ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಟನಲ್ (Tunnel) ನಿರ್ಮಾಣ ಮಾಡೋ ಕನಸು ಕಂಡಿದ್ರು. ಆದರೆ ಬಜೆಟ್ (Karnataka Budget 2023) ನಲ್ಲಿ ಟನಲ್ ಬಗ್ಗೆ ಪ್ರಸ್ತಾವೇ ಇಲ್ಲ. ಈ ಮೂಲಕ ಸಿದ್ದರಾಮಯ್ಯ ಅವು ಡಿಕೆ ಶಿವಕುಮಾರ್ ಕನಸಿಗೆ ನೀರೆರಚಿದ್ದಾರೆ
ಹೌದು. ಬ್ರಾಂಡ್ ಬೆಂಗಳೂರು (Brand Bengaluru) ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ನಾನಾ ಯೋಜನೆಗಳನ್ನ ಹಾಕಿಕೊಳ್ತಾ ಇದೆ. ಅದರಲ್ಲೂ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹಲವಾರು ಯೋಜನೆಗಳನ್ನ ಹಾಕಿಕೊಳ್ಳುತ್ತಿದ್ದಾರೆ. ಕಸದ ಸಮಸ್ಯೆ ನಿವಾರಣೆ, ರಸ್ತೆ ಗುಂಡಿ ನಿವಾರಣೆ ಮತ್ತು ಟ್ರಾಫಿಕ್ ಸಮಸ್ಯೆ (Traffic Problem) ನಿವಾರಣೆ ಹಲವು ಯೋಜನೆ ಹಾಕಿಕೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ರು. ಆದರೆ ಬಜೆಟ್‍ನಲ್ಲಿ ಟನಲ್ ನಿರ್ಮಾಣದ ಪ್ರಸ್ತಾವೇ ಇಲ್ಲ. 50 ಕಿಮೀ ಉದ್ದದ ಸುರಂಗ ನಿರ್ಮಾಣಕ್ಕೆ ಎರಡು ಹಂತದಲ್ಲಿ ನಿರ್ಮಾಣ ಮಾಡೋ ಪ್ಲ್ಯಾನ್ ಮಾಡಿದ್ರು. 22 ಸಾವಿರ ಕೋಟಿ ವೆಚ್ಚ ಆಗ್ತಿತ್ತು. ಆದರೆ ಟನಲ್ ಪ್ಲ್ಯಾನ್ ಬಿಟ್ಟು ವೈಟ್ ಟಾಪಿಂಗ್ ಮೊರೆ ಹೋಗಿದ್ದಾರೆ.
ಈಗಾಗಲೇ ನಗರದಲ್ಲಿ ವೈಟ್ ಟ್ಯಾಪಿಂಗ್ (White Taping Road) ರಸ್ತೆಗಳು ಹಲವು ಕಡೆ ನಿರ್ಮಾಣ ಆಗಿವೆ. ವೈಟ್ ಟ್ಯಾಪಿಂಗ್ ಗುಂಡಿಮುಕ್ತ ರಸ್ತೆ ಆಗಬಹುದು. ಆದರೆ ಟ್ರಾಫಿಕ್ ಸಮಸ್ಯೆ ನಿವಾರಣೆ ಇದರಿಂದ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ 100 ಕಿಮೀ ವೈಟ್ ಟ್ಯಾಪಿಂಗ್ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ರಸ್ತೆಗಳ ಅಭಿವೃದ್ಧಿ ಆಗಲಿದೆ. ಕಾಮಗಾರಿಯಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಜೊತೆಗೆ ವಾಹನ ಸವಾರರಿಗೆ ಕಿರಿ ಕಿರಿ ಆಗಲಿದೆ. ಟನಲ್ ನಿರ್ಮಾಣ ಐದು ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ವೈಟ್‍ಟಾಪಿಂಗ್ ಮೂರ್ನಾಲ್ಕು ತಿಂಗಳಲ್ಲೆ ಮುಗಿಯಲಿದ್ದು ಸರ್ಕಾರ ವೈಟ್ ಟಾಪಿಂಗ್ ನಿರ್ಮಾಣದಿಂದ ಮತ್ತೆ ಕಿರಿ ಕಿರಿ ಸಾಧ್ಯತೆ. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?
ಬೆಂಗಳೂರಿಗೆ ಬಜೆಟ್‍ನಲ್ಲಿ ದೊಡ್ಡ ಪ್ರಮಾಣದ ಯೋಜನೆಯನ್ನ ಘೋಷಿಸಿಲ್ಲ. ಕೇವಲ ವೈಟ್ ಟಾಪಿಂಗ್ ಬಿಟ್ರೆ ಬೇರೇನೂ ಇಲ್ಲ ಎಂದು ಬಿಜೆಪಿ (BJP) ಕಿಡಿಕಾರಿದೆ. ಒಟ್ಟಾರೆ ಸುರಂಗ ರಸ್ತೆ ನಿರ್ಮಾಣ ಮಾಡೋದಕ್ಕೆ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡ್ತಾ ಇದ್ರು. ಆದರೆ ಬಜೆಟ್ ಪ್ರಸ್ತಾಪ ಇಲ್ಲ. ಮುಂದಿನ ದಿನಗಳಲ್ಲಿ ಟನಲ್ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ತಾರಾ ಕಾದು ನೋಡಬೇಕಿದೆ. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?
Web Stories