ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ.
ಸನ್ನಡತೆ ಆಧಾರದ ಮೇಲೆ ಆಗಸ್ಟ್ 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಸುಮಾರು 72ಕ್ಕೂ ಹೆಚ್ಚು ಖೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ. ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ ಗಣರಾಜ್ಯೋತ್ಷವ ದಿನದಂದು ಸನ್ನಡತೆ ಹಾಗೂ ಮನಪರಿವರ್ತನೆಗೊಂಡ ಖೈದಿಗಳನ್ನ ಶಿಕ್ಷೆಯ ಅವಧಿಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ.
Advertisement
Advertisement
ಈ ಬಾರಿ ಗೃಹ ರಕ್ಷಕ ಇಲಾಖೆಯ ಬಿಡುಗಡೆ ಅರ್ಹತೆ ಪಡೆಯಬೇಕಾಗಿರುವ ಖೈದಿಗಳ ಪಟ್ಟಿ ಈಗಾಗಲೇ ಸಿದ್ಧ ಪಡಿಸಲಾಗಿದೆ. ಹೊಸದಾಗಿ ಸರ್ಕಾರ ರಚನೆ ಮಾಡಿರುವ ಸಿಎಂ ಬಿಎಸ್‍ವೈ ಸರ್ಕಾರ ಅಧಿಕಾರಕ್ಕೆ ಬಂದು 15 ದಿನಗಳ ಮೇಲಾದರೂ ಕೂಡ ಸಚಿವ ಸಂಪುಟ ವಿಸ್ತರಣೆ ಆಗದೇ ಇರುವುದರಿಂದ ಖೈದಿಗಳ ಬಿಡುಗಡೆ ಕಡತ ಸಂಪುಟ ಸಭೆಯ ಅನುಮೋದನೆಗೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ಸ್ವಾತಂತ್ರ್ಯೋತ್ಸವ ದಿನದಂದು ಸನ್ನಡತೆಯುಳ್ಳ ಖೈದಿಗಳ ಬಿಡುಗಡೆಗೆ ಬ್ರೇಕ್ ಬಿದ್ದಿದೆ.