ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಭಾಷಣದಲ್ಲಿ ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಲು ಮನವಿ ಮಾಡಿದ್ದಾರೆ.
ಸಿಎಂ ಹೇಳಿದ್ದೇನು?:
ರಾಜ್ಯದ ರಾಜಸ್ವ ಸಂಪನ್ಮೂಲಗಳೂ ರಾಜ್ಯದ ಸ್ವಂತ ತೆರಿಗೆ, ತೆರಿಗೆಯೇತರ ಸ್ವೀಕೃತಿಗಳು, ಕೇಂದ್ರ ತೆರಿಗೆಗಳಿಂದ ರಾಜ್ಯದ ಪಾಲು ಮತ್ತು ಕೇಂದ್ರ ಸರ್ಕಾರದ ಸಹಾಯಾನುದಾನವನ್ನು ಒಳಗೊಂಡಿರುತ್ತದೆ. ವರ್ಷದ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದ ಎರನೇ ಅಲೆಯಿಂದಾಗಿ ರಾಜಸ್ವ ಸಂಗ್ರಹವು ಮಂದಗತಿಯಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ಮುಂದಿನ ದಿನಗಳಲ್ಲಿ ಅದು ಹೆಚ್ಚಿದ್ದು, ಆಯವ್ಯಯದಲ್ಲಿ ಅಂದಾಜು ಮಾಡಿದ ಗುರಿಗಳನ್ನು ನಾವು ತಲುಪಲಿದ್ದೇವೆ.
Advertisement
Advertisement
2021-2022ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ರಾಜಸ್ವ ಸಂಗ್ರಹಣೆಗಳು ಸಹ ಹೆಚ್ಚಿವೆ. ಇದರಿಂದಾಗಿ ರಾಜ್ಯಕ್ಕೆ ಕೇಂದ್ರ ತೆರಿಗೆಗಳ ಪಾಲನ್ನು ಪರಿಷ್ಕೃತ ಅಂದಾಜಿನಲ್ಲಿ, ಆಯವ್ಯಯದಲ್ಲಿ ಅಂದಾಜು ಮಾಡಿದ 24,273 ಕೋಟಿ ರೂ.ಗಳಿಂದ 27,145 ಕೋಟಿ ರೂ. ಗಳಿಗೆ ಹೆಚ್ಚಸಲಾಗಿದೆ. ಕೇಂದ್ರ ಸರ್ಕಾರವು 2022-23ನೇ ಸಾಲಿನ ತನ್ನ ಆಯವ್ಯಯದಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಾಗಿ 29,783ಕೋಟಿ ರೂ.ಗಳನ್ನು ಅಂದಾಜು ಮಾಡಿದೆ.
Advertisement
ಹಿಂದಿನ ವರ್ಷಕ್ಕೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ರಾಜ್ಯದ ಜಿಎಸ್‍ಟಿ ಸಂಗ್ರಹಣೆಯು ಹೆಚ್ಚಾಗಿದೆ ಮತ್ತು ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಕೇಂದ್ರ ಸರ್ಕಾರವು 2021-22ನೇ ಸಾಲಿಗೆ ಜಿಎಸ್‍ಟಿ ಪರಿಹಾರ ಮೊತ್ತ 7,158 ಕೋಟಿ ರೂ.ಗಳ ಜೊತೆಗೆ ಜಿಎಸ್‍ಟಿ ಪರಿಹಾರದ ಬದಲಾಗಿ 18,1089 ಕೋಟಿ ರೂ.ಗಳನ್ನು ಜಿಎಸ್‍ಟಿ ಸಾಲವಾಗಿ ನೀರುವ ಮೂಲಕ ರಾಜ್ಯವನ್ನು ಬೆಂಬಲಿಸಿದೆ. ಇದನ್ನು ಓದಿ: ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ
Advertisement
ಇದು ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾತ್ರವಲ್ಲದೆ ಬೆಳವಣಿಗೆಗೆ ಉತ್ತೇಜನೆಯನ್ನು ಒದಗಿಸುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಹಣವನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹ ನಮಗೆ ಸಹಾಯ ಮಾಡಿದೆ.
ಜಿಎಸ್‍ಟಿ ಪರಿಹಾರವು ಜೂನ್ 2022ಕ್ಕೆ ಕೊನೆಗೊಳ್ಳಲಿದೆ. ಇದರರ್ಥ ರಾಜ್ಯವು ಹೆಚ್ಚುವರಿ ಸಂಪನ್ಮೂಲಗಳನ್ನು ಒಟ್ಟುಗೂಡಿಸಬೇಕು ಎಂಬುದಾಗಿದೆ. ನಾವು ಸ್ವಂತ ತೆರಿಗೆ ಸಂಗ್ರಹಗಳನ್ನು ಮತ್ತು ತೆರಿಗೆಯೇತರ ಸಂಗ್ರಹಗಳನ್ನು ಹೆಚ್ಚಸಲು ಪ್ರಯತ್ನಿಸಿದ್ದೇವೆ. ಭವಿಷ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಲು ನಾನು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದೇನೆ. ಇದನ್ನು ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ
ಕೋವಿಡ್ ಪ್ರಭಾವದಿಂದಾಗಿ ಆರ್ಥಿಕ ಹಿಂಜರಿಕೆಯನ್ನು ನಿವಾರಿಸಲುಯ ರಾಜ್ಯಗಳಿಗೆ ಬೆಂಬಲವಾಗಿ 2021-22ನೇ ಸಾಲಿನ ಅವಧಿಯಲ್ಲಿ ಜಿಎಸ್‍ಡಿಪಿಯ ಶೇ.4ರವರೆಗೆ ಸಾಲವನ್ನು ಪಡೆಯಲುಯ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುಕೂಲ ಕಲ್ಪಿಸಿದೆ. ಅದರಂತೆ, ಈ ಸೌಲಭ್ಯವನ್ನು ಪಡೆಯಲು ರಾಜ್ಯ ಸರ್ಕಾರವು ಕರ್ನಾಟಕ ವಿತ್ತಿಯ ಹೊಣೆಗಾರಿಕೆ ಅಧಿನಿಯಮ, 2002ಅನ್ನು ತಿದ್ದುಪಡಿ ಮಾಡಿದೆ. 2022-23ನೇ ಸಾಲಿಗೆ ಕೇಮದ್ರ ಸರ್ಕಾರವು ತನ್ನ ಕೇಂದ್ರ ಆಯವ್ಯಯದಲ್ಲಿ ವಿತ್ತೀಯ ಕೊರತೆಯನ್ನು ಶೇ. 3.5ರವರೆಗೆ ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ ನೀಡಿದ್ದರೂ ಸಹ ನಮ್ಮ ಸರ್ಕಾರವು ಇದನ್ನು ಶೇ.3.26ಕ್ಕೆ ಸಿಮೀತಗೊಳಿಸುವ ಮೂಲಕ ಆರ್ಥಿಕ ಶಿಸ್ತು ಮತ್ತು ಮುಂದಾಲೋಚನೆಯನ್ನು ಪ್ರದರ್ಶಿಸಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕಳೆದ 2 ವರ್ಷಗಳಲ್ಲಿ ಹೆಚ್ಚುವರಿ ಸಾಲವನ್ನು ಅನುಮತಿಸಿದಾಗ ನಾವು ಸಾಲವನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಯವ್ಯದ 67,100 ಕೋಟಿ ರೂ.ಗಳ ಬದಲಿಗೆ 63,100ಕೀಓಟಿ ರೂ.ಗಳಿಗೆ ಸಾಲವನ್ನು ನಿರ್ಬಂಧಿಸಲು ಪ್ರಸ್ತಾಪಿಸಿದ್ದೇನೆ. 2022-23ನೇ ಸಾಲಿನಲ್ಲಿ 72,000ಕೋಟಿ ರೂ.ಗಳ ಸಾಲವನ್ನು ಪಡೆಯಲು ಯೋಜಿಸಿದ್ದೇವೆ ಎಂದರು.
2021-22ನೇ ಸಾಲಿಗೆ ಮಂಡಿಸಲಾದ ಆಯವ್ಯ ಆಗ ಇದ್ದ ನಿರ್ಬಂಧಗಳಿಂದಾಗಿ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೊಸ ಯೋಜನೆಗಳನ್ನು ಘೋಷಿಸುವಲ್ಲಿ ಸಂಯಮವನ್ನು ಪ್ರದರ್ಶಿಸುವ ಮೂಲಕ ತೊಂದರೆಗಳನ್ನು ಎದುರಿಸುವ ಆಯವ್ಯಯ ಆಗಿತ್ತು. 2022-23ನೇ ಆಯವ್ಯಯವು ಒಂದು ಭರವಸೆಯಾಗಿದ್ದು, ಇದು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ ಎಂದು ತಿಳಿಸಿದರು.