ಡಿಕೆಶಿಗೆ ಜಲಸಂಪನ್ಮೂಲ, ರೇವಣ್ಣಗೆ PWD: ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

Public TV
2 Min Read
oath taking ceremony karnataka 1

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿ ಇಂಧನ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಿಕ್ಕಿದರೆ, ಎಚ್‍ಡಿ ರೇವಣ್ಣ ಅವರಿಗೆ ಲೋಕೋಪಯೋಗಿ ಖಾತೆ ಸಿಕ್ಕಿದೆ.

ಇಂಧನ ಖಾತೆ ಸೇರಿದಂತೆ ಹಣಕಾಸು ಗುಪ್ತವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಯನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ನೀಡಲಾಗಿದೆ.

ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿಲ್ಲ. ಇನ್ನೂ ಖಾತೆ ಹಂಚಿಕೆಯಾಗದ ಬಗ್ಗೆ ಸರ್ಕಾರ ವಿರುದ್ಧ ಭಾರೀ ಟೀಕೆ ಕೇಳಿಬಂದಿತ್ತು.

dks hdk congress jds

ಯಾರಿಗೆ ಯಾವ ಖಾತೆ?
ಎಚ್‍ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ
ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ
ಎಚ್‍ಡಿ ರೇವಣ್ಣ – ಲೋಕೋಪಯೋಗಿ
ದೇಶಪಾಂಡೆ – ಕಂದಾಯ

ಡಿಕೆ ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ
ಕೆಜೆ ಜಾರ್ಜ್ – ಬೃಹತ್ ಕೈಗಾರಿಕೆ, ಐಟಿ
ಬಂಡೆಪ್ಪ ಕಾಶಂಪುರ್ – ಸಹಕಾರ

ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ
ಯುಟಿ ಖಾದರ್ – ನಗರಾಭಿವೃದ್ಧಿ / ವಸತಿ
ಸಿಎಸ್ ಪುಟ್ಟರಾಜು – ಸಣ್ಣ ನೀರಾವರಿ

DKS HDK

ಶಿವಶಂಕರ್ ರೆಡ್ಡಿ – ಕೃಷಿ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ
ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ

ಶಿವಾನಂದ ಪಾಟೀಲ್ – ಆರೋಗ್ಯ
ವೆಂಕಟರಮಣಪ್ಪ – ಕಾರ್ಮಿಕ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ

ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ
ಶಂಕರ್ – ಅರಣ್ಯ
ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ

ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ
ಜಿಟಿ ದೇವೇಗೌಡ – ಉನ್ನತ ಶಿಕ್ಷಣ
ಸಾರಾ ಮಹೇಶ್ – ಪ್ರವಾಸೋದ್ಯಮ
ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಿಸಿ ತಮ್ಮಣ್ಣ – ಸಾರಿಗೆ

ಎಂ.ಸಿ. ಮನಗೂಳಿ – ತೋಟಗಾರಿಕೆ
ವೆಂಕಟರಾವ್ ನಾಡಗೌಡ- ಪಶುಸಂಗೋಪನೆ
ಗುಬ್ಬಿ ಶ್ರೀನಿವಾಸ್ – ಸಣ್ಣ ಕೈಗಾರಿಕೆ

new 1

new 2

new 3

Share This Article
Leave a Comment

Leave a Reply

Your email address will not be published. Required fields are marked *