ಬೆಂಗಳೂರು: ಕೆಜಿಎಫ್ ಚಿತ್ರಕ್ಕಿಂತಲೂ ಕುತೂಹಲ ಮೂಡಿಸಿರೋ ಕ್ಯಾಬಿನೆಟ್ ವಿಸ್ತರಣೆಗೆ ಕೊನೆಗೂ ಕಾಲಕೂಡಿ ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಅಲ್ಲದೇ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮಗ್ಗಲ ಮುಳ್ಳಾಗಿರುವ ಜಾರಕಿಹೊಳಿ ಬ್ರದರ್ಸ್ ಅವರನ್ನ ಒಡೆದು ಆಳಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಅವಕಾಶ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಉಳಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಲು ಹೈಕಮಾಂಡ್ ಚರ್ಚೆ ನಡೆಸಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
Advertisement
ಸಂಪುಟದಿಂದ ಯಾರಿಗೆ ಕೊಕ್ ?
* ರಮೇಶ್ ಜಾರಕಿಹೊಳಿ ಔಟ್, ಸತೀಶ್ ಜಾರಕಿಹೊಳಿ ಇನ್ (ಎಸ್‍ಪಿ ಕೋಟಾ)
* ಆರ್. ಶಂಕರ್ ಔಟ್, ಸಿ.ಎಸ್. ಶಿವಳ್ಳಿ ಇನ್ (ಕುರುಬರ ಕೋಟಾ)
Advertisement
Advertisement
ಹೊಸದಾಗಿ ಯಾರ ಎಂಟ್ರಿ ?
* ಎಂ.ಬಿ. ಪಾಟೀಲ್ / ಬಿಸಿ ಪಾಟೀಲ್ (ಲಿಂಗಾಯತ ಕೋಟಾ)
* ರಹೀಂ ಖಾನ್ (ಮುಸ್ಲಿಂ ಕೋಟಾ)
* ತುಕಾರಾಂ (ಎಸ್‍ಟಿ ಕೋಟಾ)
* ಭೀಮಾನಾಯ್ಕ್/ ಪರಮೇಶ್ವರ ನಾಯ್ಕ್ (ಎಸ್‍ಟಿ ಲಂಬಾಣಿಗೆ ಮತ್ತೊಂದು ಸ್ಥಾನ)
* ಧರ್ಮಸೇನಾ / ರೂಪಾ ಶಶಿಧರ್ / ತಿಮ್ಮಾಪೂರ (ದಲಿತ ಎಡಗೈ ಕೋಟಾ)
* 20 ನಿಗಮ ಮಂಡಳಿಗೆ ನೇಮಕ
* 8 ಸಂಸದೀಯ ಕಾರ್ಯದರ್ಶಿ, ಓರ್ವ ದೆಹಲಿ ವಿಶೇಷ ಪ್ರತಿನಿಧಿ ನೇಮಕ
ಸಂಪುಟ ವಿಸ್ತರಣೆ ಕಸರತ್ತು ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಚರ್ಚೆ ನಡೆಸಿದರು. ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗಿದ್ದರು. ಈ ವೇಳೆ ಆರು ಸಚಿವ ಸ್ಥಾನ ಭರ್ತಿ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಪ್ರಮುಖವಾಗಿ ವಿ. ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡುವ ವಿಚಾರದಲ್ಲಿ ನಾಯಕರದಲ್ಲಿ ಒಮ್ಮತ ಅಭಿಪ್ರಾಯ ಮೂಡಿಬಂತು ಎನ್ನಲಾಗಿದ್ದು, ರಾಹುಲ್ ಗಾಂಧಿ ಅವರ ಬಳಿ ಒಂದೇ ಹೆಸರು ನೀಡಿ ಅಂತಿಮ ಮುದ್ರೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv