ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಶುಕ್ರವಾರ ಬಜೆಟ್ ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ಅಲ್ಲದೇ ಸರ್ಕಾರವನ್ನು ಬ್ಯಾಡ್ ಎಂದು ಕರೆದಿದ್ದಾರೆ.
ಸಿದ್ದು ಪತ್ರಿಕಾ ಹೇಳಿಕೆಯಲ್ಲೇನಿದೆ?
ಬಿಜೆಪಿಯನ್ನು ಮೂರು ಪದಗಳಲ್ಲಿ ಬಣ್ಣಿಸುವುದಾದರೆ, “BAD” (Broken Promises – Abysmal Governance – Divisive Agenda) ಅಂದರೆ ಸುಳ್ಳು ಭರವಸೆ, ದುರಾಡಳಿತ, ಒಡೆದು ಆಳುವ. ಬೊಮ್ಮಾಯಿ ಅವರ ಸರ್ಕಾರ ಎಂದರೆ, ಅಸಮರ್ಥರ ಸರ್ಕಸ್ ಹಾಗೂ ಭ್ರಷ್ಟರ ಪಡೆ ಎಂದರ್ಥ. ಬಿಜೆಪಿಯ ಡಿಎನ್ಎ ಮೂರು Dಗಳಿಂದ ಕೂಡಿದೆ. ‘Dupe!’, ‘Deceive!”, “Divide!” ಅಂದರೆ, ವಂಚನೆ, ಮೋಸ, ವಿಭಜನ.
Advertisement
ಪಕ್ಷಾಂತರ ಹಾಗೂ ಭ್ರಷ್ಟಾಚಾರದಿಂದ ರಚನೆಯಾದ ಬಿಜೆಪಿಯ ಅನೈತಿಕ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶಾಪವಾಗಿದೆ. ಭ್ರಷ್ಟಾಸುರ ಬೊಮ್ಮಾಯಿ ಅವರ ಸರ್ಕಾರದ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಸರ್ಕಾರ. ಸುಳ್ಳು ಭರವಸೆ ಮೂಲಕ ರಾಜ್ಯದ ಜನರ ಕನಸನ್ನು ನುಚ್ಚುನೂರು ಮಾಡಿದೆ. ಜತೆಗೆ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದೆ. ಈ ಲಂಪಟ ಹಾಗೂ ಭ್ರಷ್ಟಚಾರ ದರೂಪವಾಗಿರುವ ಸರ್ಕಾರದಲ್ಲಿ ಬೊಮ್ಮಾಯಿ ಅವರು #PayCM ಹಾಗೂ ಅವರ ಸರ್ಕಾರ #40% ಸರ್ಕಾರ ಎಂಬ ಖ್ಯಾತಿ ಪಡೆದಿದೆ. ಈ ಸರ್ಕಾರ ರಾಜ್ಯದ 6.50 ಕೋಟಿ ಜನರ ಈ ಆರು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಇದನ್ನೂ ಓದಿ: ಬಸವ, ಬುದ್ಧ, ಅಂಬೇಡ್ಕರ್ ತತ್ವದಿಂದ ಕೆಆರ್‌ಪಿಪಿ ಹುಟ್ಟಿದೆ – ಸಿಟ್ಟು, ದ್ವೇಷದಿಂದಲ್ಲ: ಜನಾರ್ದನ ರೆಡ್ಡಿ
Advertisement
Advertisement
ಬೊಮ್ಮಾಯಿ ಅವರ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡುತ್ತಿದ್ದು, ಬಿಜೆಪಿಯ 2018ರ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.91ರಷ್ಟು ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದೇಕೆ? ರೈತರಿಗೆ ಕೊಟ್ಟ 112 ಭರವಸೆಗಳ ಪೈಕಿ 97 ಭರವಸೆಗಳನ್ನು ಈಡೇರಿಸಲು ಈ ಸರ್ಕಾರ ವಿಫಲವಾಗಿದ್ದು ಯಾಕೆ? ರೈತರ ಸಾಲ ಮನ್ನಾ ಮಾಡುವ ಭರವಸೆ ಏನಾಯ್ತು? ಇನ್ನು ರೈತರಿಗೆ ನ್ಯಾಯಯುತ ಬೆಂಬಲ ಬೆಲೆ (MSP) ನೀಡುವ ಭರವಸೆ ಏನಾಯ್ತು? ಬಿಜೆಪಿ ಸರ್ಕಾರ ಮಹಿಳೆಯರಿಗೆ ನೀಡಿದ್ದ 26 ಭರವಸೆಗಳ ಪೈಕಿ 24 ಭರವಸೆ ಈಡೇರಿಸಲು ವಿಫಲವಾಗಿದ್ದು ಏಕೆ? 10 ಸಾವಿರ ಕೋಟಿಯ ಸ್ತ್ರೀ ಉನ್ನತಿ ನಿಧಿ ಯೋಜನೆ ಏನಾಯ್ತು? ರಾಜ್ಯದ ಹೆಣ್ಣು ಮಕ್ಕಳಿಗೆ ನೀಡುತ್ತೇವೆ ಎಂದಿದ್ದ ಉಚಿತ ಸ್ಮಾರ್ಟ್ ಫೋನ್‌ಗಳು ಎಲ್ಲಿ ಹೋದವು? ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಿದ್ದೇಕೆ? ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಯಾಗಿಲ್ಲ. ಯಾಕೆ? ನೇಮಕಾತಿ ಅಕ್ರಮಗಳ ಪರಿಣಾಮ 2.52 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇದು ಯುವಕರ ಭವಿಷ್ಯಕ್ಕೆ ಗ್ರಹಣ ಹಿಡಿಯುವಂತೆ ಮಾಡಿದೆ. 1,300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಪಿಯು ಕಾಲೇಜು ನಿರ್ಮಾಣವಾಗಿಲ್ಲ ಯಾಕೆ? ಪದವಿವರಗೂ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಸರ್ಕಾರ ಕಸದಬುಟ್ಟಿಗೆ ಎಸೆದಿರುವುದೇಕೆ?
Advertisement
ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ SC/ST/OBC ಸಮುದಾಯಗಳಿಗೆ ನೀಡಿದ್ದ 81 ಭರವಸೆಗಳಲ್ಲಿ 77 ಭರವಸೆಗಳನ್ನು ಈಡೇರಿಸದೇ ದ್ರೋಹ ಬಗದಿರುವುದೇಕೆ? ಸಮುದಾಯದ ಮಕ್ಕಳಿಗೆ 4500 ಕೋಟಿಯ ವಿದ್ಯಾರ್ಥಿ ವೇತನ ಎಲ್ಲಿದೆ? ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಕ್ಕೆ ಘೋಷಿಸಿದ್ದ ರೂ 15,000 ಕೋಟಿ ವೆಚ್ಚದ ವಸತಿ ನಿರ್ಮಾಣ ಭರವಸೆ ಪೂರ್ಣಗೊಂಡಿಲ್ಲ ಏಕೆ? ಎಸ್ಸಿ-ಎಸ್ಟಿಗೆ ಮೀಸಲಾದ ರೂ. 7,000 ಕೋಟಿ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ಎಸ್ಸಿ-ಎಸ್ಟಿ ಸಮುದಾಯಕ್ಕೆ ವಂಚಿಸಿದ್ದೇಕೆ? 2018ರ ಬಿಜೆಪಿ ಪ್ರಣಾಳಿಕೆಯಲ್ಲಿ “ಶಿಕ್ಷಣ” ಕೇತ್ರಕ್ಕೆ ಘೋಷಿಸಲಾದ 32 ಭರವಸೆಗಳ ಪೈಕಿ 29ಈಡೇರಿಸಿಲ್ಲ, “ಆರೋಗ್ಯ ” ಕ್ಷೇತ್ರಕ್ಕೆ ನೀಡಿದ್ದ 40 ಭರವಸೆಗಳ ಪೈಕಿ 35 ಭರವಸೆ ಈಡೇರಿಲ್ಲ, ಮೂಲ ಸೌಕರ್ಯ ಕ್ಷೇತ್ರದಲ್ಲಿ 48 ಭರವಸೆಗಳ ಪೈಕಿ 40 ಭರವಸೆ ಪೂರ್ಣಗೊಂಡಿಲ್ಲ, ಕೈಗಾರಿಕಾಭಿವೃದ್ಧಿಗೆ23 ಭರವಸೆಗಳನ್ನು ನೀಡಿ 22 ಭರವಸೆ ಈಡೇರಿಸಿಲ್ಲ. ಈ ಭರವಸೆಗಳ ವಿಚಾರಗಳಲ್ಲಿ ಸರ್ಕಾರ ವಿಫಲವಾಗಿದ್ದು ಏಕೆ?
2018ರ ಬಿಜೆಪಿ ಪ್ರಣಾಳಿಕೆಯ ಸುಳ್ಳಿನ ಸರಮಾಲೆ ಒಂದು ಕಡೆಯಾದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022 – 2023ನೇ ಸಾಲಿನ ಬಜೆಟ್‌ನಲ್ಲೂ ಸುಳ್ಳಿನ ಸರಮಾಲೆ ಪೋಣಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು 2022-2023 ಬಜೆಟ್‌ನಲ್ಲಿ ಹೇಳಿರುವ ಸುಳ್ಳುಗಳ ಬಗ್ಗೆ ಈ 10 ಪ್ರಶ್ನೆ ಕೇಳಲಾಗುತ್ತಿದ್ದು, ಸರ್ಕಾರ 6.5 ಕೋಟಿ ಕನ್ನಡಿಗರಿಗೆ ಉತ್ತರ ನೀಡಲಿ.
ಬಜೆಟ್ಟಿನಲ್ಲಿ ಘೋಷಿಸಲಾದ 339 ಕಾರ್ಯರೂಪಕ್ಕೆ ತರುವ ಭರವಸೆಗಳ ಪೈಕಿ 207 ಭರವಸೆಗಳನ್ನು ಸರ್ಕಾರಿ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದರೆ, ಉಳಿದ 132 ಭರವಸೆಗಳು ಅನುಷ್ಠಾನಕ್ಕೆ ತಂದಿಲ್ಲ ಏಕೆ? ಇದನ್ನೂ ಓದಿ: ಅವರು ಅಶ್ವಥ್ ನಾರಾಯಣ್ ಅಲ್ಲ.. ಮಾನಸಿಕ ಅಸ್ವಸ್ಥ: ಬಿ.ಕೆ.ಹರಿಪ್ರಸಾದ್
ಜನವರಿ, 1, 2023 ರವರೆಗೆ ಬೊಮ್ಮಾಯಿ ಸರ್ಕಾರ 2022-2023ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಅನುದಾನಗಳ ಪೈಕಿ ಕೇವಲ 56% ಮಾತ್ರ ಬಳಕೆ ಮಾಡಿರುವುದು ಎಕೆ? (2.5 ಲಕ್ಷ ಕೋಟಿ ಪೈಕಿ 1.4 ಲಕ್ಷ ಕೋಟಿ ಮಾತ್ರ ಬಳಕೆಯಾಗಿದೆ)
438 “ನಮ್ಮ ಕ್ಲಿನಿಕ್”ಗಳು ಕೇವಲ ಕಾಗದದ ಮೇಲೆ ಉಳಿದಿರುವುದೇಕೆ?
19 ಲಕ್ಷ ಬಾಲಕಿಯರಿಗೆ ನೆರವಾಗಬೇಕಿದ್ದ “ಶುಚಿ” ಯೋಜನೆಯನ್ನು ಇದುವರೆಗೆ ಪುನಾರಂಭಿಸಿಲ್ಲ ಏಕೆ?
2022-2023ನೇ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡಿದ್ದ 3,000 ಕೋಟಿ ರೂಪಾಯಿಗಳ ಅನುದಾನ ಪೈಕಿ ಬಸವರಾಜ ಬೊಮ್ಮಾಯಿ 50% ಅನುದಾನವನ್ನೂ ಬಳಸಿಲ್ಲ ಏಕೆ?
2022-2023ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಒಕ್ಕಲಿಗ ಅಭಿವೃದ್ಧಿ ಮಂಡಳಿ ಮತ್ತು ಬಿಲ್ಲವ ಕೋಶಕ್ಕೆ ಅನುದಾನ ಬಿಡುಗಡೆ ಮಾಡಲು ಬಸವರಾಜ ಬೊಮ್ಮಾಯಿ ವಿಫಲರಾಗಿದ್ದು ಏಕೆ? ಇದನ್ನೂ ಓದಿ: ಬಿಜೆಪಿ ಸರ್ಕಾರದ ಕಡೇ ಬಜೆಟ್- ಬೊಮ್ಮಾಯಿ ಬಜೆಟ್‌ನಲ್ಲಿ ಏನಿರಬಹುದು?
ಎಲ್ಲ ಜಾತಿಗಳಿಗೂ ಮೀಸಲಾತಿ ನೀಡುವ ಕುರಿತು ಬಸವರಾಜ ಬೊಮ್ಮಾಯಿ ಸುಳ್ಳು ಭರವಸೆಗಳನ್ನು ನೀಡುತ್ತಿರುವುದು ಏಕೆ? ಬೊಮ್ಮಾಯಿ ಮತ್ತು ಮೋದಿ ಸರ್ಕಾರ ಎಸ್ಸಿ/ಎಸ್ಟಿ ಮೀಸಲಾತಿ ಕಾಯಿದೆಯನ್ನು ಸಂವಿಧಾನದ 9ನೇ ಷೆಡ್ಯೂಲ್ ಸೇರಿಸುವ ಪ್ರಕ್ರಿಯೆಗೆ ಮುಂದಾಗಿಲ್ಲ ಏಕೆ?
ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಣೆ ಮಾಡಿದ್ದು ಏಕೆ? ಆ ಸಮುದಾಯವನ್ನು “ಹಿಡಿದುಕೊಳ್ಳಲು” ಈ ತಂತ್ರನಾ?
ಎಸ್ಸಿ, ಕುರುಬ ಹಾಗೂ ಇತರ ಹಿಂದುಳಿದ ಸಮುದಾಯಗಳಿಗೆ ಕೊಟ್ಟ ಭರವಸೆ ಈಡೇರಿಸದೇ ಮುಖ್ಯಮಂತ್ರಿಗಳು ಬೆನ್ನಿಗೆ ಚೂರಿ ಹಾಕುತ್ತಿರುವುದು ಏಕೆ?
ಗೋವಾದಲ್ಲಿ ಕನ್ನಡ ಭವನ ಎಲ್ಲಿದೆ? 2023-24ನೇ ಸಾಲಿನ ಸುಳ್ಳಿನ ಬಜೆಟ್ ಮಂಡನೆಯಾಗುವ ಮೊದಲೇ ಕನ್ನಡಿಗರು ಅದನ್ನು ತಿರಸ್ಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k