ಬೆಂಗಳೂರು: ಬಿಜೆಪಿ ಸರ್ಕಾರವನ್ನು ಉಳಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಯಡಿಯೂರಪ್ಪ 12 ದಿನ ನಿಮ್ಮ ಕೆಲಸ ಬರೀ ರಾಜಕಾರಣ ಮಾತ್ರ, ಆಡಳಿತವಲ್ಲ ಎಂದು ಎಲ್ಲ ಮಂತ್ರಿ ಮತ್ತು ಶಾಸಕರಿಗೆ ಟಾಸ್ಕ್ ನೀಡಿದ್ದಾರೆ.
ನವೆಂಬರ್ 22ರಿಂದ ಡಿಸೆಂಬರ್ 3ರ ತನಕ ಸಚಿವರು ಮತ್ತು ಶಾಸಕರು ನಿಗದಿ ಮಾಡಿದ ಕ್ಷೇತ್ರಗಳಲ್ಲಿ ಇರಬೇಕು. ಆಯಾ ಕ್ಷೇತ್ರಗಳ ಸುತ್ತಮುತ್ತಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಬಿಎಸ್‍ವೈ ಸೂಚಿಸಿದ್ದಾರೆ.
Advertisement
ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಉಸ್ತುವಾರಿ ಕ್ಷೇತ್ರಗಳಲ್ಲಿ ಆಯಾ ಸಚಿವರು ಟಾಸ್ಕ್ ಗಳನ್ನು ಹಂಚಿಕೊಳ್ಳಬೇಕು. ಸಾಧ್ಯವಾದಷ್ಟು ಸ್ಥಳೀಯ ಕಾಂಗ್ರೆಸ್-ಜೆಡಿಎಸ್ ಮುಖಂಡರ ಆಪರೇಷನ್ ಮಾಡಿ ಪಕ್ಷದತ್ತ ಸೆಳೆಯುವಂತೆ ಮಾಡಿ. ವಿವಾದಾತ್ಮಕ ಹೇಳಿಕೆಗಳು, ವ್ಯಕ್ತಿಗತ ಟಾರ್ಗೆಟ್ ಮಾಡುವುದಕ್ಕೆ ಕಡಿವಾಣ ಹಾಕಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ
Advertisement
Advertisement
ಎದುರಾಳಿ ಅಭ್ಯರ್ಥಿಗಳ ತಂತ್ರಗಾರಿಕೆ ಮತ್ತು ಬಲಾಬಲ ಆಧರಿಸಿ ವರದಿ ನೀಡಬೇಕು. ಅಸಮಾಧಾನ, ಬಂಡಾಯ ಶಮನಗಳಿಗೆ ಸಾಧ್ಯವಾದಷ್ಟು ಪ್ರಯತ್ನಿಸಿ ಸುಧಾರಣೆ ಮಾಡಿಕೊಳ್ಳಬೇಕು. ಅವಶ್ಯಕತೆ ಇರುವ ವಿವಿಧ ಸಂಪನ್ಮೂಲಗಳ ಅವಶ್ಯಕತೆ ಬಗ್ಗೆ ಮಾಹಿತಿಯನ್ನು ನೀಡಬೇಕು.
Advertisement
ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿಗಳು?
1. ಅಥಣಿ – ಸಚಿವ ಕೆ.ಎಸ್. ಈಶ್ವರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ
2. ಕಾಗವಾಡ – ಸಚಿವ ಸಿ.ಸಿ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಟ, ಶಾಸಕರಾದ ಪಿ. ರಾಜೀವ್, ಅರವಿಂದ ಬೆಲ್ಲದ್
3. ಗೋಕಾಕ್ – ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ
4. ಯಲ್ಲಾಪುರ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ
5. ಹಿರೇಕೆರೂರು – ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ. ಬಣಕಾರ್
6. ರಾಣೆಬೆನ್ನೂರು – ಸಚಿವ ಜಗದೀಶ್ ಶೆಟ್ಟರ್, ಸಚಿವ ಪ್ರಭು ಚೌಹಾಣ್, ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಬಿಜೆಪಿ ಮುಖಂಡ ಗಿರೀಶ್ ಪಟೇಲ್
7. ವಿಜಯನಗರ – ಡಿಸಿಎಂ ಗೋವಿಂದ ಕಾರಣಜೋಳ, ಎಂಎಲ್‍ಸಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ, ಬಿಜೆಪಿ ಪರಾಜಿತ ಅಭ್ಯರ್ಥಿ ಗವಿಯಪ್ಪ
8. ಚಿಕ್ಕಬಳ್ಳಾಪುರ – ಸಚಿವ ಸಿ.ಟಿ.ರವಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಪಿ.ಸಿ. ಮೋಹನ್, ಸಂಸದ ಬಿ.ಎನ್.ಬಚ್ಚೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಂಜುನಾಥ್
9. ಕೆ.ಆರ್.ಪುರಂ – ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ
10. ಯಶವಂತಪುರ – ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಎಂಎಲ್‍ಸಿಗಳಾದ ಅಶ್ವಥ್ ನಾರಾಯಣ, ಜಗ್ಗೇಶ್
11. ಮಹಾಲಕ್ಷ್ಮಿಲೇಔಟ್ – ಸಚಿವ ವಿ. ಸೋಮಣ್ಣ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬನರಸಿಂಹ
12. ಶಿವಾಜಿನಗರ – ಬೆಂಗಳೂರು ಮಹಾನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಸ್. ಮುನಿರಾಜು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್. ರಘು
13. ಹೊಸಕೋಟೆ – ಡಿಸಿಎಂ ಡಾ.ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್. ಅರ್. ವಿಶ್ವನಾಥ್, ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ
14. ಕೆ.ಆರ್. ಪೇಟೆ – ಸಚಿವ ಜೆ.ಸಿ. ಮಾಧುಸ್ವಾಮಿ, ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಶಾಸಕ ಪ್ರೀತಂಗೌಡ
15. ಹುಣಸೂರು – ಸಚಿವ ಶ್ರೀರಾಮುಲು, ಮಾಜಿ ಸಚಿವ ವಿಜಯ್ ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್