ಬೆಂಗಳೂರು: ರಾಜ್ಯದಲ್ಲಿ ನೈಟ್‍ಲೈಫ್ ಮತ್ತಷ್ಟು ರಂಗೇರಲಿದೆ. ಇದರ ಮುನ್ಸೂಚನೆಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ (Karnataka Budget 2024) ನೀಡಿದ್ದಾರೆ.
ಬೆಂಗಳೂರು (Bengaluru) ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ಸಮಯವನ್ನು ಹೆಚ್ಚಿಸಲಾಗಿದೆ. ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ನಿಬರ್ಂಧವನ್ನು ಬೆಳಗಿನ ಜಾವ 1:00 ಗಂಟೆಯವರೆಗೆ ವಿಸ್ತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದನ್ನೂ ಓದಿ: Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ
Advertisement
Advertisement
ಬಿಬಿಎಂಪಿ (BBMP) ಸೇರಿ ರಾಜ್ಯದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ (Shivamogga), ತುಮಕೂರು, ವಿಜಯಪುರ ಮಹಾನಗರಪಾಲಿಕೆಗಳಿವೆ. ಈ ಎಲ್ಲಾ ಮಹಾನಗರ ವ್ಯಾಪ್ತಿಗಳಲ್ಲಿ ಇನ್ನೂ ಮುಂದೆ ರಾತ್ರಿ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಇದನ್ನೂ ಓದಿ: ನಾವು ಮನುಜರು ಹೆಸರಿನಲ್ಲಿ ವಾರಕ್ಕೆ ಎರಡು ಗಂಟೆ ಶಾಲಾ ಕಾಲೇಜುಗಳಲ್ಲಿ ವಿಮರ್ಶೆ, ಸಂವಾದ – ಶಿಕ್ಷಣಕ್ಕೆ ಸಿಕ್ಕಿದ್ದೇನು?