ಬೆಂಗಳೂರು: ಯಡಿಯೂರಪ್ಪ ಯಾವ ಬಾಲ್ ಹಾಕಿದ್ರೂ ಬ್ಯಾಟಿಂಗ್ ಮಾಡಲು ಹೈಕಮಾಂಡ್ ತಯಾರಿ ನಡೆಸಿದೆ. ಹೈಕಮಾಂಡ್ ಅಂಗಳದಲ್ಲಿ ಯಾರು ಸಿಕ್ಸರ್ ಹೊಡಿತಾರೆ? ಯಾರು ಔಟ್ ಆಗ್ತಾರೆ ಅನ್ನೋದೇ ಸದ್ಯದ ಕುತೂಹಲ. ಬಿಜೆಪಿ ಹೈಕಮಾಂಡ್ ಮುಂದೆ ಮೂರು ಅಸ್ತ್ರಗಳಿವೆ ಎನ್ನಲಾಗಿದೆ. ಆ ಅಸ್ತ್ರಗಳನ್ನ ಯಡಿಯೂರಪ್ಪ ಒಪ್ಪಿಕೊಳ್ತಾರಾ..? ಇಲ್ಲ ತಮ್ಮದೇ ಸೂತ್ರಕ್ಕೆ ಅಂಟಿಕೊಳ್ತಾರಾ ಅನ್ನೋ ಚರ್ಚೆ ಜೋರಾಗಿದೆ.
ಅಂದಹಾಗೆ ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರಿದಿದೆ. ಹೈಕಮಾಂಡ್ ಜತೆಗಿನ ಮಾತುಕತೆ ಯಶಸ್ವಿಯಾದರೆ ಫೆಬ್ರವರಿ 2ಕ್ಕೆ ಪ್ರಮಾಣ ವಚನ ಫಿಕ್ಸ್ ಆಗುತ್ತೆ. ಒಂದು ವೇಳೆ ವಿಫಲ ಆದ್ರೆ ಫೆಬ್ರವರಿ 8ರ ಬಳಿಕವಷ್ಟೇ ಸಂಪುಟ ವಿಸ್ತರಣೆ ಸಾದ್ಯತೆ ಅನ್ನೋ ಮಾತುಗಳು ಕೇಳಿಬಂದಿವೆ. ಬಿಎಸ್‍ವೈ, ಹೈಕಮಾಂಡ್ ನಡುವಿನ ಮಾತುಕತೆಯಲ್ಲಿ ಬಿಎಸ್‍ವೈ ಫಾರ್ಮೂಲಾ ಸಕ್ಸಸ್ಸೋ..? ಹೈಕಮಾಂಡ್ ಫಾರ್ಮೂಲಾ ಗೆಲ್ಲುತ್ತೋ..? ಅನ್ನೋದ್ರ ಮೇಲೆ ಎಲ್ಲವೂ ನಿಂತಿದೆ.
Advertisement
Advertisement
ಬಿಜೆಪಿ ಹೈಕಮಾಂಡ್ ಬಳಿ ಮೊದಲ ಅಸ್ತ್ರ ಸಂಪುಟ ಪುನಾರಚನೆ ಎನ್ನಲಾಗಿದೆ. ಈ ಅಸ್ತ್ರಕ್ಕೆ ಯಡಿಯೂರಪ್ಪ ಓಕೆ ಅಂದ್ರೆ ಹಿರಿಯರಿಗೆ ಕಷ್ಟ ಆಗುವ ಸಾಧ್ಯತೆ ಇದೆ. ಇಡೀ ಕ್ಯಾಬಿನೆಟ್ ಸಚಿವರಿಂದ ರಾಜೀನಾಮೆ ಪಡೆಯುವ ಅಸ್ತ್ರ ಇದು ಎನ್ನಲಾಗಿದ್ದು, ಯಡಿಯೂರಪ್ಪ ಒಪ್ಪಿದ್ರೆ ಸಂಪುಟ ಪುನಾರಚನೆಗೆ ಹೈಕಮಾಂಡ್ ರೆಡಿ ಅನ್ನೋದು ಲೇಟೆಸ್ಟ್ ಸುದ್ದಿ.
Advertisement
* ಬಿಜೆಪಿ `ಹೈ’ಅಸ್ತ್ರ ನಂ.1- ಸಂಪುಟ ಪುನಾರಚನೆ!
> ಎಲ್ಲಾ ಸಚಿವರಿಂದ ರಾಜೀನಾಮೆ ಪಡೆಯುವುದು
> ಹೊಸದಾಗಿ ಸಂಪುಟ ರಚನೆ ಮಾಡುವುದು
> ಹಿರಿಯರಿಗೆ ಕೊಕ್ ಕೊಟ್ಟು ಹೊಸಮುಖಗಳಿಗೆ ಮu?
> ಬಿಎಸ್‍ವೈ ಹೇಳಿದ 14 ಶಾಸಕರಿಗೆ ಸಚಿವ ಸ್ಥಾನ
> ಹೈಕಮಾಂಡ್ ಹೇಳಿದ 16 ಶಾಸಕರಿಗೆ ಸಚಿವ ಸ್ಥಾನ?
Advertisement
* ಬಿಜೆಪಿ `ಹೈ’ಅಸ್ತ್ರ ನಂ.2- 9+5 ಫಾರ್ಮುಲಾ!
> ವಲಸಿಗ 9 ಶಾಸಕರಿಗೆ ಸಚಿವ ಸ್ಥಾನ ನೀಡುವುದು
> ಮೂಲ 5 ಶಾಸಕರಿಗೆ ಸಚಿವ ಸ್ಥಾನ ನೀಡುವುದು
> 2 ಸಚಿವ ಸ್ಥಾನಗಳನ್ನ ಮಾತ್ರ ಖಾಲಿ ಉಳಿಸಿಕೊಳ್ಳುವುದು
> ಜೂನ್ ಬಳಿಕ ಸಂಪುಟ ಪುನಾರಚನೆ ಮಾಡುವುದು
* ಬಿಜೆಪಿ `ಹೈ’ಅಸ್ತ್ರ ನಂ.3- 9+3 ಫಾರ್ಮುಲಾ!
> ಯಡಿಯೂರಪ್ಪ ಸೂತ್ರದ ಸಚಿವ ಸ್ಥಾನ ಹಂಚಿಕೆ
> 9 ವಲಸಿಗರಿಗೆ, 3 ಮೂಲಬಿಜೆಪಿ ಶಾಸಕರಿಗೆ ಸಚಿವ ಸ್ಥಾನ
> ಜೂನ್ ತನಕ 4 ಸಚಿವ ಸ್ಥಾನ ಖಾಲಿ ಉಳಿಸಿಕೊಳ್ಳುವುದು
> ಮುಂದೆ ಸಂಪುಟ ಪುನಾರಚನೆ ಪವರ್ ಹೈಕಮಾಂಡ್‍ಗೆ ಕೊಡುವುದು