ತುಮಕೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚನಾವಣೆಯ ಗೆಲುವು ಕಾಂಗ್ರೆಸ್ ಪಕ್ಷಬಿಟ್ಟು ಹೋದವರಿಗೆ ತಕ್ಕ ಉತ್ತರ ನೀಡಿದೆ ಎಂದು ಹೇಳುವ ಮೂಲಕ ಎಸ್‍ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್ ಅವರಿಗೆ ಗೃಹ ಸಚಿವ ಪರಮೇಶ್ವರ್ ಟಾಂಗ್ ನೀಡಿದ್ದಾರೆ.
ಉಪ ಚುನಾವಣೆಯ ಜಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಗೆಲವು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದಿದ್ದು, ಮುಂದಿನ ಚುನಾವಣೆಗೆ ಹುರುಪು ತಂದಿದೆ. ಕಾಂಗ್ರೆಸ್ ಸರ್ಕಾರದ ಜನಪರ ಕೆಲಸವನ್ನು ನೋಡಿ ಜನ ಮನೀಡಿದ್ದಾರೆ ಎಂದು ತಿಳಿಸಿದರು.
Advertisement
ಇದೇ ವೇಳೆ ಗೀತಾ ಮಹದೇವ ಪ್ರಸಾದ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತೀರಾ ಎನ್ನುವ ಪ್ರಶ್ನೆಗೆ, ಗೀತಾ ಅವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಸಿದ್ದರಾಮಯ್ಯನವರಿಗೆ ಬಿಟ್ಟ ವಿಚಾರ ಎಂದು ಉತ್ತರಿಸಿದರು.
Advertisement
ನಂಜನಗೂಡಿನಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಳಲೆ ಕೇಶವಮೂರ್ತಿ ಜಯಗಳಿಸಿದ್ದರೆ, ಗುಂಡ್ಲುಪೇಟೆಯಲ್ಲಿ ನಿರಂಜನ್ ಕುಮಾರ್ ವಿರುದ್ಧ ಗೀತಾ ಮಹದೇವ್‍ಪ್ರಸಾದ್ ಜಯಗಳಿಸಿದ್ದಾರೆ.
Advertisement
ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್ https://t.co/7NdHUf46z5#Karnataka #bypolls #Congress pic.twitter.com/pHPnJMllva
— PublicTV (@publictvnews) April 13, 2017
Advertisement
ನಂಜನಗೂಡಿನಲ್ಲಿ ಕಾಂಗ್ರೆಸ್‍ಗೆ ‘ಪ್ರಸಾದ’ https://t.co/2g84dDENM0#Karnataka #bypolls #Congress #Nanjanagud #kalalekeshavamurthy #BJP pic.twitter.com/I412MgJSSg
— PublicTV (@publictvnews) April 13, 2017
ಗುಂಡ್ಲುಪೇಟೆ: 12,077 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು, ಕಾಂಗ್ರೆಸ್ – 87,687, ಬಿಜೆಪಿ- 75610 ಮತಗಳು @raveeshmysore @kp_nagaraj @KPCCofficial
— PublicTV (@publictvnews) April 13, 2017
ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್https://t.co/Ukbziz8z6W#Gundlupete #ByElection @utkhader #GeethaMhadevaprasad pic.twitter.com/NoHkrLyyvG
— PublicTV (@publictvnews) April 13, 2017