ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪಗೆ (Yediyurappa) ಮತ್ತೊಂದು ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ದದ ಭ್ರಷ್ಟಾಚಾರ (Corruption) ಆರೋಪ ಪ್ರಕರಣದ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಕೋರಿ ರಾಜ್ಯಪಾಲರಿಗೆ ಸರ್ಕಾರ ನಿರ್ಣಯ ರವಾನಿಸಿದೆ.
ಸಾಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ ದೂರಿನ ಮೇಲೆ ಕ್ರಮಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು ಕಳೆದ ವಾರ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಇಂದು (ನ.03) ರಾಜ್ಯಪಾಲರ ಅನುಮತಿಗಾಗಿ ಸರ್ಕಾರ ನಿರ್ಣಯವನ್ನು ಶಿಫಾರಸು ಮಾಡಿದೆ.
Advertisement
2020 ನವೆಂಬರ್ 19 ರಂದು ಟಿಜೆ ಅಬ್ರಹಾಂ (TJ Abraham) ಎಸಿಬಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಯಡಿಯೂರಪ್ಪ- ವಿಜಯೇಂದ್ರ (BY Vijayendra) ವಿರುದ್ದ ದೂರು ನೀಡಿದ್ದರು. ಬಿಡಿಎ ಫ್ಲಾಟ್ ಕಟ್ಟುವ ವಿಚಾರಕ್ಕೆ ರಾಮಲಿಂಗಂ ಕಂಪನಿಯಿಂದ 12 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
Advertisement
ತನಿಖೆ – ವಿಚಾರಣೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಿಸಿದ್ದರು. ಈ ವಿಷಯ ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಿತ್ತು. ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ
Advertisement
ಅಬ್ರಹಾಂ ನೀಡಿದ ದೂರಿನಲ್ಲಿ ಏನಿತ್ತು?
ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಲ್ಲಿ ಬಿಎಸ್‍ವೈ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
Advertisement
ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್‍ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.
ಆರೋಪಿಗಳು ಯಾರು?
ಎ1 – ಸಿಎಂ ಬಿ.ಎಸ್ ಯಡಿಯೂರಪ್ಪ, ಎ2 – ಬಿ.ವೈ ವಿಜಯೇಂದ್ರ, ಎ3 – ಶಶಿಧರ್ ಮರಡಿ, ಎ4 – ಸಂಜಯ್ ಶ್ರೀ, ಎ5 – ಚಂದ್ರಕಾಂತ್ ರಾಮಲಿಂಗಂ, ಎ6 – ಎಸ್.ಟಿ ಸೋಮಶೇಖರ್, ಎ7 – ಡಾ. ಜಿಸಿ ಪ್ರಕಾಶ್ ಐಎಎಸ್, ಎ8 – ಕೆ ರವಿ, ಎ9 – ವಿರೂಪಾಕ್ಷಪ್ಪ ಯಮಕನಮರಡಿ.