ಯಾವ ಭಾಗಕ್ಕೆ ಎಷ್ಟು ಹಂಚಿಕೆ?
ಸಾಲ ಮರುಪಾವತಿ- 18 ಪೈಸೆ
ಇತರ ಸಾಮಾನ್ಯ ಸೇವೆ- 18 ಪೈಸೆ
Advertisement
ಸಮಾಜ ಕಲ್ಯಾಣ- 15 ಪೈಸೆ
Advertisement
ಇತರ ಆರ್ಥಿಕ ಸೇವೆಗಳು- 14 ಪೈಸೆ
Advertisement
ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ- 14 ಪೈಸೆ
Advertisement
ಶಿಕ್ಷಣ- 10 ಪೈಸೆ
ಆರೋಗ್ಯ- 5 ಪೈಸೆ
ಇತರ ಸಾಮಾಜಿಕ ಸೇವೆಗಳು- 3 ಪೈಸೆ
ನೀರು ಪೂರೈಕೆ ಮತ್ತು ನೈರ್ಮಲ್ಯ- 3 ಪೈಸೆ
ಒಟ್ಟು- 100 ಪೈಸೆ (ಒಂದು ರೂಪಾಯಿ)
ಸರ್ಕಾರಕ್ಕೆ ಆದಾಯ ಹೇಗೆ ಬರುತ್ತೆ? (ಪೈಸೆಗಳಲ್ಲಿ)
ರಾಜ್ಯ ತೆರಿಗೆ ಆದಾಯ- 52 ಪೈಸೆ
ಸಾಲ- 27 ಪೈಸೆ
ಕೇಂದ್ರದ ತೆರಿಗೆ ಪಾಲು-13 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವ- 4 ಪೈಸೆ
ಒಟ್ಟು – 100 ಪೈಸೆ (ಒಂದು ರೂಪಾಯಿ)
ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?
ಶಿಕ್ಷಣ ಇಲಾಖೆ- 45286 ಕೋಟಿ (10%)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 34955 ಕೋಟಿ (8%)
ಇಂಧನ- 26896 ಕೋಟಿ (6%)
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್- 26735 ಕೋಟಿ (6%)
ನೀರಾವರಿ- 22181 ಕೋಟಿ (5%)
ನಗರಾಭಿವೃದ್ಧಿ ಮತ್ತು ವಸತಿ- 21405 ಕೋಟಿ (5%)
ಒಳಾಡಳಿತ ಮತ್ತು ಸಾರಿಗೆ- 20625 ಕೋಟಿ (5%)
ಆರೋಗ್ಯ ಮತ್ತು ಕುಟುಂಬ- 17473 ಕೋಟಿ (4%)
ಕಂದಾಯ- 17201 ಕೋಟಿ (4%)
ಸಮಾಜ ಕಲ್ಯಾಣ- 16955 ಕೋಟಿ (4%)
ಲೋಕೋಪಯೋಗಿ- 11841 ಕೋಟಿ (3%)
ಆಹಾರ-ನಾಗರಿಕ ಸರಬರಾಜು- 8275 ಕೋಟಿ (2%)
ಕೃಷಿ-ತೋಟಗಾರಿಕೆ- 7145 ಕೋಟಿ (2%)
ಪಶುಸಂಗೋಪನೆ-ಮೀನುಗಾರಿಕೆ- 3977 ಕೋಟಿ (1%)
ಇತರೆ- 1,49,857 ಕೋಟಿ (35%)
ಬಜೆಟ್ ಭಾಷಣ ಮುಕ್ತಾಯ
3 ಗಂಟೆ 25 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಸಿಎಂ
ಒಂದು ಗಾಜಿನ ಲೋಟ ನೀರು ಕುಡಿದ ಸಿದ್ದರಾಮಯ್ಯ
ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.
ಗುರಿ-ಒಲಿಂಪಿಕ್ ಪದಕ ಯೋಜನೆಯಡಿ ಒಲಿಂಪಿಕ್ಸ್ 2028 ಗೆ ತಯಾರಿ ಕೈಗೊಳ್ಳಲು ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ದಂತೆ ಪ್ರೋತ್ಸಾಹ ಧನ ವಿತರಣೆ. ಈ ವರ್ಷಕ್ಕೆ 6 ಕೋಟಿ ರೂ. ನೆರವು.
ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಹಾಗೂ ಬುಡಕಟ್ಟು ಜನಾಂಗದವರಿಗೆ ಕ್ರೀಡಾಕೂಟ ಆಯೋಜನೆಗೆ 2 ಕೋಟಿ ರೂ.
ಕೊಡಗು ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಹಾನಿಯಾಗಿರುವ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ
ದಕ್ಷಿಣ ಕನ್ನಡ, ವಿಜಯಪುರ, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಒಟ್ಟು 6 ಸೇತುವೆ ನಿರ್ಮಾಣಕ್ಕೆ ಅನುಮೋದನೆ
ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ 83 ಕೋಟಿ ರೂ. ಅನುದಾನ
ಗ್ರಾಪಂ ಗಳಲ್ಲಿ ಇ-ಸ್ವತ್ತು ಅಭಿಯಾನ
ಗ್ರಾಮ ಪಂಚಾತಿತಿಗಳಲ್ಲಿ ‘ಇ-ಸ್ವತ್ತು ಅಭಿಯಾನ’ ಆರಂಭ
ಪಂಚತಂತ್ರ ತಂತ್ರಾಂಶ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೂ ವಿಸ್ತರಣೆ. ಹಿರಿಯ ಅಧಿಕಾರಿಗಳಿಂದ ‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮ ಆರಂಭ
ನನ್ನ ವೃತ್ತಿ, ನನ್ನ ಆಯ್ಕೆ
ʻನನ್ನ ವೃತ್ತಿ, ನನ್ನ ಆಯ್ಕೆʼ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ
ಯುವನಿಧಿ ಫಲಾನುಭವಿ ಯುವಕರಿಗೆ Industry Linkage Cell ಅಡಿ ಭವಿಷ್ಯ ಕೌಶಲ್ಯ ತರಬೇತಿ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ
ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳ ಸ್ಥಾಪನೆ
ಮಧುಗಿರಿ, ಇಂಡಿ, ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ನೂತನ GTTC ಸ್ಥಾಪನೆ
80 ವರ್ಷ ಮೇಲ್ಪಟ್ಟ ಹಿರಿಯವರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ʻಅನ್ನ ಸುವಿಧಾʼ ಯೋಜನೆ 75 ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಮನೆಗಳಿಗೂ ವಿಸ್ತರಣೆ
ಪರಿಶಿಷ್ಟ ವರ್ಗಗಳ ಕಲ್ಯಾಣ
ಪರಿಶಿಷ್ಟ ಪಂಗಡದ 20 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರಾರಂಭ
78 ಬುಡಕಟ್ಟು ವಸತಿ ಶಾಲೆಗಳಲ್ಲಿ 7ನೇ ತರಗತಿ ಪ್ರಾರಂಭ. ಐದು ವಸತಿ ಶಾಲೆಗಳು 12ನೇ ತರಗತಿಯವರೆಗೆ ಮೇಲ್ದರ್ಜೆಗೆ
ರಾಜ್ಯ ಸಿವಿಲ್ ಸೇವೆಗಳಲ್ಲಿ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳ ಅಭ್ಯರ್ಥಿಗಳ ವಿಶೇಷ ನೇರ ನೇಮಕಾತಿಗೆ ಕ್ರಮ
37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆ ಗುರಿ
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಗೆ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು
ಕಾರ್ಮಿಕ ಇಲಾಖೆ
ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬಕ್ಕೆ 8 ಲಕ್ಷ ಪರಿಹಾರ
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ 31 ಜಿಲ್ಲೆಗಳಲ್ಲಿ ವಸತಿ ಶಾಲೆ
ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಸಾವನ್ನಪ್ಪಿದ್ರೆ 1.5 ಲಕ್ಷ ಪರಿಹಾರ
ಮೈಸೂರಲ್ಲಿ ಕುಸ್ತಿ, ವಾಲಿಬಾಲ್ ಅಕಾಡೆಮಿ ಸ್ಥಾಪಿಸಲು 2 ಕೋಟಿ ರೂ.
ಮೈಸೂರಲ್ಲಿ ಸ್ಟಾರ್ಟ್‌ಅಪ್ ಪಾರ್ಕ್
ಬನ್ನಿಮಂಟಪದಲ್ಲಿ ಹೊಸ ಸ್ಯಾಟ್‌ಲೈಟ್ ಬಸ್ ಸ್ಟ್ಯಾಂಕ್
ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 10,100 ಕೋಟಿ ಮೀಸಲ
ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ.
ಪತ್ರಕರ್ತರ ಮಾಶಾಸನ 15 ಸಾವಿರ ವರೆಗೆ ಹೆಚ್ಚಳ
ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ
ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ, ವೈದ್ಯಕೀಯ ಕಾಲೇಜು ಹಾಗೂ ಕೋಲಾರದಲ್ಲಿ ಪಿಪಿಪಿ ಆಧಾರದಲ್ಲಿ ‘ವೈದ್ಯಕೀಯ ಕಾಲೇಜು ಸ್ಥಾಪನೆ’
ರಾಜ್ಯದ 22 ವೈದ್ಯಕೀಯ ಕಾಲೇಜುಗಳಲ್ಲಿ ‘ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್’ಗಳ ಪ್ರಾರಂಭ
ರಾಯಚೂರಿನಲ್ಲಿ 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ
ವಕ್ಫ್ ಆಸ್ತಿ ಸಂರಕ್ಷಣೆಗೆ 150 ಕೋಟಿ
ಬಾದಾಮಿ, ಚಿತ್ರದುರ್ಗದಲ್ಲಿ ಟ್ರಾಮಾ ಕೇಸ್ ಸೆಂಟರ್
ಬಿಬಿಎಂಪಿ ವ್ಯಾಪ್ತಿಯ ಸುರಂಗ ಮಾರ್ಗ ರಸ್ತೆಗೆ ಅನುದಾನ ಘೋಷಣೆ
ಸುರಂಗ ಮಾರ್ಗದ ಯೋಜನೆಗೆ 19000 ಕೋಟಿ ರೂ. ಈ ಸಾಲಿನಲ್ಲಿ ಘೋಷಣೆ
ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ವೆಚ್ಚ ಮಾಡಲು ನಿರ್ಧಾರ
ಉತ್ತರ ದಕ್ಷಿಣ ಮತ್ತು ಪೂರ್ವ ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳ ನಿರ್ಮಾಣ
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೈಗೊಳ್ಳಲಾಗುವ 21 ಯೋಜನೆಗಳಿಗೆ 1,800 ಕೋಟಿ ಘೋಷಣೆ
500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ
ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50 ಸಾವಿರ ಪ್ರೋತ್ಸಾಹಧನ
ಮಹಿಳಾ ಸ್ವಸಹಾಯ ಸಂಘ ವ್ಯಾಪ್ತಿಗೆ ಇಂದಿರಾ ಕ್ಯಾಂಟೀನ್
ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ಹೊಣೆ
ಅಬಕಾರಿ ಇಲಾಖೆಗೆ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದ ಸರ್ಕಾರ
40 ಸಾವಿರ ಕೋಟಿ ಆದಾಯ ಸಂಗ್ರಹಣೆ ಟಾರ್ಗೆಟ್
ಕಳೆದ ಸಲ 38,500 ಕೋಟಿ ಟಾರ್ಗೆಟ್ ನೀಡಲಾಗಿತ್ತು. (ಆದ್ರೆ 36,500 ಕೋಟಿ ಮಾತ್ರ ಕಳೆದ ಬಾರಿ ಸಂಗ್ರಹ)
ಈ ಸಲ ಸುಮಾರು ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆ ಟಾರ್ಗೆಟ್
ಈ ಮೂಲಕ ಮದ್ಯದ ದರಗಳ ಏರಿಕೆಯ ಸುಳಿವು ನೀಡಿದ ಸರ್ಕಾರ
ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವ ಜನಾಂಗದವರಿಗೆ ನೇರ ನೇಮಕಾತಿ ಭಾಗ್ಯ
13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ,
ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು.
ಕನ್ನಡ ಸಿನಿಮಾಗಳ ಪ್ರೋತ್ಸಾಹಕ್ಕೆ ಸರ್ಕಾರಿ OTT
ರಾಜ್ಯದಲ್ಲಿ 100 ನಾಡಕಚೇರಿ ನಿರ್ಮಾಣ
ಬೆಂಗಳೂರಿಗೆ 9 ಸಾವಿರ ಬಸ್ ಸೇರ್ಪಡೆ
2 ವರ್ಷಗಳ ಮೆಟ್ರೋ ಹೆಚ್ಚುವರಿ ಮಾರ್ಗಗಳ ವಿಸ್ತರಣೆ
ನಮ್ಮ ಮೆಟ್ರೋ ದೇವನಹಳ್ಳಿ ವರೆಗೆ ವಿಸ್ತರಣೆ
ವರ್ತೂರು-ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ 234 ಕೋಟಿ
ಬೆಂಗಳೂರಿನ ಹಜ್ ಭವನದಲ್ಲಿ KSOU ಸ್ಥಾಪನೆ
2026 ಕ್ಕೆ ವಿಜಯಪುರದಲ್ಲಿ ಏರ್‌ಪೋರ್ಟ್ ಆರಂಭ
ಕಂಬಳ, ಎತ್ತಿನಬಂಡಿ ಓಟ, ಮಲ್ಲಕಂಬ ಸ್ಪರ್ಧೆಗಳಿಗೆ ಉತ್ತೇಜನ
ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್
ಜೈನ, ಬೌದ್ಧ, ಸಿಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ
ಸರ್ಕಾರಿ ಗುತ್ತಿಗೆಗಳಲ್ಲಿ 2b ವರ್ಗಕ್ಕೂ ಮೀಸಲಾತಿ ಘೋಷಣೆ
2 ಕೋಟಿ ಒಳಗಿನ ಕಾಮಗಾರಿಗಳಿಗೆ ಮೀಸಲಾತಿ
ಸಮುದಾಯದ ಹೆಸರು ಹೇಳದೆ 2b ಎಂದು ಉಲ್ಲೇಖಿಸಿರುವ ಸಿಎಂ
ಕೃಷಿ ಕ್ಷೇತ್ರಕ್ಕೆ ಕೊಡುಗೆ
ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ
ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ
ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ‘ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ’ ಸ್ಥಾಪನೆ
ಅರ್ಚಕರಿಗೆ ತಸ್ತೀಕ್ ಮೊತ್ತ ಹೆಚ್ಚಳ
ದೇವಾಲಯದ ಆಸ್ತಿ ಸಂರಕ್ಷಣೆಗೆ ಬರಲಿದೆ ಭೂ ವರಾಹ
ಒತ್ತುವರಿಯಾಗಿರುವ 328 ದೇವಾಲಯದ ಆಸ್ತಿ ಸಂರಕ್ಷಣೆಗೆ ಕ್ರಮ
ನಿವೃತ್ತಿ ಹೊಂದಿದ ಕುಸ್ತಿಪಟುಗಳ ಮಾಶಾಸನ ಹೆಚ್ಚಳ
ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 6 ಸಾವಿರ ರೂ. ಹೆಚ್ಚಳ
ರಾಷ್ಟ್ರೀಯ ಕುಸ್ತಿಪಟು- 5 ಸಾವಿರ ರೂ.ಗೆ ಹೆಚ್ಚಳ
ರಾಜ್ಯಮಟ್ಟದ ಕುಸ್ತಿ ಪಟು- 4500 ರೂ.ಗೆ ಹೆಚ್ಚಳ
ಬೀದಿಬದಿ ವ್ಯಾಪಾರಿಗಳಿಗೆ 1 ಲಕ್ಷ ಸಾಲಕ್ಕೆ ಸಹಾಯಧನ
ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ
ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ
ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ನರ್ಸಿಂಗ್ ಕಾಲೇಜು
ಕೋಲಾರದಲ್ಲಿ ವೈದ್ಯಕೀಯ ಕಾಲೇಜು
ಕರ್ನಟಕ ನಕ್ಸಲ್ ಮುಕ್ತ ರಾಜ್ಯ
ಬಜೆಟ್‌ನಲ್ಲಿ ಘೋಷಣೆ ಮಾಡಿದ ಸಿಎಂ
ನಕ್ಸಲ್ ನಿಗ್ರಹ ಪಡೆ ವಿಸರ್ಜಿಸುವ ಘೋಷಣೆ
ಗರ್ಭ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ
ರಾಜ್ಯಕ್ಕೂ ಬರಲಿದೆ ವಾಟರ್ ಮೆಟ್ರೋ
ಮಂಗಳೂರಿನಲ್ಲಿ ವಾಟರ್ ಮೆಟ್ರೋಗೆ ಪ್ಲ್ಯಾನ್
ಬಜೆಟ್‌ನಲ್ಲಿ ಪ್ರಸ್ತಾಪ
ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಆರಂಭ
ಬೆಂಗಳೂರಿಗೆ ಬಂಪರ್ ಗಿಫ್ಟ್
ಬೆಂಗಳೂರು ಅಭಿವೃದ್ಧಿ ಅನುದಾನ 7,000 ಕೋಟಿ ರೂ.ಗೆ ಏರಿಕೆ
ಟನಲ್ ಯೋಜನೆಗೆ 40 ಸಾವಿರ ಕೋಟಿ
ಮಹಿಳೆಯ ಸ್ವ ಉದ್ಯೋಗಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಅಕ್ಕಾ ಕೆಫೆ, ಕ್ಯಾಂಟಿನ್
ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು
ರಾಜ್ಯದಲ್ಲಿ 2,500 ಕೋಟಿ ವೆಚ್ಚದಲ್ಲಿ 500 ಹೊಸ ಪಬ್ಲಿಕ್ ಶಾಲೆಗಳ ನಿರ್ಮಾಣ
ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲು
ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ
ಎಸ್‌ಸಿ ಸಮುದಾಯದ ಉಪಯೋಜನೆಗೆ(ಎಸ್‌ಸಿಎಸ್‌ಪಿ) – 29,992 ಕೋಟಿ ರೂ
ಎಸ್‌ಟಿ ಸಮುದಾಯದ ಉಪಯೋಜನೆಗೆ(ಎಸ್‌ಟಿಪಿ) – 12,026 ಕೋಟಿ ರೂ ಅನುದಾನ
ಒಟ್ಟು ಈ ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ – 42,018 ಕೋಟಿ ರೂ.
ಸಿಎಂ ಬಜೆಟ್ ಓದಿನ ಮಧ್ಯೆ ಒಳ ಮೀಸಲಾತಿ ಕೊಡಲುವಂತೆ ಘೋಷಣೆ
ವೀಕ್ಷಕರ ಗ್ಯಾಲರಿಯಲ್ಲಿದ್ದ ದಲಿತಪರ ಸಂಘಟನೆಗಳ ಮುಖಂಡರಿಂದ ಘೋಷಣೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೊತ್ತದ ಹೊಸ ಯೋಜನೆಗಳನ್ನು KKRDB ಮೂಲಕ ಅನುಷ್ಠಾನ
ಬಯಲು ಸೀಮೆ, ಮಲೆನಾಡು, ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗೆ 83 ಕೋಟಿ ಅನುದಾನ
ಗಡಿ ಅಭಿವೃದ್ಧಿ ಪ್ರಾಧಿಕಾರವನ್ನ ಯೋಜನಾ ಇಲಾಖೆ ವ್ಯಾಪ್ತಿಗೆ ತರಲು ನಿರ್ಧಾರ
ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು 6 ದಿನಗಳಿಗೆ ವಿಸ್ತರಣೆ
ಮಹಿಳಾ ಸ್ವಸಹಾಯ ಸಂಘಗಳಿಂದ ಆಯ್ದ 50 ಕಡೆ ಶಿಶು ಪಾಲನೆಗಾಗಿ ವಾತ್ಯಲ್ಯ ಕೇಂದ್ರ ಸ್ಥಾಪನೆ
ಮೈಸೂರು ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ
120 ಕೋಟಿ ವೆಚ್ಚ
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ ಅನುಗ್ರಹ ಯೋಜನೆ
ಹಸು, ಕರುಗಳ ಸಾವಿನ ಪರಿಹಾರ ಧನ 10ರಿಂದ 15 ಸಾವಿರಕ್ಕೆ ಹೆಚ್ಚಳ
ಕುರಿ, ಮೇಕೆ ಮೃತಪಟ್ಟರೆ ಪರಿಹಾರ ಧನ 5ರಿಂದ 7.5 ಸಾವಿರಕ್ಕೆ ಹೆಚ್ಚಳ
ಕರಾವಳಿಯಲ್ಲಿ ಭೂಕುಸಿತ ತಡೆಗೆ ತಡೆಗೋಡೆ
5 ಸಾವಿರ ಸರ್ಕಾರಿ ಶಾಲೆಗಳಲ್ಲಿ LKG-UKG
ವನ್ಯಜೀವಿ ದಾಳಿಯಿಂದ ಮೃತಪಟ್ಟರೆ 20 ಲಕ್ಷ ಪರಿಹಾರ
ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗೆ ಹೆಸರು
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು
ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಕೆಳಗಿನ ಮಕ್ಕಳಿಗೆ HPV ಲಸಿಕೆ
ಆಯುಷ್ಮಾನ್ ಭಾರತದಡಿ 5 ಲಕ್ಷ ಚಿಕಿತ್ಸಾ ವೆಚ್ಚ
ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ
ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್ ನೀಡಲು ನಿರ್ಧಾರ
ಇ-ಹರಾಜಿನ ಮೂಲಕ ಪರವಾನಗಿ ನೀಡಲು ಕ್ರಮ
40 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ಅಬಕಾರಿ ಸ್ಲ್ಯಾಬ್ ಗಳನ್ನ ತರ್ಕಬದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆ
ಬಜೆಟ್‌ನಲ್ಲಿ ತೆರಿಗೆ ಸಂಗ್ರಹ ಗುರಿಯ ಪ್ರಸ್ತಾಪ
ವಾಣಿಜ್ಯ ತೆರಿಗೆ – 1,20,000 ಕೋಟಿ
ಅಬಕಾರಿ ತೆರಿಗೆ – 40,000 ಕೋಟಿ
ನೋಂದಣಿ ಮತ್ತು ಮುದ್ರಾಂಕ ಶುಲ್ಕ – 28,000 ಕೋಟಿ ರೂ
ಮೋಟಾರು ವಾಹನ ತೆರಿಗೆ – 15,000 ಕೋಟಿ ರೂ
ಇತರೆ ತೆರಿಗೆಗಳಿಂದ – 5,100 ಕೋಟಿ ಸಂಗ್ರಹ ಗುರಿ
ಅನ್ನಭಾಗ್ಯ ಅಕ್ಕಿ ನೀಡುವ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ
ಹೊಸ ನ್ಯಾಯಬೆಲೆ ಅಂಗಡಿಗಳು ಅವಶ್ಯಕತೆಗೆ ಅನುಗುಣವಾಗಿ ಓಪನ್
ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ಸಹಾಯ ಧನ ಹೆಚ್ಚಳ
ಅಂಗನವಾಡಿ ಸಹಾಯಕರಿಗೆ 750 ರೂ. ಸಹಾಯ ಧನ ಹೆಚ್ಚಳ
ಬಿಸಿಯೂಟ ತಯಾರಿಕರಿಗೆ 1 ಸಾವಿರ ಗೌರವ ಧನ ಹೆಚ್ಚಳ
ಪ್ರಾಥಮಿಕ, ಫ್ರೌಡಾ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು, ಉಪನ್ಯಾಸರಿಗೆ 2 ಸಾವಿರ ಗೌರವ ಧನ ಹೆಚ್ಚಳ
ಮದರಸಾದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ
SSLC ಪರೀಕ್ಷೆ ಬರೆಯಲು ಅವಕಾಶ
ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ
ಮೈಸೂರಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ
ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕದರ ನಿಗದಿ
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗೆ 200 ರೂ. ನಿಗದಿ
ಶಾಲಾ ಮಕ್ಕಳಿಗೆ ರಾಗಿ ಮಿಲ್ಟ್ ಯೋಜನೆ ವಿಸ್ತರಣೆ.
ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ನೀಡುತ್ತಿರೋ ಯೋಜನೆ
3 ದಿನಗಳಿಂದ 5 ದಿನ ರಾಗಿ ಹೆಲ್ತ್ ಮಾಲ್ಟ್ ವಿಸ್ತರಣೆ
100 ಕೋಟಿ ವೆಚ್ಚ, 25% ಸರ್ಕಾರದಿಂದ ಹಣ ಭರಿಸಲಾಗುತ್ತದೆ.
ಅಲ್ಪಸಂಖ್ಯಾತ ಸರಳ ವಿವಾಹಕ್ಕೆ 50 ಸಾವಿರ
ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ 319 ಕೋಟಿ
50 ಸಾವಿರ ರೈತರಿಗೆ ಸಹಾಯ ಧನ
ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯ ಧನ ಒದಗಿಸಲು 428 ಕೋಟಿ ಅನುದಾನ
ಈ ವರ್ಷ 5 ಸಾವಿರ ಕಿರು ಸಂಸ್ಕಾರಣಾ ಘಟಕ ಸ್ಥಾಪನೆ
12 ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು
ಈ ಬಾರಿಯೂ ಕೊರತೆ ಬಜೆಟ್ ಮಂಡನೆ
19,262 ಕೋಟಿ ರೂ. ಕೊರತೆ ಬಜೆಟ್
ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಹೈಟೆಕ್
ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ
ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ
ಈ ಯೋಜನೆ ಅಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ, ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ
ವೃತ್ತಿ ತೆರಿಗೆ ಏರಿಕೆ
200 ರೂ. ರಿಂದ 300 ರೂ.ಗೆ ವೃತ್ತಿ ತೆರಿಗೆ ಏರಿಕೆ
ವಾಣಿಜ್ಯ ತೆರಿಗೆಯ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ 1,20,000 ಕೋಟಿ ರೂ.
4,09,549 ಕೋಟಿ ಗಾತ್ರದ ಬಜೆಟ್
ಈ ಬಾರಿಯೂ ಅತೀ ಹೆಚ್ಚು ಸಾಲದ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ
ಈ ಬಾರಿ 1,16,000 ಕೋಟಿ ರೂ. ಸಾಲ ಮಾಡುವುದಾಗಿ ಪ್ರಸ್ತಾಪ
2025-26ನೇ ಸಾಲಿನ ಬಜೆಟ್ ಮಂಡನೆ ಆರಂಭ
ತಮ್ಮ 16ನೇ ಆಯವ್ಯಯ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ
ಸಿಎಂ ಅವರನ್ನ ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಹೋದ ಸಂತೋಷ್ ಲಾಡ್
ಸಂಪುಟ ಸಭೆ ಮುಕ್ತಾಯ
ಬಜೆಟ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
ಈ ಬಾರಿಯ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರೂ.
ಸರ್ಕಾರದ ಶೂನ್ಯ ಸಾಧನೆ, ವೈಫಲ್ಯಗಳ ವಿರುದ್ಧ ಬಿಜೆಪಿ-ಜೆಡಿಎಸ್ ಧರಣಿ
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕರಿಂದ ಪ್ರತಿಭಟನೆ
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ..
ನಿಂತು ಬಜೆಟ್ ಬ್ಯಾಗ್ ತೋರಿಸಿ ಆನಂತರ ವ್ಹೀಲ್ ಚೇರ್‌ನಲ್ಲಿ ಕ್ಯಾಬಿನೆಟ್‌ಗೆ ತೆರಳಿದ ಸಿಎಂ
ಬಜೆಟ್ ಪ್ರತಿ ಹಿಡಿದು ವಿಧಾನಸೌಧಕ್ಕೆ ಸಿಎಂ ಆಗಮನ
ಸಿಎಂ ಸಿದ್ದರಾಮಯ್ಯಗೆ ಬಜೆಟ್ ಪ್ರತಿ ಹಸ್ತಾಂತರ
2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು ದಾಖಲೆಯ 16ನೇ ಬಜೆಟ್. ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಸಿಎಂಗೆ ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಹಸ್ತಾಂತರಿಸಿದ್ದಾರೆ.