ಬೆಂಗಳೂರು: ದೆಹಲಿಯಲ್ಲಿ ಸಂಪುಟ ಕಸರತ್ತು (Karnataka Cabinet Expansion) ನಡೆಯುತ್ತಿದ್ದು ಪ್ರಮುಖ 5 ಖಾತೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪಟ್ಟು ಹಿಡಿದಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜೊತೆ ನಡೆದ ಸಭೆಯಲ್ಲಿ 5 ಖಾತೆಗಳು ನನಗೆ ಬೇಕೇ ಬೇಕು ಎಂದು ಡಿಕೆಶಿ ಹಠ ಹಿಡಿದಿದ್ದಾರೆ. ಇದನ್ನೂ ಓದಿ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ
Advertisement
Advertisement
ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ ನೀಡುವಂತೆ ಡಿಕೆಶಿ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಅಭಿವೃದ್ಧಿ ಹಾಗೂ ಜಲಸಂಪನ್ಮೂಲ ನನಗೆ ಬೇಕು ಡಿಕೆಶಿ ಹೇಳಿದ್ದರೆ ಬೆಂಬಲಿಗರಿಗಾಗಿ ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಯನ್ನು ಕೇಳಿದ್ದಾರೆ. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?
Advertisement
Advertisement
ಡಿಕೆ ಶಿವಕುಮಾರ್ ಸಿಎಂ ಪಟ್ಟ ಕೇಳಿದಾಗ ಹೈಕಮಾಂಡ್ (Congress High Command) ನಿರಾಕರಿಸಿ ಡಿಸಿಎಂ ಪಟ್ಟ ನೀಡಿತ್ತು. ಒಂದೇ ಡಿಸಿಎಂ ಇರಬೇಕು, ಬೇರೆ ಯಾರಿಗೆ ಡಿಸಿಎಂ ಕೊಡಬಾರದು ಎಂದು ಶಿವಕುಮಾರ್ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯಂತೆ ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಒಂದೇ ಡಿಸಿಎಂ ನೀಡಲಾಗಿದೆ. ಈಗ ಡಿಕೆ ಶಿವಕುಮಾರ್ ಹೊಸ ಬೇಡಿಕೆಯನ್ನು ಇರಿಸಿದ ಹಿನ್ನೆಲೆಯಲ್ಲಿ ಯಾರಿಗೆ ಈ ಖಾತೆಗಳನ್ನು ಹಂಚಿಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.