ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 15 ಬಾರಿ ಬಜೆಟ್ ಮಂಡಿಸಿ ರಾಜ್ಯ ರಾಜಕೀಯದ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ. ಒಟ್ಟು 3,71,383 ಕೋಟಿ ರೂ. ಗಾತ್ರದ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ
ಬಜೆಟ್ ಗಾತ್ರದ ಪೈಕಿ ಒಟ್ಟು ಸ್ವೀಕೃತಿ 3,68,674 ಕೋಟಿ ರೂ., ರಾಜಸ್ವ ಸ್ವೀಕೃತಿ 2,63,178 ಕೋಟಿ ರೂ.ಗಳಿದ್ದು, ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?
Advertisement
Advertisement
1 ರೂಪಾಯಿ ಹೋಗಿದ್ದು ಎಲ್ಲಿಗೆ?
(ಪೈಸೆಗಳಲ್ಲಿ ನೀಡಲಾಗಿದೆ)
Advertisement
* ನೀರು ಪೂರೈಕೆ ಮತ್ತು ನೈರ್ಮಲ್ಯ – 3
* ಸಾಲ ತೀರಿಕೆ – 18
* ಇತರ ಸಾಮಾನ್ಯ ಸೇವೆಗಳು – 17
* ಸಮಾಜ ಕಲ್ಯಾಣ – 15
* ಇತರ ಆರ್ಥಿಕ ಸೇವೆಗಳು – 15
* ಕೃಷಿ ಮತ್ತು ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ – 14
* ಶಿಕ್ಷಣ – 11
* ಆರೋಗ್ಯ – 4
* ಇತರ ಸಾಮಾಜಿಕ ಸೇವೆಗಳು – 3
Advertisement
1 ರೂಪಾಯಿ ಬಂದಿದ್ದು ಎಲ್ಲಿಂದ?
(ಪೈಸೆಗಳಲ್ಲಿ ನೀಡಲಾಗಿದೆ)
* ರಾಜ್ಯದ ತೆರಿಗೆಯೇತರ ರಾಜಸ್ವದಿಂದ – 4
* ರಾಜ್ಯ ತೆರಿಗೆ ಆದಾಯದಿಂದ – 52
* ಸಾಲದಿಂದ – 28
* ಕೇಂದ್ರ ತೆರಿಗೆ ಪಾಲಿನಿಂದ – 12
* ಕೇಂದ್ರ ಸರ್ಕಾರದ ಸಹಾಯಾನುಧಾನ – 4
ರಾಜ್ಯದ ಸ್ವಂತ ತೆರಿಗೆಗಳ ವಿವರ (ಕೋಟಿ ರೂ.ಗಳಲ್ಲಿ)
* ಮೋಟಾರು ವಾಹನ ತೆರಿಗೆ – 13,000 (7%)
* ನೋಂದಣಿ ಮತ್ತು ಮುದ್ರಾಂಕ – 26,000 (14%)
* ರಾಜ್ಯ ಅಬಕಾರಿ – 38,525 (20%)
* ವಾಣಿಜ್ಯ ತೆರಿಗೆಗಳು – 1,10,000 (58%)
* ಇತರೇ – 2,368 (1%)