– ಊರಿಗೆ ಬೆದರಿಕೆ ಹಾಕೋ ಎಚ್‌ಡಿಕೆಗೆ ಯಾರು ಬೆದರಿಕೆ ಹಾಕ್ತಾರೆ?
– ಬೆದರಕೆ ಇದ್ದರೆ ದೂರು ನೀಡಲಿ
ಚಿಕ್ಕಬಳ್ಳಾಪುರ: ಸದ್ಯಕ್ಕೆ ಗೆದ್ದವರಿಗೆ ಮೊದಲ ಆದ್ಯತೆ. ಸೋತವರ ಬಗ್ಗೆ ಸಿಎಂ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧಪಟ್ಟಂತೆ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರಿಗೆ ಗೊತ್ತಿದೆ. ಯಾರನ್ನು ಮಂತ್ರಿ ಮಾಡಬೇಕು, ಇದನ್ನು ಯಾವ ರೀತಿ ನಿಭಾಯಿಸಬೇಕೆಂದು ಸಿಎಂಗೆ ಗೊತ್ತಿದೆ ಎಂದರು.
Advertisement
ಗೆದ್ದಿರುವ ಶಾಸಕರಿಗೆ ನಾವು ಮೊದಲು ಆದ್ಯತೆ ನೀಡುತ್ತೇವೆ. ಸದ್ಯಕ್ಕೆ ಸೋತವರಿಗೆ ಸ್ಥಾನಮಾನವಿಲ್ಲ ಎಂದು ಹೇಳಿದರು. ಈ ವೇಳೆ ಮಾಧ್ಯಮಗಳು ಮರುಪ್ರಶ್ನೆ ಹಾಕಿದಾಗ, ಮುಂದೆ ನೋಡೋಣ ಎಂದು ಹೇಳಿ ಸೋತವರ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವನ್ನು ಇಟ್ಟಿದ್ದಾರೆ.
Advertisement
Advertisement
ಶ್ರೀರಾಮುಲು ಡಿಸಿಎಂ ಆಗುವುದಕ್ಕೆ ಪ್ರಯತ್ನ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಅಶೋಕ್ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಡಿಸಿಎಂ ಆಗಬೇಕೆಂಬ ಆಸೆ ಇದೆ. ಆದರೆ ಆಸೆ ಇರುವುದನ್ನು ಸಾಧನೆ ಮಾಡಲು ಆಗುವುದಿಲ್ಲ ಎಂದರು.
Advertisement
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಬೆದರಿಕೆ ಪತ್ರ ಬಂದಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದರು. ಯಾರಾದ್ರೂ ಎಚ್ ಡಿ ಕುಮಾರಸ್ವಾಮಿಗೆ ಬೆದರಿಕೆ ಹಾಕಲು ಸಾಧ್ಯವೇ? ಕುಮಾರಸ್ವಾಮಿಗೆ ಬೆದರಿಕೆ ಹಾಕೋ ಧೈರ್ಯ ಯಾರಿಗೆ ಇದೆ? ಬೇಕಾದರೆ ಎಚ್ ಡಿ ಕುಮಾರಸ್ವಾಮಿ ಊರಿಗೆಲ್ಲಾ ಬೆದರಿಕೆ ಹಾಕ್ತಾರೆ. ಇದೊಂದು ಸುಳ್ಳು ಸುದ್ದಿ ಅದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಅವರಿಗೆ ಬೆದರಿಕೆ ಬಂದರೆ ಪೊಲೀಸರು ಇದ್ದಾರೆ. ಕಾನೂನು ಇದೆ, ಎಲ್ಲಿ ದೂರು ನೀಡಬೇಕು ಎನ್ನುವುದು ಎಚ್‍ಡಿಕೆಗೆ ಗೊತ್ತಾಗಿದೆ. ಬೆದರಿಕೆ ಎಲ್ಲಿಂದ ಯಾವಾಗ ಹೇಗೆ ಬಂದಿದೆ ಅಂತ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಬೇಕಾದ್ರೆ ತನಿಖೆ ನಡೆಸಿ ಸೂಕ್ತ ಬಂದೋಬಸ್ತ್ ರಾಜ್ಯ ಸರ್ಕಾರ ನೀಡಲಿದೆ ಎಂದರು.