ಬೆಳಗಾವಿ: ಕನ್ನಡ ಮಾತಾಡು ಎಂದಿದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಇದೀಗ ಭಾಷಾ ವೈಷಮ್ಯಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ (Maharashtra) ಸಂಚರಿಸುವ ಬಸ್‌ಗಳನ್ನು (Karnatak Bus) ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದು ಉದ್ಧವ್ ಠಾಕ್ರೆ ಬಣದ ಶಿವಸೇನೆ (Shiv Sena) ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದಿದ್ದಾರೆ.
ಪುಣೆಯ ಸ್ವಾರಗೇಟ್ ಬಳಿ ಪುಂಡಾಟಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದಾರೆ. ನಡು ರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದಾರೆ. ಇದನ್ನೂ ಓದಿ: ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯಲಾಗಿದೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ ಮಸಿ ಬಳಿಯಲಾಗಿದೆ. ಮುಂಬೈ ಇಳಕಲ್ ಮರಾಠಿ ಬರುತ್ತಾ ಎಂದು ಕೇಳಿ ಬರಲ್ಲ ಎಂದಿದ್ದಕ್ಕೆ ಬಸ್ ಬೋರ್ಡ್ ಒಡೆದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ
ಕರ್ನಾಟಕದಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆ ಹೀಗೆ ಒಡೆದು ಹಾಕ್ತಿವಿ ಎಂದು ಧಮ್ಕಿ ಕೊಟ್ಟಿದ್ದಾರೆ. ಠಾಕ್ರೆ ಬಣದ ಆಟಾಟೋಪಕ್ಕೆ ಮಹಾರಾಷ್ಟ್ರದಲ್ಲಿ ಬ್ರೇಕ್ ಇಲ್ಲದಂತಾಗಿದೆ. ಸಧ್ಯ ಮಹಾರಾಷ್ಟ್ರದಲ್ಲಿ ಠಾಕ್ರೆ ಬಣದ ಗೂಂಡಾವರ್ತನೆ ಮಿತಿಮೀರಿದೆ. ಇದನ್ನೂ ಓದಿ: ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ
ಇನ್ನೂ ಮಂಗಳವಾರ ಬೆಳಗಾವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸಹ ಆಗಮಿಸುತ್ತಿದ್ದಾರೆ. ಕನ್ನಡ ಮಾತಾಡು ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ನಾರಾಯಣಗೌಡ ಚಲೋ ಪಂಥಬಾಳೆಕುಂದ್ರಿ ಕರೆ ನೀಡಿದ್ದಾರೆ. ಬೆಳಗಾವಿಯಿಂದ ಪಂಥಬಾಳೆಕುಂದ್ರಿಗೆ ಪ್ರತಿಭಟನಾ ರ‍್ಯಾಲಿ ಆಯೋಜನೆ ಮಾಡಿದ್ದು, ಕಂಡೆಕ್ಟರ್ ಮೇಲೆ ನೆಡದ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೆ ನಾರಾಯಣಗೌಡ ಬರುತ್ತಿರುವ ಹಿನ್ನೆಲೆ ನೂರಾರು ಕಾರ್ಯಕರ್ತರು ಮಂಗಳವಾರದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.