ನವದೆಹಲಿ: ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಸಂಪುಟ ರಚನೆಯ ಕಗ್ಗಂಟು ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಮಿಶ್ರ ಸರ್ಕಾರ ರಚನೆ ವೇಳೆ ಇಂತಹ ಗೊಂದಲ ಉಂಟಾಗುವುದು ಸಹಜ. ಆದರೆ ಈ ಎಲ್ಲಾ ಗೊಂದಲಗಳು ಎರಡು ದಿನದಲ್ಲಿ ಬಗೆ ಹರಿಯುತ್ತದೆ. ಖಾತೆ ಹಂಚಿಕೆ ಬಗ್ಗೆ ಎಲ್ಲರು ಒಟ್ಟಾಗಿ ಚರ್ಚೆ ಮಾಡುತ್ತಾರೆ. ಎಲ್ಲರ ಗುರಿ ಸರ್ಕಾರ ಉಳಿಸಿಕೊಳ್ಳುವುದು ಎಂದರು.
Advertisement
Advertisement
ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಖಾತೆಗಾಗಿ ನಾವು ಸರ್ಕಾರ ಮಾಡಿಲ್ಲ. ಸಂವಿಧಾನದ ಮೌಲ್ಯ ಸಂರಕ್ಷಿಸಲು ಸರ್ಕಾರ ಮಾಡಿದ್ದೇವೆ ಹೊರತು ಖಾತೆಗಾಗಿ ಅಲ್ಲ. ಹಂಚಿಕೆ ವೇಳೆ ಒಂದು ಖಾತೆ ಹೆಚ್ಚು ಕಡಿಮೆ ಹಂಚಿಕೆ ಆಗಬಹುದು. ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಪಷ್ಟನೆ ನೀಡಿದರು.
Advertisement
Everything will be sorted out in a few days. Such issues happen during a coalition. We (Congress & JDS) will surely work together: Mallikarjun Kharge, Congress on delay in portfolio allocation. #Karnataka pic.twitter.com/0hEiCFneOk
— ANI (@ANI) May 29, 2018
Advertisement
ಸಮ್ಮಿಶ್ರ ಸರ್ಕಾರ ರಚನೆ ಬಿಜೆಪಿ ಹಾಗೂ ಆರ್ ಎಸ್‍ಎಸ್ ದೂರ ಇಡಲು ಒಟ್ಟಾಗಿ ಸರ್ಕಾರ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಣಿಸಿದ್ದಾರೆ. ಸಂವಿಧಾನ ಬದಲಾಯಿಸುವ, ಸಮಾಜದ ಸಾಮರಸ್ಯ ಹಾಳು ಮಾಡುವ ಜನರಿಂದ ರಾಜ್ಯವನ್ನು ರಕ್ಷಿಸಬೇಕಿತ್ತು. ದಲಿತ ಅಲ್ಪಸಂಖ್ಯಾತರ ರೈತರ ಜನರಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಬಿಜೆಪಿಯ ತತ್ವಗಳನ್ನು ವಿರೋಧಿಸಲು ನಾವು ಸರ್ಕಾರ ಮಾಡಿದ್ದೇವೆ. ಜಾತ್ಯತೀತ ಪಕ್ಷಗಳು ಎರಡು ಸೇರಿ ಸರ್ಕಾರ ರಚನೆ ಮಾಡಿದೆ ಎಂದರು.
ಇದೇ ವೇಳೆ ಶಾಸಕ ಸಿದ್ದು ನ್ಯಾಮಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಮಲ್ಲಿಕಾರ್ಜುನ ಖರ್ಗೆ, ನ್ಯಾಮಗೌಡ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಅಲ್ಲದೇ ರೈತರಿಗಾಗಿ ಬ್ಯಾರೇಜ್ ನಿರ್ಮಾಣ, ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಎಲ್ಲ ನಾಯಕರನ್ನು ಭೇಟಿಯಾಗಿದ್ದರು. ಸದ್ಯ ಅವರ ಸಾವು ಅಘಾತ ತಂದಿದೆ. ಅವರ ಆತ್ಮಕ್ಕೆ ಶಾತಿ ಸಿಗಲಿ, ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಹೇಳಿದರು.