ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಾತಯ್ಯ ನುಡಿದಿದ್ದ ಭವಿಷ್ಯ ಇಂದಿನ ಕರ್ನಾಟಕ ಲೋಕಸಭಾ ಉಪಚುನಾವಣೆಯ ಫಲಿತಾಂಶದ ಮೂಲಕ ನೆರವೇರಿದೆ.
ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಈ ಹಿಂದೆಯೇ ಬಳ್ಳಾರಿ ಕಾಂಗ್ರೆಸ್ ಗೆಲುವುವಿಗೆ ತಾತಯ್ಯ ಅಭಯ ಹಸ್ತ ನೀಡಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿ ಆಗ್ತೀನಾ: ಕಾಲಜ್ಞಾನಿ ತಾತಯ್ಯನ ಬಳಿ ಭವಿಷ್ಯ ಕೇಳಿ ಡಿಕೆಶಿ ಕನ್‍ಫ್ಯೂಸ್!
ಅಬ್ಬರದ ಪ್ರಚಾರದ ನಡುವೆಯೂ ಸಚಿವ ಶಿವಕುಮಾರ್ ಅವರು ಗಣಿನಾಡಿನ ಸಂಡೂರಿನ ಕಾಡಿನ ಮಧ್ಯಮದಲ್ಲಿರುವ ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ತಾತಯ್ಯನ ದರ್ಶನವನ್ನು ಶಿವಕುಮಾರ್ ಅವರು ಪಡೆದಿದ್ದರು.
ಈ ವೇಳೆ ಶಿವಕುಮಾರ್ ಅವರು ಕಾಡಿನ ಮಧ್ಯೆ ಕುಳಿತಿದ್ದ ತಾತಯ್ಯನ ಬಳಿ ಮೊದಲಿಗೆ ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲುವವರು ಯಾರು? ನಾವೋ ಇಲ್ಲ ರಾಮುಲೋ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ತಾತಯ್ಯ ಗೆಲುವು ನಿಮ್ಮದೇ ಎಂದು ಭವಿಷ್ಯ ಹೇಳಿದ್ದರು. ಅಂದು ತಾತಯ್ಯ ಹೇಳಿದ್ದ ಭವಿಷ್ಯದಂತೆ ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರಿಂದ ಗೆಲವುವನ್ನು ಸಾಧಿಸಿದ್ದಾರೆ.
ಇಂದು ಬಳ್ಳಾರಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ಶ್ರೀರಾಮುಲು ಅಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ಶ್ರೀರಾಮುಲು ಅಣ್ಣನವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹಳ ಶಾಂತ ರೀತಿಯಿಂದ ಚುನಾವಣೆಯನ್ನು ನಡೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಯಾವ ಸಣ್ಣ ಕಾರ್ಯಕರ್ತರಲ್ಲಿ ಘರ್ಷಣೆಯನ್ನು ಉಂಟು ಮಾಡದೇ ಇದ್ದು, ಒಟ್ಟಿನಲ್ಲಿ ಈ ಚುನಾವಣೆ ಸುಲಲಿತವಾಗಿ ನಡೆಸಿಕೊಡಲು ಸಹಕಾರ ಮಾಡಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದಿರಬೋದು ಅಥವಾ ಸೋತಿರಬಹುದು. ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಬದಲಾಗಿ ನಮ್ಮಿಂದ ಯಾವುದೇ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನೋವಾಗಬಾರದು ಅಂತ ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಟಾಂಗ್ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv