– ಗ್ಯಾರಂಟಿ ಸವಾಲು ಮಧ್ಯೆ ಇಂದು ಬಜೆಟ್
– ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಸಾಧ್ಯತೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದು ಬೆಳಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಆಗಲಿದೆ.
Advertisement
ಬೆಳಗ್ಗೆ 9:30 ಕ್ಕೆ ತಮ್ಮ ನಿವಾಸದಿಂದ ಬಜೆಟ್ ಮಂಡನೆಗೆ ಸಿಎಂ ಹೊರಡಲಿದ್ದಾರೆ. 9:45 ಕ್ಕೆ ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸಲಿದ್ದಾರೆ. 10 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು 10:10 ನಿಮಿಷಕ್ಕೆ ಸರಿಯಾಗಿ ಸದನಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.
Advertisement
ಬೆಳಗ್ಗೆ 10:15 ಕ್ಕೆ ಸರಿಯಾಗಿ ಬಜೆಟ್ ಓದಲು ಸಿಎಂ ಆರಂಭಿಸಲಿದ್ದಾರೆ. ಬೆಳಗ್ಗೆ 10:30 ರಿಂದ ರಾಹುಕಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ 10:15 ರಿಂದ ಬಜೆಟ್ ಓದಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ನಿಂತುಕೊಂಡೆ ಬಜೆಟ್ ಮಂಡಿಸುತ್ತಾರೆ. ಮಂಡಿನೋವಿನ ಸಮಸ್ಯೆ ಇರುವುದರಿಂದ ಆನಂತರ ಕುಳಿತುಕೊಂಡು ಬಜೆಟ್ ಓದಲಿದ್ದಾರೆ. ಅಂದಾಜು 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.
Advertisement
ರಾಜ್ಯದ ಜನತೆಗೆ ಸಿದ್ದರಾಮಯ್ಯರ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಆದರೆ, ರಾಜ್ಯದ ಮಹಿಳೆಯರು ಮಾತ್ರ ಒಂದೇ ಡಿಮ್ಯಾಂಡ್ ಇಡುತ್ತಿದ್ದಾರೆ. ಅದೇ ಗೃಹಲಕ್ಷ್ಮಿ ಹಣವನ್ನು ಸಕಾಲಕ್ಕೆ ಕೊಡಿ ಎಂದು. ಬಜೆಟ್ ಬಗ್ಗೆ ಇಷ್ಟೇ ನಿರೀಕ್ಷೆ. ಮೊದಲು ಗೃಹಲಕ್ಷ್ಮಿ ಗ್ಯಾರಂಟಿಗೆ ದಿನಾಂಕ ಫಿಕ್ಸ್ ಮಾಡಿ. ನಿಗದಿತ ದಿನಾಂಕದೊಳಗೆ ಗೃಹಲಕ್ಷ್ಮಿ ದುಡ್ಡು ಹಾಕಿ ಎಂಬುದು ಬೆಂಗಳೂರು ಮಹಿಳೆಯರ ಆಗ್ರಹ.
Advertisement
16 ಬಾರಿಗೆ ಸಿದ್ದರಾಮಯ್ಯ ಬಜೆಟ್
ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಕಳೆದ ಬಾರಿ 3.71 ಲಕ್ಷ ಕೋಟಿ ಬಜೆಟ್ ಗಾತ್ರ ಇತ್ತು. ಈ ಬಾರಿಯೂ ಕೊರತೆ ಬಜೆಟ್ ಮಂಡನೆ ಸಾಧ್ಯತೆ ಇದೆ. ಅಂದಾಜು 30 ಸಾವಿರ ಕೋಟಿ ರೂ. ಕೊರತೆ ಬಜೆಟ್ ಆಗಬಹುದು. ಈ ಬಾರಿ ಸಾಲದ ಪ್ರಮಾಣವೂ ಹೆಚ್ಚಳ ಸಾಧ್ಯತೆ ಇದೆ. ಅಂದಾಜು 1.25 ಲಕ್ಷ ಕೋಟಿ ಸಾಲ ಪ್ರಸ್ತಾಪವಾಗಬಹುದು. ಕಾಲು ನೋವಿನಿಂದ ಸಿಎಂ ಸಿದ್ದರಾಮಯ್ಯ ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊದಲು ಬಾರಿ ಕೂತು ಬಜೆಟ್ ಮಂಡನೆಯಾಗಲಿದೆ. ಅರುಣ್ ಜೆಟ್ಲಿ ಅವರು 2016ರಲ್ಲಿ ಕೂತು ಬಜೆಟ್ ಮಂಡಿಸಿದ್ದರು.
ಸಿದ್ದರಾಮಯ್ಯ ಬಜೆಟ್ ಮಂಡನೆ ವಿಶೇಷ
* ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಹೆಗ್ಗಳಿಕೆ ಸಿದ್ದರಾಮಯ್ಯರದ್ದು
* 5 ಗ್ಯಾರಂಟಿಗಳು ಯಥಾಸ್ಥಿತಿ ಮುಂದುವರಿಕೆ
* ಗ್ಯಾರಂಟಿಗಳಿಗೆ 60-65 ಸಾವಿರ ಕೋಟಿ ರೂ. ಮೀಸಲು ಸಾಧ್ಯತೆ
* ವಿಧಾನಸಭಾ ಕ್ಷೇತ್ರಗಳಿಗೆ ಡೆವಲಪ್ಮೆಂಟ್ ಪ್ಯಾಕೇಜ್ ಸಾಧ್ಯತೆ
* ಶಾಸಕರ ಪ್ರದೇಶಾಭಿವೃದ್ಧಿ ನಿಧಿಯೂ ಹೆಚ್ಚಳ ಸಾಧ್ಯತೆ
* ಸದ್ಯ 2 ಕೋಟಿ ಇರುವ ಶಾಸಕರ ಪ್ರದೇಶಾಭಿವೃದ್ಧಿ ನಿಧಿ
* ಬೆಂಗಳೂರು ಅಭಿವೃದ್ಧಿಗಾಗಿ ವಿಶೇಷ ಅನುದಾನ ಘೋಷಣೆ ಸಾಧ್ಯತೆ
* ರಾಜಸ್ವ ಸಂಗ್ರಹ ಹೆಚ್ಚಳಕ್ಕಾಗಿ ಸರ್ಕಾರ ಮುತುವರ್ಜಿ
* ಪೆಟ್ರೋಲ್, ಡೀಸೆಲ್ ಸೆಸ್ ಸೇರಿ ಕೆಲ ತೆರಿಗೆಗಳ ಪರಿಷ್ಕರಣೆ ಸಾಧ್ಯತೆ
* ಅಬಕಾರಿ ವಲಯದಲ್ಲಿ ಹೆಚ್ಚಿನ ಸುಂಕ ವಸೂಲಿಗೆ ಹಿಂದೇಟು ಸಾಧ್ಯತೆ
* ಎಲ್ಲರಿಗೂ ಸೂರು ಯೋಜನೆಯಡಿ ಮನೆಗಳ ನಿರ್ಮಾಣ ಘೋಷಣೆ ಸಾಧ್ಯತೆ
* ಅಮೃತ ಕುರಿಗಾಹಿ ಯೋಜನೆ ಮರು ಜಾರಿ ಮಾಡುವ ಸಾಧ್ಯತೆ
* ಮಹಿಳಾ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ ಯೋಜನೆ ಮುಂದುವರಿಕೆ ಸಾಧ್ಯತೆ
* ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸಾಧ್ಯತೆ
* ವಿಧವಾ ವೇತನ, ವೃದ್ಧಾಪ್ಯ ವೇತನ ಹೆಚ್ಚಳ ಸಾಧ್ಯತೆ
* ಶಾಲಾ ಹಂತದಲ್ಲಿ ಸ್ಕಿಲ್ ತರಬೇತಿ ನೀಡಲು ಹೊಸ ಕಾರ್ಯಕ್ರಮ ಸಾಧ್ಯತೆ