ಬೆಂಗಳೂರು: ಅಲ್ಪಸಂಖ್ಯಾತರ (Minority) ಪರವಾಗಿ ಮತ್ತೊಂದು ನಿರ್ಣಯವನ್ನ ರಾಜ್ಯ ಸರ್ಕಾರ ಕೈಗೊಂಡಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಇರುವ ನಿಬಂಧನೆ ಮತ್ತು ಷರತ್ತುಗಳನ್ನು ಸಡಿಲಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ವಿಧೇಯಕಕ್ಕೆ ಕ್ಯಾಬಿನೆಟ್ (Cabinet) ಗ್ರೀನ್‌ಸಿಗ್ನಲ್ ನೀಡಿದೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಈ ಮೊದಲು ಶೇ.50 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಶೇಕಡಾ 50ರಿಂದ ಶೇ.25ಕ್ಕೆ ಇಳಿಸುವ ಬಗ್ಗೆ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ಸಂಪುಟ (Siddaramaiah’s Cabinet), ಈ ನಿಯಮವನ್ನು ಸಂಪೂರ್ಣವಾಗಿ ಸಡಿಲಿಸಿದೆ.
ಸರ್ಕಾರದ ಈ ನಿರ್ಧಾರವೀಗ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯಗೆ ಸಾಬ್ರು ಅಂದ್ರೆ ಬಹಳ ಪ್ರೀತಿ, ಹಿಂದೂಗಳ ಪೇಟ, ಕುಂಕುಮ ಆಗಿಬರೋದಿಲ್ಲ. ಇನ್ನೂ 3 ವರ್ಷ ಏನ್ ಮಾಡ್ತಾರೆ ಮಾಡಲಿ, ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತೆ ಎಲ್ಲವನ್ನ ಕಿತ್ತೊಗಿತೀವಿ ಎಂದು ಅಬ್ಬರಿಸಿದ್ದಾರೆ.
ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿ; ನಿಯಮ ಸಡಿಲದಿಂದ ಯಾರಿಗೆ ಲಾಭ..?
* ಪ್ರಾಥಮಿಕ ಶಾಲೆಗಳಲ್ಲಿ ಶೇ.25 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು.
* ಪ್ರೌಢಶಾಲೆಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು.
* ಇನ್ಮುಂದೆ ನಿಗದಿತ ವಿದ್ಯಾರ್ಥಿಗಳ ಪ್ರವೇಶಾತಿಗೆ ಯಾವುದೇ ಷರತ್ತು ಇರಲ್ಲ.
* ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣಕ್ಕೆ ಕಡ್ಡಾಯ ಮಿತಿ ಇಲ್ಲ.
* `ಅಲ್ಪಸಂಖ್ಯಾತ’ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ರೂ ಆ ಸಂಸ್ಥೆಗೆ ಮಾನ್ಯತೆ
* ಮ್ಯಾನೇಜ್‌ಮೆಂಟ್‌ನಲ್ಲಿ 2/3 ಸ್ಥಾನಗಳು ಅಲ್ಪಸಂಖ್ಯಾತರಿಗೆ ಮೀಸಲು
* ನಿಯಮ ಸಡಿಲದಿಂದ ಆಡಳಿತ ಮಂಡಳಿಗಳಿಗೆ ಹೆಚ್ಚು ಲಾಭ ಆಗುತ್ತೆ
* ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಸಿಗುತ್ತೆ
* ಅಲ್ಪಸಂಖ್ಯಾತ ಇಲಾಖೆಯಿಂದ ಎಲ್ಲಾ ಸೌಲಭ್ಯಗಳು ಲಭ್ಯ ಆಗಲಿವೆ.