಿಂದ ಜನರಿಗೆ ಏನು ಅನಿಸುತ್ತೆ. ಇವರೆಲ್ಲ ಅಲ್ಲಿ ಕುಳಿತು ಕಥೆ ಹೇಳುತ್ತಾರೆ. ಸಾರ್ವಜನಿಕರಿಗೆ ಮಾತ್ರ ಏಕೆ ದಂಡ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪೊಲೀಸರು ಮೊದಲು ಎಂಎಲ್‍ಎ, ಮಂತ್ರಿಗಳಿಗೆ ದಂಡ ಹಾಕಲಿ ಎಂದು ಗುಡುಗಿದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್, ಅಶ್ವಥ್ ನಾರಾಯಣ ನಡುವೆ ಜಟಾಪಟಿ
Advertisement
Advertisement
ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗುತ್ತೆ
Advertisement
ಸಂಕ್ರಾಂತಿ ನಂತರ ರಾಜ್ಯ ಸರ್ಕಾರದಲ್ಲಿ ಎಲ್ಲಾ ಜಿಲ್ಲೆಗೆ ಈ ಬಾರಿ ಪ್ರಾತಿನಿಧ್ಯ ಸಿಗುತ್ತದೆ. ಹೆಚ್ಚು ಕ್ರಿಯಾಶೀಲ ಇರುವವರನ್ನು ಸಚಿವರನ್ನಾಗಿ ಮಾಡುವ ಚಿಂತನೆ ನಡೆದಿದೆ. ಜ. 8 ಮತ್ತು 9 ರಂದು ನಡೆಯಲಿರುವ ಚಿಂತನ ಬೈಠಕ್‍ನಲ್ಲಿ ಎಲ್ಲವೂ ನಿರ್ಧಾರ ಆಗಲಿದೆ. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ
Advertisement
ಶೀಘ್ರದಲ್ಲೆ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ಅಗುತ್ತೆ. ವಿಜಯಪುರ ಜಿಲ್ಲೆಗೆ ಸೂಕ್ತವಾದ ಸ್ಥಾನಮಾನ ಸಿಗುವ ವಿಶ್ವಾಸ ಇದೆ. ಸಚಿವ ಸ್ಥಾನಕ್ಕೆ ಯಾರನ್ನು ಭೇಟಿ ಆಗುವ ಅವಶ್ಯಕತೆ ಇಲ್ಲ. ಪ್ರಧಾನಿಗಳು, ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕ ಪತ್ರ ಇದೆ. ಭೇಟಿ ಆಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ಸಚಿವ ಸ್ಥಾನಕ್ಕೆ ಯಾರ್ಯಾರು ಅರ್ಹರು ಎಂಬುದು ಮೇಲಿನವರಿಗೆ ಈಗ ಗೊತ್ತಾಗಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ದೊರಯಲಿದೆ ಎಂದರು.
ಮೇಕೆದಾಟು ಕಾಂಗ್ರೆಸ್ ನಿಂದ ರಾಜಕೀಯ ಸ್ಟಂಟ್
ಚುನಾವಣೆಗೆ ಒಂದು ವರ್ಷ ಉಳಿದಿದೆ. ಅದಕ್ಕೆ ಸುಮ್ಮನೆ ಮೇಕೆದಾಟು ಪಾದಯಾತ್ರೆ ನಾಟಕವನ್ನು ಕಾಂಗ್ರೆಸ್ ಮಾಡುತ್ತಿದೆ. ಅವರ ವೀಡಿಯೋ ಎಲ್ಲವನ್ನು ನೋಡುತ್ತಿದ್ದೇನೆ. ಸಿನಿಮಾ ಶೂಟಿಂಗ್ ತರಹ ಹೊರಟಿದ್ದಾರೆ. ಸಿದ್ದರಾಮಯ್ಯನವರು ಮನೆಯಲ್ಲೇ ಮೇಕೆದಾಟು ಬೋರ್ಡ್ ಹಿಂದೆ ಇಟ್ಟುಕೊಂಡು ನಡೆಯುತ್ತ ಹೊರಟಿರುವ ಹಾಗೆ ಫೋಟೋ ಹಾಕಿಕೊಂಡಿದ್ದಾರೆ. ಇದು ರಾಜಕೀಯ ಸ್ಟಂಟ್ ಎಂದು ಕಿಡಿಕಾರಿದರು.
ಡಿಕೆಶಿ ಅವರೇ ನೀರಾವರಿ ಸಚಿವರಿದ್ದರು ಆಗೇಕೆ ಮೇಕೆದಾಟು ಮಾಡಲಿಲ್ಲ. ಯಾಕೆ ಮೇಕೆದಾಟು ನೆನೆಪಾಗಲಿಲ್ಲ. ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಈ ವೇಳೆ ಅವರು ಕೊರೊನಾ ಹೆಚ್ಚಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಅನಿಸುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶ ಇದರ ಹಿಂದೆ ಇರಬಹುದು. ಒಟ್ಟಾರೆ ರಾಜ್ಯದಲ್ಲಿ ಅಶಾಂತಿಯನ್ನು ಮೂಡಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೇಕೆದಾಟು ವಿಚಾರವಾಗಿ ʼಸುಳ್ಳಿನಯಾತ್ರೆʼ ಹೊರಟವರ ಜಾತಕ ಬೆತ್ತಲಾಗ್ತಿದೆ: ಹೆಚ್‌ಡಿಕೆ