ಬೆಂಗಳೂರು: ಸರ್ಕಾರ ರಚನೆಯಾಗಿ ಎರಡು ವಾರವಾದರೂ ಇನ್ನೂ ಗಜ ಪ್ರಸವದಂತಾಗಿರೋ ರಾಜ್ಯ ಸಚಿವ ಸಂಪುಟ ಬುಧವಾರ ರಚನೆಯಾಗಲಿದೆ. ರಾಜಭವನದ ಗಾಜಿನ ಮನೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಕಾಂಗ್ರೆಸ್‍ನಿಂದ ಕನಿಷ್ಠ 14 ಶಾಸಕರು ಹಾಗೂ ಜೆಡಿಎಸ್‍ನಿಂದ 8 ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಎರಡೂ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ದಟ್ಟವಾಗಿರುವ ಕಾರಣ, ಪರಿಸ್ಥಿತಿ ಅವಲೋಕಿಸಿ 2ನೇ ಹಂತದ ವಿಸ್ತರಣೆಗೆ ಮೈತ್ರಿಕೂಟ ಸರ್ಕಾರ ನಿರ್ಧರಿಸಿದೆ. ಜೆಡಿಎಸ್‍ಗೆ ಹೋಲಿಸಿದರೆ, ಕಾಂಗ್ರೆಸ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆದಿವೆ. ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಅಂತಿಮ ಪಟ್ಟಿ ಹೊರಬೀಳಲಿದೆ. ಕಾಂಗ್ರೆಸ್ ಜೊತೆಗೆ ಜೆಡಿಎಸ್ ಪಟ್ಟಿ ಕೂಡ ಬಹುತೇಕ ಅಂತಿಮವಾಗಿದೆ.
Advertisement
Advertisement
ಕಾಂಗ್ರೆಸ್ ಸಂಭಾವ್ಯ ಪಟ್ಟಿ :
ಒಕ್ಕಲಿಗ ಕೋಟಾ – 3 ಸ್ಥಾನ
* ಡಿ.ಕೆ. ಶಿವಕುಮಾರ್, ಕನಕಪುರ
* ಎಂ. ಕೃಷ್ಣಪ್ಪ, ವಿಜಯನಗರ
* ಕೃಷ್ಣ ಬೈರೇಗೌಡ, ಬ್ಯಾಟರಾಯನಪುರ
Advertisement
ಲಿಂಗಾಯತರ ಕೋಟಾ – 3 ಸ್ಥಾನ
* ಎಂ.ಬಿ. ಪಾಟೀಲ್, ಬಬಲೇಶ್ವರ
* ರಾಜಶೇಖರ ಪಾಟೀಲ್, ಹುಮ್ನಾಬಾದ್
* ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ
Advertisement
ಎಸ್‍ಸಿ ಕೋಟಾ – 2 ಸ್ಥಾನ
* ಪ್ರಿಯಾಂಕ ಖರ್ಗೆ, ಚಿತ್ತಾಪುರ
* ರೂಪಾ ಶಶಿಧರ್, ಕೆಜಿಎಫ್
ಎಸ್‍ಟಿ ಕೋಟಾ – 2 ಸ್ಥಾನ
* ಸತೀಶ್ ಜಾರಕಿಹೊಳಿ, ಯಮಕನಮರಡಿ
* ಟಿ. ರಘುಮೂರ್ತಿ, ಚಳ್ಳಕೆರೆ
ಹಿಂದುಳಿದ ವರ್ಗ ಕೋಟಾ – 2 ಸ್ಥಾನ
* ಹೆಚ್.ಎಂ. ರೇವಣ್ಣ, ಮೇಲ್ಮನೆ ಸದಸ್ಯ
* ಪ್ರತಾಪ್‍ಚಂದ್ರ ಶೆಟ್ಟಿ, ಮೇಲ್ಮನೆ ಸದಸ್ಯ
ಅಲ್ಪಸಂಖ್ಯಾತರ ಕೋಟಾ – 2 ಸ್ಥಾನ
* ರೋಷನ್ ಬೇಗ್, ಶಿವಾಜಿನಗರ
* ಕೆ.ಜೆ. ಜಾರ್ಜ್, ಸರ್ವಜ್ಞನಗರ
ಜೆಡಿಎಸ್ ಸಂಭಾವ್ಯ ಪಟ್ಟಿ
ಒಕ್ಕಲಿಗ ಕೋಟಾ – 4 ಸಚಿವ ಸ್ಥಾನ
* ಎಚ್.ಡಿ. ರೇವಣ್ಣ, ಹೊಳೆನರಸೀಪುರ
* ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ
* ಸಿ.ಎಸ್. ಪುಟ್ಟರಾಜು, ಮೇಲುಕೋಟೆ
* ಸತ್ಯನಾರಾಯಣ, ಶಿರಾ
ಕುರುಬ ಕೋಟಾ – 2 ಸ್ಥಾನ
ಎಚ್. ವಿಶ್ವನಾಥ್, ಹುಣಸೂರು
ಬಂಡೆಪ್ಪ ಕಾಶೆಂಪುರ್, ಬೀದರ್ ದಕ್ಷಿಣ
ಲಿಂಗಾಯತರ ಕೋಟಾ – 1 ಸ್ಥಾನ
* ವೆಂಕಟರಾವ್ ನಾಡಗೌಡ – ಸಿಂಧನೂರು
ಎಸ್‍ಸಿ ಕೋಟಾ – 1 ಸ್ಥಾನ
ಎನ್. ಮಹೇಶ್- ಕೊಳ್ಳೇಗಾಲ