ಬೆಂಗಳೂರು: ಡಿಸೆಂಬರ್ 5ರಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ಇಂದು ಅಂತ್ಯವಾಗಿದೆ. ಗೋಕಾಕ್, ಅಥಣಿ, ಕಾಗವಾಡ, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್. ಕೆ.ಆರ್. ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಜೊತೆಗೆ ಪಕ್ಷೇತರರು ಸೇರಿದಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲಿದ್ದಾರೆ.
ನಾಳೆ (ಮಂಗಳವಾರ) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 21ರಂದು ನಾಮಪತ್ರ ವಾಪಸ್‍ಗೆ ಕೊನೆಯ ದಿನವಾಗಿದೆ. ಡಿಸೆಂಬರ್ 5ರಂದು ಮತದಾನ ನಡೆದರೆ, 9ರಂದು ಮತ ಎಣಿಕೆ ನಡೆಲಿದೆ. 15 ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಈ ಕೆಳಗಿನಂತಿದ್ದಾರೆ.
ಉಪಚುನಾವಣೆಯ ಕದನ ಕಲಿಗಳು:
1. ಕೆ.ಆರ್ ಪೇಟೆ: ಬಿಜೆಪಿ- ನಾರಾಯಣಗೌಡ, ಕಾಂಗ್ರೆಸ್-ಕೆ.ಬಿ ಚಂದ್ರಶೇಖರ್, ಜೆಡಿಎಸ್-ದೇವರಾಜ್ ಬಿ.ಎಲ್.
2. ರಾಣೆಬೆನ್ನೂರು: ಬಿಜೆಪಿ- ಅರುಣ್‍ಕುಮಾರ್ ಪೂಜಾರಿ, ಕಾಂಗ್ರೆಸ್-ಕೆ.ಬಿ.ಕೋಳಿವಾಡ, ಜೆಡಿಎಸ್-ಮಲ್ಲಿಕಾರ್ಜುನ ಹಲಗೇರಿ
3. ಹಿರೇಕೆರೂರು: ಬಿಜೆಪಿ- ಬಿ.ಸಿ ಪಾಟೀಲ್, ಕಾಂಗ್ರೆಸ್-ಬನ್ನಿಕೋಡ್, ಜೆಡಿಎಸ್-ಶಿವಾನಂದ ಶಿವಾಚಾರ್ಯ ಸ್ವಾಮೀಜಿ
4. ಗೋಕಾಕ್: ಬಿಜೆಪಿ- ರಮೇಶ್ ಜಾರಕಿಹೊಳಿ, ಕಾಂಗ್ರೆಸ್-ಲಖನ್ ಜಾರಕಿಹೊಳಿ, ಜೆಡಿಎಸ್-ಅಶೋಕ್ ಪೂಜಾರಿ
5. ವಿಜಯನಗರ: ಬಿಜೆಪಿ-ಆನಂದ್ ಸಿಂಗ್, ಕಾಂಗ್ರೆಸ್-ಬಿ.ವೈ.ಘೋರ್ಪಡೆ, ಜೆಡಿಎಸ್-ಎನ್.ಎಂ.ನಬಿ, ಪಕ್ಷೇತರ-ಕವಿರಾಜ್ ಅರಸು(ಬಂಡಾಯ)
6. ಚಿಕ್ಕಬಳ್ಳಾಪುರ: ಬಿಜೆಪಿ-ಕೆ.ಸುಧಾಕರ್, ಕಾಂಗ್ರೆಸ್-ಅಂಜಿನಪ್ಪ, ಜೆಡಿಎಸ್- ಕೆ.ಪಿ ಬಚ್ಚೇಗೌಡ ಮತ್ತು ರಾಧಾಕೃಷ್ಣ
7. ಶಿವಾಜಿನಗರ: ಬಿಜೆಪಿ- ಶರವಣ, ಕಾಂಗ್ರೆಸ್-ರಿಜ್ವಾನ್ ಅರ್ಷದ್, ಜೆಡಿಎಸ್-ತನ್ವೀರ್ ಅಹ್ಮದ್
8. ಮಹಾಲಕ್ಷ್ಮಿ ಲೇಔಟ್: ಬಿಜೆಪಿ-ಗೋಪಾಲಯ್ಯ, ಕಾಂಗ್ರೆಸ್-ಎಂ.ಶಿವರಾಜು, ಜೆಡಿಎಸ್-ಡಾ.ಗಿರೀಶ್ ನಾಶಿ
9. ಯಶವಂತಪುರ: ಬಿಜೆಪಿ-ಎಸ್.ಟಿ.ಸೋಮಶೇಖರ್, ಕಾಂಗ್ರೆಸ್-ಪಿ.ನಾಗರಾಜ್, ಜೆಡಿಎಸ್-ಜನರಾಯಿಗೌಡ
10. ಕೆ.ಆರ್ ಪುರಂ: ಬಿಜೆಪಿ-ಬೈರತಿ ಬಸವರಾಜ್, ಕಾಂಗ್ರೆಸ್-ನಾರಾಯಣಸ್ವಾಮಿ, ಜೆಡಿಎಸ್-ಕೃಷ್ಣಮೂರ್ತಿ
11. ಹುಣಸೂರು: ಬಿಜೆಪಿ-ಹೆಚ್.ವಿಶ್ವನಾಥ್, ಕಾಂಗ್ರೆಸ್-ಎಚ್.ಪಿ.ಮಂಜುನಾಥ್, ಜೆಡಿಎಸ್-ಸೋಮಶೇಖರ್
12. ಕಾಗವಾಡ: ಬಿಜೆಪಿ-ಶ್ರೀಮಂತ್ ಪಾಟೀಲ್, ಕಾಂಗ್ರೆಸ್-ರಾಜು ಕಾಗೆ, ಜೆಡಿಎಸ್-ಶ್ರೀಶೈಲ್ ತುಗಶೆಟ್ಟಿ
13. ಅಥಣಿ: ಬಿಜೆಪಿ-ಮಹೇಶ್ ಕುಮಟಳ್ಳಿ, ಕಾಂಗ್ರೆಸ್-ಗಜಾನನ ಮನಗೂಳಿ, ಜೆಡಿಎಸ್-ಗುರು ದಾಶ್ಯಾಳ
14. ಯಲ್ಲಾಪುರ: ಬಿಜೆಪಿ-ಶಿವರಾಮ್ ಹೆಬ್ಬಾರ್, ಕಾಂಗ್ರೆಸ್-ಭೀಮಣ್ಣ ನಾಯ್ಕ್, ಜೆಡಿಎಸ್-ಚೈತ್ರಾ ಗೌಡ
15. ಹೊಸಕೋಟೆ: ಬಿಜೆಪಿ-ಎಂಟಿಬಿ ನಾಗರಾಜ್, ಕಾಂಗ್ರೆಸ್-ಪದ್ಮಾವತಿ ಸುರೇಶ್, ಜೆಡಿಎಸ್-ಇಲ್ಲ, ಪಕ್ಷೇತರ-ಶರತ್ ಬಚ್ಚೇಗೌಡ
ಈ ನಡುವೆ ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ, ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್, ಮಹಾಲಕ್ಷ್ಮಿ ಲೇಔಟ್ ನಿಂದ ಬಿಜೆಪಿಯ ಗೋಪಾಲಯ್ಯರ ಪತ್ನಿ ಹೇಮಲತಾ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ನಿಂದ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.